ಕರ್ತ – ಶ್ರೀ ಷ.ಬ್ರ. ಮದ್ದಾನೇಶ್ವರ ಶಿವಾಚಾರ್ಯ ಸ್ವಾಮಿಗಳು
ಕುಷ್ಠಗಿ ಪಟ್ಟಣದ ಮಧ್ಯಭಾಗದಲ್ಲಿ ಶ್ರೀ ಮದ್ದಾನೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಸುಮಾರು 16-17ನೇ ಶತಮಾನದಲ್ಲಿ ಸ್ಥಾಪಿತಗೊಂಡಿದೆಯೆಂದು ಹೇಳಲಾಗಿರುವಶ್ರೀ ರಂಭಾಪುರಿ ಪೀಠದ ಶಾಖಾಮಠವಾದ ಶ್ರೀ ಗುರು ಮದ್ದಾನೇಶ್ವರ ಮಠವು ಅಸ್ತಿತ್ವದಲ್ಲಿದ್ದು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದೆ.ಶಿವಗಣಾಚಾರ್ಯರೊಂದಿಗೆ ಲೋಕಸಂಚಾರದಲ್ಲಿದ್ದ ಶ್ರೀ ಮದ್ದಾನೇಶ್ವರ ಸ್ವಾಮಿಗಳು ಇಲ್ಲಿ ಅನುಷ್ಠಾನಗೊಂಡು ಧರ್ಮಪ್ರಚಾರ ಮಾಡುತ್ತಾ ವೀರಶೈವ ಧರ್ಮಾಚರಣೆಗಳಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ತನ್ನ ಧಾರ್ಮಿಕ ಆಚರಣೆಗಳ ಮೂಲಕ ಶ್ರೀಮಠದಸ್ಥಾಪನೆ ಮಾಡಿದ್ದರೆಂದು ತಿಳಿದುಬರುತ್ತದೆ. ಶ್ರೀಗಳು ಮಹಾಮಹಿಮ ಪುರುಷರಾಗಿದ್ದುತಮ್ಮ ಪವಾಡಗಳಿಂದ ಈ ಭಾಗದಲ್ಲಿ ಮನೆಮಾತಾಗಿದ್ದರು.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಬಂದಿರುವ ಎಲ್ಲಾ ಶ್ರೀಗಳು ಕರ್ತೃಗುರುಗಳ ಹೆಸರನ್ನೇ ಅಭಿದಾನ ಪಡೆದು ಬಂದಿರುವುದರಿಂದ ಶ್ರೀಮಠದ ಪರಂಪರೆಯ ಬಗ್ಗೆನಿಖರವಾಗಿ ಹೇಳಲಾಗುತ್ತಿಲ್ಲ. ಆದರೆ ದಾಖಲೆಗಳ ಪ್ರಕಾರ ಈಗಿನ ಶ್ರೀಗಳು ಪರಂಪರೆಯ11ನೇ ಗುರುಗಳೆಂದು ಹೇಳಲಾಗುತ್ತಿದೆ. ಶ್ರೀಮಠದ ಕರ್ತೃಗುರುಗಳು ಪವಾಡ ಮಾಡಿ ಒಂದುಕೆರೆಯನ್ನು ಸೃಷ್ಠಿಸಿದರೆಂದು ಹೇಳಲಾದ ಕೆರೆಯು ಈಗಲೂ ಇದ್ದು ಈ ಕೆರೆಯನ್ನು ಶ್ರೀಮದ್ದಾನೇಶ್ವರ ಕೆರೆಯೆಂದು ಕರೆಯುತ್ತಾರೆ.ಹಿಂದಿನ ಶ್ರೀಗಳಾದ ಶ್ರೀ ಮದ್ದಾನೆ ಕರಿಬಸವೇಶ್ವರ ಶಿವಾಚಾರ್ಯ ಸ್ವಾಮಿಗಳುಶ್ರೀಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆ ಮುನ್ನಡೆಸಿ 1975ರಲ್ಲಿ ಲಿಂಗೈಕ್ಯರಾಗಿದ್ದುನಂತರದ ಬಹುಕಾಲ ಖಾಲಿ ಉಳಿದಿದ್ದರಿಂದ ಶ್ರೀಮಠವು ಜೀರ್ಣಗೊಂಡಿತ್ತು. ತದನಂತರಶ್ರೀಮಠಕ್ಕೆ ನಿಯುಕ್ತಿಗೊಂಡ ಈಗಿನ ಶ್ರೀಗಳಾದ ಶ್ರೀ ಕರಿಬಸವೇಶ್ವರ ಶಿವಾಚಾರ್ಯರುಶ್ರೀಮಠವನ್ನು ನವೀಕರಣಗೊಳಿಸಿ 1997ರಲ್ಲಿ ನೂತನ ಕಟ್ಟಡ ನಿರ್ಮಿಸಿ ನಂತರವಷ್ಟೇ2000ರ ಮಾರ್ಚ್ 25ರಂದು ಶ್ರೀಮಠದ ಪಟ್ಟಾಧಿಕಾರ ವಹಿಸಿಕೊಂಡರು.ಶ್ರೀಗಳು ಶಿವಯೋಗ ಮಂದಿರದಲ್ಲಿ ಧಾರ್ಮಿಕ ಶಿಕ್ಷಣ ಪಡೆದು ಕೊಪ್ಪಳದಗವಿಮಠದಲ್ಲಿ ಆಶ್ರಯ ಪಡೆದು ಸಂಸ್ಕøತದಲ್ಲಿ ಪದವಿ ಸಂಪಾದಿಸಿ ಶ್ರೀಮಠಕ್ಕೆ ಆಗಮಿಸಿದ್ದುಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವತ್ತ ಚಿತ್ತ ಹರಿಸಿದ್ದಾರೆ. ಶ್ರೀಮಠದಲ್ಲಿಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಫಾಲ್ಗುಣ ಮಾಸದಲ್ಲಿ ಶ್ರೀಮಠದ ಜಾತ್ರೆನಡೆಯುತ್ತಿದೆ.
Swamiji
Swamiji Name :
ಶ್ರೀ ಷ.ಬ್ರ. ಕರಿಬಸವ ಶಿವಾಚಾರ್ಯ ಸ್ವಾಮಿಗಳು
Date of Birth :
17-6-1976
Place :
ಕುಷ್ಟಗಿ
Pattadikara :
25-3-2000
Photo :
Programs
ಫಾಲ್ಗುಣ ಮಾಸದಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ.
Photos
Full Address Kannada
ಶ್ರೀ ಗುರು ಮದ್ದಾನೇಶ್ವರ ಮಠ
ಕುಷ್ಟಗಿ - 584 121 ಕೊಪ್ಪಳ ಜಿ||