Shree Guru Halaswamy Matha

Shree Guru Halaswamy Matha

ಶ್ರೀ ಗುರು ಹಾಲಸ್ವಾಮಿ ಮಠ

Average Reviews

Description

ಶ್ರೀ ಗುರು ಹಾಲಸ್ವಾಮಿ ಮಠ

ಕರ್ತೃ – ಪರಮ ಪೂಜ್ಯ ಶ್ರೀ ಹಾಲು ಸ್ವಾಮಿಗಳು

ತರೀಕೆರೆ ತಾಲ್ಲೂಕು ಕೇಂದ್ರದಿಂದ 11 ಕಿ.ಮೀ. ದೂರದಲ್ಲಿರುವ ಹುಣಸಘಟ್ಟಗ್ರಾಮದ ಹೊರಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಗುರು ಹಾಲಸ್ವಾಮಿ ಮಠವು ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡುಬರುತ್ತಿದೆ. ಶ್ರೀಮಠದ ಮೂಲ ಮಠವು ಸಖರಾಯಪಟ್ಟಣದಲ್ಲಿದ್ದು ಪೂಜ್ಯ ಶ್ರೀಹಾಲುಸ್ವಾಮಿಗಳು ಸ್ಥಾಪಿಸಿದ್ದಾರೆಂದು ತಿಳಿದುಬರುತ್ತದೆ. ಶ್ರೀಮಠದ ಸ್ಥಾಪನೆಯ ಬಗ್ಗೆ ಅನೇಕಜಾನಪದ ಕಥೆಗಳು ಈ ಭಾಗದಲ್ಲಿ ಕೇಳಿಬರುತ್ತಿದ್ದು ಶ್ರೀಮಠದ ಸ್ಥಾಪಿತ ಕಾಲಮಾನಮಾತುಂಗ ರಾಜನ ಕಾಲ ಎಂದರೆ 18ನೇ ಶತಮಾನ.ಕರ್ತೃ ಗುರುಗಳಾದ ಶ್ರೀ ಹಾಲುಸ್ವಾಮಿಗಳಿಂದ ಸ್ಥಾಪಿತಗೊಂಡ ಮಠದಪರಂಪರೆಯಲ್ಲಿ ನಂತರ ಅಧಿಕಾರಕ್ಕೆ ಬಂದ ಶ್ರೀಗಳು ಕರ್ತೃಗಳ ಹೆಸರನ್ನೇ ಅಭಿದಾನ ಪಡೆದಕಾರಣ ಪರಂಪರೆಯ ಗುರುಗಳ ಕುರಿತು ಸ್ಪಷ್ಟತೆಯಿಲ್ಲ. ಪರಂಪರೆಯ ಗುರುಗಳಾದ ಶ್ರೀಸದಾಶಿವ ಶಿವಾಚಾರ್ಯ ಸ್ವಾಮಿಗಳು ಮೂಲ ಮಠದಲ್ಲಿ ಪಟ್ಟಾಧಿಕಾರವನ್ನು ವಹಿಸಿಕೊಂಡುಈ ಮಠದ ಶಾಖಾ ಮಠಗಳಾದ ಕೆ.ಬಿದರೆ, ಗಿರಿಯಾಪುರ ಹಾಗೂ ಹುಣಸಘಟ್ಟಮಠಗಳನ್ನು ಅಭಿವೃದ್ದಿಪಡಿಸಿದರು. ಶಿವಯೋಗ ಮಂದಿರದಲ್ಲಿ ಶ್ರೀ ಹಾನಗಲ್ಲ ಕುಮಾರಶಿವಯೋಗಿಗಳ ಅತ್ಯಂತ ನಿಷ್ಠ ಸಾಧಕರಾಗಿದ್ದ ಶ್ರೀಗಳು ಗಿರಿಯಾಪುರದಲ್ಲಿ “ಶ್ರೀ ಹಾನಗಲ್ಲಕುಮಾರ ಶಿವಯೋಗಿ ಸ್ಮಾರಕ ಶಿವಾಧ್ವೈತ ತತ್ತ್ವ ಪ್ರಚಾರಕ ಸಂಸ್ಥೆ”ಯನ್ನು ಸ್ಥಾಪಿಸಿದರು.ಸ್ವತಃ ಸಾಹಿತಿಗಳಾಗಿದ್ದ ಶ್ರೀಗಳು ತಮ್ಮ ಕೊನೆ ದಿನಗಳನ್ನು ಗಿರಿಯಾಪುರದ ಮಠದಲ್ಲಿ ಕಳೆದುಅಲ್ಲೇ ಲಿಂಗೈಕ್ಯರಾದರು.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯರುಸಖರಾಯಪಟ್ಟಣದ ಮೂಲ ಮಠದ ಆಡಳಿತವನ್ನು ಹುಣಸಘಟ್ಟಕ್ಕೆ ಬದಲಾಯಿಸಿಇಲ್ಲಿಯೇ ನೆಲೆಗೊಂಡು ಎಲ್ಲಾ ಮಠಗಳ ಅಭಿವೃದ್ದಿಯನ್ನು ಕೈಗೊಂಡರು. ಇವರು ತಮ್ಮಉತ್ತರಾಧಿಕಾರಿಗಳನ್ನಾಗಿ ಶ್ರೀ ಷ.ಬ್ರ. ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳನ್ನು 1990ರಮೇ 16ರಲ್ಲಿ ಶ್ರೀಮಠದ ಪಟ್ಟಕ್ಕೆ ತಂದು ವಿಶ್ರಾಂತ ಜೀವನಕ್ಕೆ ತೆರಳಿದರು. ಈಗಿನ ಶ್ರೀಗಳಾದಶ್ರೀ ಗುರುಮೂರ್ತಿ ಶಿವಾಚಾರ್ಯರು ಅಧಿಕಾರಕ್ಕೆ ಬಂದ ನಂತರ ಶ್ರೀಮಠವುಅಮೂಲಾಗ್ರವಾಗಿ ಬದಲಾವಣೆ ಕಂಡಿತು. ಹುಣಸಘಟ್ಟ ಮಠದ ಆಸ್ತಿಯಾಗಿದ್ದ ಜಮೀನನ್ನುಅಭಿವೃದ್ದಿಪಡಿಸಿದ್ದಲ್ಲದೇ ಗ್ರಾಮದ ಮಧ್ಯಭಾಗದಲ್ಲಿದ್ದ ಹಳೆಯ ಕಟ್ಟಡದ ಬದಲಿಗೆ ಈಗಿನಸ್ಥಳದಲ್ಲಿ ಕಟ್ಟಡವನ್ನು ನಿರ್ಮಿಸಿ ಮಠದ ಆಡಳಿತವನ್ನು ಸ್ಥಳಾಂತರಿಸಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು
Date of Birth :
22-11-1963
Place :
ಹುಣಸಘಟ್ಟ, ತರೀಕೆರೆ ತಾ||
Pattadikara :
16-05-1990
Photo :

Programs

ಪ್ರತಿ ಅಮವಾಸೆಯಂದು ವಿಶೇಷ ಪೂಜೆ
ಯುಗಾದಿ ಪಾಡ್ಯದಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಮೇ ತಿಂಗಳಲ್ಲಿ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು
ಕಾರ್ತಿಕ ಮಾಸದಲ್ಲಿ ದೀಪೋತ್ಸವ

Institutions

ಗೋಶಾಲೆ ಇದೆ.

Photos

Full Address Kannada

ಶ್ರೀ ಗುರು ಹಾಲಸ್ವಾಮಿ ಮಠ
ಹುಣಸಘಟ್ಟ - 577 228 ತರೀಕೆರೆ
ತಾ||, ಚಿಕ್ಕಮಗಳೂರು ಜಿಲ್ಲೆ

Map

Near by Places

ಅಜ್ಜಂಪುರ ಕ್ರಾಸ್ - 3 ಕಿ.ಮೀ.
ತರೀಕೆರೆ - 11 ಕಿ.ಮೀ.
ಅಜ್ಜಂಪುರ - 11 ಕಿ.ಮೀ.

Statistic

790 Views
0 Rating
0 Favorite
0 Share
error: Content is protected !!