Shree Guru Malleshwara Dasoha Matha

Shree Guru Malleshwara Dasoha Matha Claimed

ಶ್ರೀ ಗುರುಮಲ್ಲೇಶ್ವರ ದಾಸೋಹ ಮಠ

Average Reviews

Description

ಶ್ರೀ ಗುರುಮಲ್ಲೇಶ್ವರ ದಾಸೋಹ ಮಠ – ಕೊಡಗಾಪುರ

ಕರ್ತೃ – ಪೂಜ್ಯ ಶ್ರೀ ಭಿಕ್ಷದ ರಾಚಪ್ಪ ಮಹಾಸ್ವಾಮಿಗಳು

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೊಡಗಾಪುರ ಗ್ರಾಮದಲ್ಲಿ1920ರಲ್ಲಿ ಪೂಜ್ಯ ಶ್ರೀ ಭಿಕ್ಷದ ರಾಚಪ್ಪ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀಗುರುಮಲ್ಲೇಶ್ವರ ದಾಸೋಹ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಚಟುವಟಿಕೆಗಳಿಂದ ಪ್ರಚಲಿತದಲ್ಲಿದೆ. ಶ್ರೀಮಠವು ದೇವನೂರು ಶ್ರೀ ಗುರುಮಲ್ಲೇಶ್ವರದಾಸೋಹ ಮಠದ ಶಾಖಾಮಠವಾಗಿದ್ದು ವಿಶಿಷ್ಠ ಸಂಪ್ರದಾಯವನ್ನು ರೂಡಿಸಿಕೊಂಡುಬಂದಿದೆ.ಶ್ರೀಮಠದ ಕರ್ತೃ ಗುರುಗಳಾದ ಪೂಜ್ಯ ಶ್ರೀ ಭಿಕ್ಷದ ರಾಚಪ್ಪ ಮಹಾಸ್ವಾಮಿಗಳುದೇವನೂರಿನಿಂದ ಲೋಕಕಲ್ಯಾಣಾರ್ಥ ಸಂಚಾರ ಕೈಗೊಂಡು ಅಲ್ಲಲ್ಲಿ ನೆಲೆನಿಂತು ಭಕ್ತರನ್ನುಹರಸುತ್ತಾ ಮುಂದುವರೆಯುತ್ತಿದ್ದರು. ಹೀಗೆ ಅವರು ಕೆಲಕಾಲ ನೆಲೆನಿಲ್ಲುತ್ತಿದ್ದ ಸ್ಥಳಗಳಲ್ಲೆಲ್ಲಾಮಠಗಳು ಸ್ಥಾಪನೆಯಾದವು. ಹೀಗೆ ಗುರುಗಳು ಸಂಚಾರದಲ್ಲಿ ಕೊಡಗಾಪುರ ಗ್ರಾಮಕ್ಕೆಆಗಮಿಸಿ ನೆಲೆನಿಂತು ಅನುಷ್ಠಾನ ಮಾಡಿದರು. ಇಲ್ಲಿನ ಭಕ್ತರಿಗೆ ಸನ್ಮಾರ್ಗ ತೋರಿ ಭಕ್ತರನೆರವಿನಿಂದ ಒಂದು ಚಿಕ್ಕ ಮಠವನ್ನು ಕಟ್ಟಿದರು. ಅದುವೇ ಈಗಿನ ಶ್ರೀ ಗುರುಮಲ್ಲೇಶ್ವರದಾಸೋಹ ಮಠ.ದಾಸೋಹ (ಭಿಕ್ಷದ) ಮಠಗಳ ಪರಂಪರೆಗಳ ಶ್ರೀಗಳು ಒಂದೆಡೆ ನೆಲೆನಿಲ್ಲುವುದಿಲ್ಲ. ಹಾಗೆಯೇ ಕೊಡಗಾಪುರ ಶ್ರೀಮಠದ ಗುರುಗಳೂ ಒಂದೆಡೆ ನೆಲೆನಿಲ್ಲದೇಸಂಚಾರ ಮೂರ್ತಿಗಳಾಗಿದ್ದರು. ಹಾಗಾಗಿ ಪರಂಪರೆಯ ಲಭ್ಯತೆಯಿಲ್ಲ. ಪರಂಪರೆಯಲ್ಲಿಪ್ರಮುಖವಾಗಿ ಕೇಳಿ ಬರುವ ಲಿಂ|| ಶ್ರೀ ಗುರುಶಿವಪ್ಪ ಮಹಾಸ್ವಾಮಿಗಳು ಅಪಾರ ಭಕ್ತಬಳಗವನ್ನು ಸಂಪಾದಿಸಿಕೊಂಡು 1949ರ ಡಿಸಂಬರ್ 04ರಲ್ಲಿ ಶ್ರೀಮಠದಲ್ಲಿಯೇಲಿಂಗೈಕ್ಯರಾದರು. ಅವರನ್ನು ದೇವನೂರಿನ ಮಠದಲ್ಲಿ ಸಮಾದಿ ಮಾಡಿದ್ದು ಇಲ್ಲಿತೋರುಗದ್ದುಗೆಯಿದೆ.ಹಿಂದಿನ ಶ್ರೀಗಳಾದ ಶ್ರೀ ಭಿಕ್ಷದ ಚನ್ನಬಸವ ಸ್ವಾಮಿಗಳು 1991ರ ಜೂನ್ 31ರಲ್ಲಿಈಗಿನ ಶ್ರೀಗಳಾದ ಶ್ರೀ ಚನ್ನ ಬಸವ ಸ್ವಾಮಿಗಳನ್ನು ಪಟ್ಟಕ್ಕೆ ತಂದು 2001ರ ಡಿಸಂಬರ್24ರಲ್ಲಿ ಲಿಂಗೈಕ್ಯರಾದರು. ಈಗಿನ ಶ್ರೀಗಳು 1995ರಲ್ಲಿ ದೇವನೂರಿನ ಶ್ರೀ ಮಹಾಂತಮಹಾಸ್ವಾಮಿಗಳು ಹಾಗೂ ಊರಿನ  ಭಕ್ತರ ನೆರವಿನಿಂದ ಶ್ರೀಮಠದಜೀರ್ಣಾಭಿವೃದ್ದಿಗೊಳಿಸಿದ್ದಾರೆ. ಶ್ರೀಮಠದಲ್ಲಿ ಪ್ರತಿ ವರ್ಷ ಡಿಸಂಬರ್‍ನಲ್ಲಿ ಶ್ರೀ ಗುರುಶಿವಪ್ಪಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಆಯೋಜಿಸಲಾಗುತ್ತದೆ.

Swamiji

Swamiji Name :
ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳು
Date of Birth :
12-07-1975
Place :
ಕೊಡಗಾಪುರ, ಗುಂಡ್ಲುಪೇಟೆ ತಾ||
Pattadikara :
31-06-1991
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಡಿಸಂಬರ್ ತಿಂಗಳಲ್ಲಿ ಪೂಜ್ಯ ಶ್ರೀ ಗುರು ಶಿವಪ್ಪ ಮಹಾಸ್ವಾಮಿಗಳವರ ವಾರ್ಷಿಕ ಸಂಸ್ಮರಣ
ಆರಾಧನಾ ಮಹೋತ್ಸವ

Photos

Full Address Kannada

ಶ್ರೀ ಗುರುಮಲ್ಲೇಶ್ವರ ದಾಸೋಹ ಮಠ
ಕೊಡಗಾಪುರ, ಸೋಮಹಳ್ಳಿ ಪೋ - 571 109
ಗುಂಡ್ಲುಪೇಟೆ ತಾ||, ಚಾಮರಾಜನಗರ ಜಿಲ್ಲೆ

Map

Statistic

13 Views
0 Rating
0 Favorite
0 Share
error: Content is protected !!