Shree Guru Mukappa Shivayogi Matha

Shree Guru Mukappa Shivayogi Matha Claimed

ಶ್ರೀ ಗುರು ಮೂಕಪ್ಪ ಶಿವಯೋಗಿ ಮಠ

Average Reviews

Description

ಶ್ರೀ ಗುರು ಮೂಕಪ್ಪ ಶಿವಯೋಗಿ ಮಠ

ಕರ್ತೃ ಪೂಜ್ಯ ಶ್ರೀ ಗುರು ಮೂಕಪ್ಪ ಶಿವಯೋಗಿಗಳು

ಹಿರೇಕೆರೂರು ತಾಲ್ಲೂಕಿನ ತಿಪ್ಪಾಯಿಕೊಪ್ಪ ಗ್ರಾಮವು ತಾಲ್ಲೂಕು ಕೇಂದ್ರದಿಂದ 11ಕಿ.ಮೀ. ದೂರದಲ್ಲಿದ್ದು ಊರ ಹೊರಗಿನ ಕುಮದ್ವತಿ ನದಿ ದಂಡೆಯಲ್ಲಿ ಶ್ರೀ ಗುರು ಮೂಕಪ್ಪಶಿವಯೋಗಿ ಮಠವು ಅಸ್ತಿತ್ವದಲ್ಲಿದೆ. ಪೂಜ್ಯ ಶ್ರೀ ಗುರು ಮೂಕಪ್ಪ ಶಿವಯೋಗಿಗಳುಶ್ರೀಮಠದ ಕತೃಗುರುಗಳಾಗಿದ್ದು ಅವರ ಹೆಸರಿನಿಂದಲೇ ಮಠ ಮುನ್ನಡೆದಿದೆ.ಕರ್ತೃಗುರುಗಳಾದ ಶ್ರೀಗುರು ಮೂಕಪ್ಪ ಶಿವಯೋಗಿಗಳು ಲೋಕಸಂಚಾರಿಗಳಾಗಿದ್ದು ಅಂಕಲಗಿಯ ಶ್ರೀ ಅಡವಿ ಶಿವಯೋಗಿಗಳು ಹಾಗೂ ಗರಗದ ಶ್ರೀ ಮಡಿವಾಳಮಹಾಸ್ವಾಮಿಗಳ ಸೇವೆ ಮಾಡಿ ಅವರಿಂದ ಅನುಗ್ರಹ ಪಡೆದು ಮಾಸೂರು ಸಿದ್ದಪ್ಪನ ಗುಡ್ಡದತುದಿಯಲ್ಲಿ ಇರುವ ಗವಿಯಲ್ಲಿ ತಪಸ್ಸು ಮಾಡುತ್ತಿದ್ದಾಗ ಮಾಸೂರಿನ ಹಿರಿಯ ಭಕ್ತರ ಭಕ್ತಿಗೆಮಣಿದ ಶ್ರೀಗಳು ಮಾಸೂರು ಸಮೀಪದ ತಿಪ್ಪಾಯಿಕೊಪ್ಪದ ಹೊರಭಾಗದಲ್ಲಿರುವ ಶ್ರೀಮಲ್ಲೇಶ್ವರ ದೇವಸ್ಥಾನದ ಸಮೀಪ ನೆಲೆಸಿ ಶ್ರೀಕ್ಷೇತ್ರವನ್ನು ಜಂಗಮಕ್ಷೇತ್ರವನ್ನಾಗಿ ಮಾಡಿದರು.ಇಂತಹ ಪುಣ್ಯಭೂಮಿಯಲ್ಲಿ ಸ್ಥಾಪಿಸಿದ ಮಠಕ್ಕೆ 1992ರಲ್ಲಿ ಪಟ್ಟಾಧಿಕಾರವಹಿಸಿಕೊಂಡ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ವಿರೂಪಾಕ್ಷ ಸ್ವಾಮಿಗಳು ಶಿವಯೋಗಮಂದಿರದಲ್ಲಿ ವಚನ, ವೇದ, ಸಂಸ್ಕøತ, ಸಾಹಿತ್ಯಗಳನ್ನು ಅಭ್ಯಸಿಸಿ ವಿದ್ವತ್ ಸಂಪಾದಿಸಿದ್ದಾರೆ.ಶ್ರೀ ವಿರೂಪಾಕ್ಷ ಸ್ವಾಮಿಗಳು ಮಠಕ್ಕೆ ನಿಯುಕ್ತಿಗೊಂಡಾಗ ಇಲ್ಲಿನ ವ್ಯವಸ್ಥೆಸರಿಯಿರಲಿಲ್ಲ. ಇವರು ಬಂದ ಮೇಲೆ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿ ಭಕ್ತರನ್ನುಶ್ರೀಮಠಕ್ಕೆ ಸೆಳೆದರು. ನಂತರದಲ್ಲಿ ಶ್ರೀಮಠವನ್ನು ಭಕ್ತರ ಸಹಕಾರದೊಂದಿಗೆ ಒಂದುಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಹಾಗೆಯೇ ಕುಮದ್ವತಿ ನದಿಯದಂಡೆಗೆ ತಡೆಗೋಡೆಯನ್ನು ನಿರ್ಮಿಸುವುದರೊಂದಿಗೆ ಶ್ರೀಮಠದ ಮುಂದಿನ ಆವರಣದಲ್ಲಿ16 ಲಿಂಗಗಳನ್ನು ಪ್ರತಿಷ್ಠಾಪಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.ಶ್ರೀಗಳು ಮಠದ ಅಧಿಕಾರವನ್ನು ವಹಿಸಿಕೊಂಡ ಮೇಲೆ ಮಠವು ಸರ್ವಾಂಗೀಣವಾಗಿ ಅಭಿವೃದ್ಧಿಗೊಂಡಿದೆ. ಹಾಗೆಯೇ ಶ್ರೀಮಠದ ಧಾರ್ಮಿಕ ಹಾಗೂ ಸಾಂಸ್ಕøತಿಕಕಾರ್ಯಕ್ರಮಗಳು ಹೆಚ್ಚಾಗಿವೆ. ಶ್ರೀಗಳು ಶ್ರೀಮಠವನ್ನು ಸಾಮಾಜಿಕವಾಗಿ ಗುರುತಿಸುವಂತೆಮಾಡಿರುವುದಲ್ಲದೆ, ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ ಹಾಕಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ವಿರೂಪಾಕ್ಷ ಸ್ವಾಮಿಗಳು
Date of Birth :
6-3-1951
Place :
ಚಿಕ್ಕಮರಳಿ ಹಳ್ಳಿ, ಸವಣೂರು ತಾ||
Pattadikara :
20-2-1992
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ಶಿವಾನುಭವ ಗೋಷ್ಠಿ.
ಮಾರ್ಚ್ 6ರಂದು ಗುರು ಪೂರ್ಣಿಮ ಪ್ರಯುಕ್ತ ಗುರು ವಂದನಾ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹಗಳು.
ಜೇಷ್ಠ ಮಾಸದಲ್ಲಿ ಶ್ರೀ ಗುರು ಮೂಕಪ್ಪ ಸ್ವಾಮಿಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಗುರು ಮೂಕಪ್ಪ ಶಿವಯೋಗಿ ಮಠ
ಮಾಸೂರು - 581 210
ಹಿರೇಕೆರೂರು ತಾ., ಹಾವೇರಿ ಜಿ.

Map

Near by Places

ಮಾಸೂರು - 2 ಕಿ.ಮೀ.
ರಟ್ಟಿಹಳ್ಳಿ - 8 ಕಿ.ಮೀ.
ಶಿಕಾರಿಪುರ - 33 ಕಿ.ಮೀ.
ರಾಣೆಬೆನ್ನೂರು - 40 ಕಿ.ಮೀ.

Statistic

15 Views
0 Rating
0 Favorite
0 Share
error: Content is protected !!