ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿ ಗ್ರಾಮದಿಂದಒಂದು ಕಿ.ಮೀ. ಅಂತರದಲ್ಲಿರುವ ಶ್ರೀ ಶಂಭುಲಿಂಗ ಕ್ಷೇತ್ರ ಮಹಾಮಹಿಮ ಶ್ರೀ ನಿಜಗುಣಶಿವಯೋಗಿಗಳು ಅನುಷ್ಠಾನಗೊಂಡು ಜಾಗೃತಗೊಳಿಸಿದ ಸುಕ್ಷೇತ್ರ. ಇಂತಹ ಕ್ಷೇತ್ರದಸಮೀಪದಲ್ಲಿ ಸ್ಥಾಪನೆಯಾಗಿರುವ ಶ್ರೀ ಗುರು ರಾಮಯೋಗೀಶ್ವರ ಮಠವು ಕರ್ತೃಗುರುಗಳಾದ ಶ್ರೀ ಗುರು ರಾಮಯೋಗೀಶ್ವರರ ಹೆಸರಿನಿಂದಲೇ ಗುರುತಿಸಿಕೊಂಡು ಬಂದಿದೆ.ಕರ್ತೃಗುರುಗಳು ಮೈಸೂರು ಸಮೀಪದ ಗೊರೂರು ಗ್ರಾಮದಿಂದ ಸಂಚಾರಹೊರಟು, ಪಾಂಡವಪುರದ ಹತ್ತಿರದ ಬೇಬಿ ಬೆಟ್ಟದಲ್ಲಿ ಅನುಷ್ಠಾನ ಮಾಡಿ, ಅಲ್ಲಿ ಕೆಲಕಾಲನೆಲೆನಿಂತು ಮುಂದೆ ಸಂಚಾರದಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದಾರೆ. ಇಲ್ಲಿಗೆ ಆಗಮಿಸಿದ ಗುರುಗಳುಶ್ರೀ ನಿಜಗುಣ ಶಿವಯೋಗಿಗಳ ಗವಿಯಲ್ಲಿ ಅನುಷ್ಠಾನ ಕೈಗೊಂಡು ಬಂದ ಭಕ್ತರಿಗೆಸನ್ಮಂಗಳಗಳನ್ನು ಕರುಣಿಸಿ ಮಾರ್ಗದರ್ಶನ ಮಾಡಿದ್ದರು. ಅಲ್ಲದೇ ಅಂದಿನ ಮೈಸೂರಿನಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಗುರುಗಳಾಗಿದ್ದರು ಎಂಬುದಾಗಿಯೂ ಹೇಳಲಾಗುತ್ತಿದ್ದುಇಲ್ಲಿಯೇ ಲಿಂಗೈಕ್ಯರಾಗಿದ್ದಾರೆ.ಕರ್ತೃಗಳ ನಂತರದ ಪರಂಪರೆಯಲ್ಲಿ ಶ್ರೀ ಚನ್ನಬಸಪ್ಪ ಸ್ವಾಮಿಗಳು, ಶ್ರೀ ಕಲ್ಲುಮಳ್ಳಿಲಿಂಗಪ್ಪ ಸ್ವಾಮಿಗಳು, ಶ್ರೀ ಸಿದ್ದಲಿಂಗ ಸ್ವಾಮಿಗಳು, ಶ್ರೀ ಗುರುಲಿಂಗ ಸ್ವಾಮಿಗಳು ಹಾಗೂಹಿಂದಿನ ಗುರುಗಳಾದ ಶ್ರೀ ನಾಗಪ್ಪ ಸ್ವಾಮಿಗಳನ್ನು ಹೆಸರಿಸಲಾಗಿದ್ದು ಎಲ್ಲಾ ಶ್ರೀಗಳು ತಮ್ಮಕಾಲಾವದಿಯಲ್ಲಿ ಶ್ರೀಮಠದ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಹಿಂದಿನ ಗುರುಗಳು 1995ರಅಕ್ಟೋಬರ್‍ನಲ್ಲಿ ಲಿಂಗೈಕ್ಯರಾಗಿದ್ದು ಈಗಿನ ಶ್ರೀಗಳು ಅವರಿರುವಾಗಲೇ ಶ್ರೀಮಠದಉತ್ತರಾಧಿಕಾರಿಗಳಾಗಿ ನೇಮಕವಾಗಿದ್ದರು.ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ಇಮ್ಮಡಿ ಗುರುಲಿಂಗ ಸ್ವಾಮಿಗಳು 1995ರಅಕ್ಟೋಬರ್ 25ರಂದು ಶ್ರೀಮಠದ ಪಟ್ಟಕ್ಕೆ ಬಂದಿದ್ದು ಶ್ರೀ ಮಠದ ಸರ್ವಾಂಗೀಣಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಶ್ರೀಗಳು ಬಂದ ಮೇಲೆ ಶ್ರೀ ನಿಜಗುಣ ಶಿವಯೋಗಿಗಳಗವಿಯನ್ನು ಜೀರ್ಣೋದ್ದಾರಗೊಳಿಸಿ ಜೊತೆಗೆ ಶ್ರೀಮಠದಲ್ಲಿ ಅನೇಕ ಅಭಿವೃದ್ದಿಕಾರ್ಯಗಳನ್ನು ಕೈಗೊಂಡಿದ್ದಾರೆ. ಶ್ರೀಮಠದಲ್ಲಿ ಪ್ರಸಾದನಿಲಯವನ್ನು ನಿರ್ಮಿಸಿರುವಶ್ರೀಗಳು ಮಠದ ಸುತ್ತಾ ಕಾಂಪೌಂಡನ್ನು ನಿರ್ಮಿಸಿದ್ದಾರೆ.
Swamiji
Swamiji Name :
ಶ್ರೀ. ಷ.ಬ್ರ. ಇಮ್ಮಡಿ ಗುರುಲಿಂಗ ಸ್ವಾಮಿಗಳು
Date of Birth :
19-03-1979
Place :
ತುಂಬ್ಲ, ಟಿ.ನರಸೀಪುರ ತಾ||
Pattadikara :
25-10-1995
Photo :
Programs
ಲಿಂ|| ಷ.ಬ್ರ. ಶ್ರೀ ಗುರುರಾಮೇಶ್ವರ ಸ್ವಾಮಿಗಳ ಪುಣ್ಯಾರಾಧನೆ
ಶಿವರಾತ್ರಿಗೆ ವಿಶೇಷ ಪೂಜೆ, ಭಜನೆ ಯುಗಾದಿ ಪಾಡ್ಯಕ್ಕೆ ಪ್ರವಚನ
Photos
Full Address Kannada
ಶ್ರೀ ಗುರು ರಾಮಯೋಗೀಶ್ವರ ಮಠ
ಶ್ರೀ ಶಂಭುಲಿಂಗ ಕ್ಷೇತ್ರ, ಚಿಲಕವಾಡಿ - 571 442
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ