Shree Guru Malleshwara Dasoha Matha

Shree Guru Malleshwara Dasoha Matha Claimed

ಶ್ರೀ ಗುರು ಮˉÉ್ಲೀಶ್ವರ ದಾಸೋಹ ಮಠ

Average Reviews

Description

ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠ – ಗೋಪಿಶೆಟ್ಟಿಯೂರು

ಕರ್ತೃ – ಪೂಜ್ಯ ಶ್ರೀ ಸುಬ್ಬೆದೇವರು ಮಹಾಸ್ವಾಮಿಗಳು

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಗೋಪಿಶೆಟ್ಟಿಯೂರು ಗ್ರಾಮವುತಾಲ್ಲೂಕು ಕೇಂದ್ರದಿಂದ 40 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠವು ದೇವನೂರಿನ ಶ್ರೀಗುರುಮಲ್ಲೇಶ್ವರ ದಾಸೋಹ ಮಠದ ಶಾಖಾಮಠವಾಗಿ ತನ್ನ ವಿಶಿಷ್ಠ ಪರಂಪರೆಯನ್ನುಮುಂದುವರೆಸಿಕೊಂಡು ಬಂದಿದೆ. ಶ್ರೀಮಠವು ಸುಮಾರು 1940ರಲ್ಲಿ ಸ್ಥಾಪಿತಗೊಂಡಿದ್ದುಪೂಜ್ಯ ಶ್ರೀ ಸುಬ್ಬೆದೇವರು ಮಹಾಸ್ವಾಮಿಗಳು ಶ್ರೀಮಠದ ಕರ್ತೃಗುರುಗಳು.ದೇವನೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಲಿಂ|| ಶ್ರೀತೋಂಟದಾರ್ಯ ಮಹಾಸ್ವಾಮಿಗಳ ಶಿಷ್ಯರಾಗಿ ಆಧ್ಯಾತ್ಮದ ಆಳವಾದ ಅರಿವನ್ನು ಹೊಂದಿದ್ದಪೂಜ್ಯ ಶ್ರೀ ಸುಬ್ಬೆದೇವರು ಸ್ವಾಮಿಗಳು ಕಂತೆ ಭಿಕ್ಷದ ಕಾಯಕವನ್ನು ಮಾಡಿಕೊಂಡಿದ್ದರು. ಶ್ರೀತೋಂಟದಾರ್ಯ ಮಹಾಸ್ವಾಮಿಗಳು ತಮ್ಮ ಸೇವೆ ಮಾಡಿಕೊಂಡಿದ್ದ ಶ್ರೀ ಸುಬ್ಬೆದೇವರಿಗೆಗೋಪಿಶೆಟ್ಟಿಯೂರಿನಲ್ಲಿ ಮಠ ಸ್ಥಾಪಿಸಿ ಅಲ್ಲಿಗೆ ನೇಮಕಗೊಳಿಸಿದರು.ಶ್ರೀ ಸುಬೆ ್ಬೀದೇವರು ಸ್ವಾಮಿಗಳು ಗುರುಗಳ ಆಶಿರ್ವಾದದಂತೆಗೋಪಿಶೆಟ್ಟಿಯೂರಿಗೆ ಆಗಮಿಸಿ ಚಿಕ್ಕ ಮಠವನ್ನು ಕಟ್ಟಿಕೊಂಡು ದಿನಕ್ಕೆ ಎರಡು ಬಾರಿ ಕಂತೆಭಿಕ್ಷೆಯನ್ನು ಮಾಡಿಕೊಂಡು ದೇವನೂರಿನ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದರು.ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ, ಬಂದ ಭಕ್ತರಿಗೆ ಮಾರ್ಗದರ್ಶನಮಾಡುತ್ತಾ ಶ್ರೀಮಠವನ್ನು ಮುನ್ನಡೆಸುತ್ತಿದ್ದ ಶ್ರೀಗಳು 2008ರ ಏಪ್ರಿಲ್ 28ರಲ್ಲಿಲಿಂಗೈಕ್ಯರಾಗಿದ್ದಾರೆ.ಹಿಂದಿನ ಶ್ರೀಗಳು ತಾವು ಲಿಂಗೈಕ್ಯರಾಗುವ ಎರಡೂವರೆ ದಶಕಗಳ ಮುಂಚೆಯೇ1984ರಲ್ಲಿಯೇ ಈಗಿನ ಶ್ರೀಗಳಾದ ಪೂಜ್ಯ ಶ್ರೀ ಸೋಮಶೇಖರ ಸ್ವಾಮಿಗಳನ್ನು ತಮ್ಮಮರಿದೇವರನ್ನಾಗಿ ಮಾಡಿಕೊಂಡಿದ್ದರು. ಈಗಿನ ಶ್ರೀಗಳು ಗುರುಗಳ ಮಾರ್ಗದರ್ಶನದಲ್ಲಿಪರಿಪಕ್ವಗೊಂಡು ಅವರ ಹಾದಿಯಲ್ಲಿಯೇ ಪರಂಪರೆಯನ್ನು ಮುಂದುವರೆಸಿದ್ದಾರೆ. ಶ್ರೀಗಳುಬಂದ ಮೇಲೆ ಶ್ರೀಮಠವನ್ನು ಜೀರ್ಣೋದ್ಧಾರಗೊಳಿಸಿದ್ದು ಜೊತೆಯಲ್ಲಿ 25 ಬಡವಿದ್ಯಾರ್ಥಿಗಳಿಗೆ ಉಚಿತ ವಸತಿ, ಪ್ರಸಾದದ ವ್ಯವಸ್ಥೆ ಮಾಡಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಸೋಮಶೇಖರ ಸ್ವಾಮಿಗಳು
Date of Birth :
1967
Place :
ಶಂಬುದೇವನಪುರ, ಟಿ.ನರಸೀಪುರ ತಾ||
Pattadikara :
1984
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಚೈತ್ರ ಮಾಸದಲ್ಲಿ ಲಿಂ|| ಶ್ರೀ ಶ್ರೀ ಸುಬ್ಬೆದೇವರು ಮಹಾಸ್ವಾಮಿಗಳ ಪುಣ್ಯಾರಾಧನೆ

Photos

Full Address Kannada

ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠ
ಗೋಪಿಶೆಟ್ಟಿಯೂರು, ರಾಮಾಪುರ ಪೋ - 571 444
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ

Map

Near by Places

ರಾಮಾಪುರ - 2 ಕಿ.ಮೀ.
ಎಂ.ಎಂ.ಹಿಲ್ಸ್ - 40 ಕಿ.ಮೀ.
ಕೊಳ್ಳೇಗಾಲ - 40 ಕಿ.ಮೀ.
ಚಾಮರಾಜನಗರ - 90 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!