ಮಂಡ್ಯ ನಗರದಿಂದ 8 ಕಿ.ಮೀ. ದೂರದಲ್ಲಿರುವ ಪುರ ಗ್ರಾಮವು ತಗ್ಗಹಳ್ಳಿವಿಭಾಗದ ವ್ಯಾಪ್ತಿಗೆ ಬರುತ್ತದೆ. ಈ ಗ್ರಾಮದಲ್ಲಿ ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿಬೆಳೆದು ಬಂದಿರುವ ಶ್ರೀ ಗುರುಮˉÉ್ಲೀಶ್ವರ ದಾಸೋಹ ಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಆಚರಣೆಗಳ ಮೂಲಕ ಈ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಮಾಡಿ ಗ್ರಾಮದಲ್ಲಿ ಶಾಂತಿ ನೆˉÉಸುವಂತೆ ಮಾಡಿದೆ.ಪುರ ಗ್ರಾಮದಲ್ಲಿ ಬಹು ಹಿಂದೆ ಸ್ಥಾಪಿತಗೊಂಡಿರಬಹುದೆಂದು ಹೇಳˉÁದಮಠವು ಅಸ್ತಿತ್ವದಲ್ಲಿದ್ದು ಕಾˉÁನಂತರ ಜೀರ್ಣಗೊಂಡಿದೆ. 1985ರಲ್ಲಿ ಇಂತಹಜೀರ್ಣಗೊಂಡಿದ್ದ ಮಠಕ್ಕೆ ಅಧಿಕಾರ ವಹಿಸಿಕೊಂಡು ಬಂದ ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿ ಭಕ್ತರು ಮತ್ತೊಮ್ಮೆ ಶ್ರೀಮಠದತ್ತ ಬರುವಂತೆ ಮಾಡುವಲ್ಲಿಯಾಶಸ್ವಿಯಾಗಿದ್ದಾರೆ.ಶ್ರೀ ಗುರುಮˉÉ್ಲೀಶ್ವರ ದಾಸೋಹ ಮಠವು ಸ್ಥಾಪನೆಗೊಂಡ ಕಾಲಮಾನದ ಬಗ್ಗೆನಿಖರವಾಗಿ ಹೇಳಲು ಸಾzs À್ಯವಾಗುವುದಿಲ್ಲ. ಆದರೆ ˉÉೂೀಕಸಂಚಾರದಿಂದಬಂದಿರಬಹುದಾದ ಗುರುಗಳೊಬ್ಬರು ಪುರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿಶ್ರೀಮಠವನ್ನು ಸ್ಥಾಪನೆ ಮಾಡಿದರೆಂದು ತಿಳಿದು ಬರುತ್ತದೆ. ತದ ನಂತರ ಬಂದಿರುವ ಶ್ರೀಗೊಗ್ಗಪ್ಪ ಸ್ವಾಮಿಗಳನ್ನೇ ಮಠದ ಕರ್ತೃ ಗುರುಗಳೆಂದು ಪರಿಗಣಿಸಬಹುದು. ಶ್ರೀಗಳು ಈಮೊದˉÉೀ ಸ್ಥಾಪಿತಗೊಂಡಿದ್ದ ಶ್ರೀಮಠಕ್ಕೆ ಪಟ್ಟಾಧಿಕಾರವನ್ನು ವಹಿಸಿಕೊಂಡು ಶ್ರೀಮಠದಲ್ಲಿಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬಂದಿದ್ದು ಭಕ್ತರ ಮನಗೆಲ್ಲುವಲ್ಲಿಯಶಸ್ವಿಯಾಗಿದ್ದರು ಎಂದು ತಿಳಿದುಬರುತ್ತದೆ.ಈಗಿನ ಶ್ರೀಗಳಾದ ಶ್ರೀ ಶಿವಲಿಂಗ ಶಿವಾಚಾರ್ಯರು ಬಹುದಿನಗಳಿಂದ ಖಾಲಿಉಳಿದಿದ್ದ ಶ್ರೀಮಠದ ಜೀರ್ಣಾಭಿವೃದ್ದಿಯನ್ನು ಮಾಡುತ್ತಾ ಶ್ರೀಮಠದಲ್ಲಿ ಧಾರ್ಮಿಕಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಪ್ರತಿ ನಿತ್ಯಧಾರ್ಮಿಕ ಆಚರಣೆಗಳೊಂದಿಗೆ ಬಸವ ಜಯಂತಿ ಆಚರಣೆಯನ್ನು ಮಾಡುತ್ತಿದ್ದಾರೆ.ಶ್ರೀಮಠದ ಜಾತ್ರೆಯಾದ ಶ್ರೀ ಬಸವೇಶ್ವರ ಜಾತ್ರೆಯು ಚೈತ್ರ ಮಾಸದಲ್ಲಿ ನಡೆಯುತ್ತಿದ್ದುಊರಿನ ಗ್ರಾಮಸ್ಥರು ಭಾಗವಹಿಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
1953
Place :
ಪಂಚವಳ್ಳಿ, ಪಿರಿಯಾಪಟ್ಟಣ ತಾ||
Pattadikara :
1985
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಬಸವ ಜಯಂತಿ ಆಚರಣೆ
ಚೈತ್ರ ಮಾಸದಲ್ಲಿ ಶ್ರೀ ಜೋಡಿ ಬಸವೇಶ್ವರ ಜಾತ್ರೆ ಹಾಗೂ ಶ್ರೀಮಠದಲ್ಲಿ ವಿಶೇಷ ಹಬ್ಬ ಆಚರಣೆ
Photos
Full Address Kannada
ಶ್ರೀ ಗುರುಮಲ್ಲೇಶ್ವರ ದಾಸೋಹ ಮಠ
ಪುರ, ತಗ್ಗಹಳ್ಳಿ ಪೋಸ್ಟ್ - 571 403
ಮಂಡ್ಯ ತಾ|| & ಜಿಲ್ಲೆ