Shree Guru Halaswami Matha

Shree Guru Halaswami Matha Claimed

ಶ್ರೀ ಗುರು ಹಾಲಸ್ವಾಮಿ ಮಠ

Average Reviews

Description

ಶ್ರೀ ಗುರು ಹಾಲಸ್ವಾಮಿ ಮಠ

ಪರಮಪೂಜ್ಯ ಶ್ರೀ ಸದ್ಗುರು ಹಾಲಸಿದ್ಧಿ ತಪಸ್ವಿ ತೆಗ್ಗಿನಮಠದ ಗಿರಿರಾಜ ಹಾಲಸ್ವಾಮಿಗಳು

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ನಾಗತಿಬಸಾಪುರ ಗ್ರಾಮವುತಾಲ್ಲೂಕು ಕೇಂದ್ರದಿಂದ 8 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ 48 ವರ್ಷಗಳ ಹಿಂದೆಸ್ಥಾಪಿತಗೊಂಡಿರುವ ಶ್ರೀಗುರು ಹಾಲಸ್ವಾಮಿ ಮಠವು ರಾಂಪುರದ ಶ್ರೀ ಹಾಲಸ್ವಾಮಿ ಮಠದಪರಂಪರೆಯಲ್ಲಿ ಬೆಳೆದು ಬಂದಿದ್ದು ಈ ಭಾಗದಲ್ಲಿ ತಮ್ಮ ಧಾರ್ಮಿಕ ಆಚರಣೆಗಳ ಮೂಲಕಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದುಬಂದಿದೆ.ಶ್ರೀ ಗುರು ಹಾಲಸ್ವಾಮಿ ಮಠವು ಪರಮಪೂಜ್ಯ ಶ್ರೀ ಸದ್ಗುರು ಹಾಲಸಿದ್ಧಿ ತಪಸ್ವಿತೆಗ್ಗಿನಮಠದ ಗಿರಿರಾಜ ಹಾಲಸ್ವಾಮಿಗಳಿಂದ ಸುಮಾರು 1965ರಲ್ಲಿ ಸ್ಥಾಪನೆಯಾಗಿದೆ.ಶ್ರೀಗಳು ತಮ್ಮ ಯೌವ್ವನಾವಸ್ಥೆಯಲ್ಲಿಯೇ ಧಾರ್ಮಿಕತೆಯ ಬಗ್ಗೆ ಒಲವು ಹೊಂದಿದ್ದುಬಳ್ಳಾರಿಯ ಅಲ್ಲಿಪುರ ತಾತನವರ ಸೇವೆ ಮಾಡಿಕೊಂಡಿದ್ದವರು. ಮುಂದೆ ಅಲ್ಲಿಂದಹೊರಟ ಶ್ರೀಗಳು ಚಿಕ್ಕವಯಸ್ಸಿನಲ್ಲಿಯೇ ತಮ್ಮ ಹುಟ್ಟೂರಾದ ನಾಗತಿಬಸಾಪುರ ಗ್ರಾಮಕ್ಕೆಬಂದು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿದರು.ಶ್ರೀಗಳು ಧರ್ಮನಿಷ್ಠರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಶ್ರೀಮಠಕ್ಕೆಭಕ್ತರನ್ನು ಸೆಳೆದಿದ್ದಾರೆ. ಶ್ರೀಗಳು ಹಾಲಸ್ವಾಮಿ ಪರಂಪರೆಯ ಕಠಿಣ ವ್ರತಾಚರಣೆಗಳುಹಾಗೂ ಮುಳ್ಳುಗದ್ದುಗೆ ಉತ್ಸವಗಳ ಮೂಲಕ ಶ್ರೀಮಠವನ್ನು ಪ್ರಸಿದ್ಧಿಗೆ ತಂದಿದ್ದಾರೆ.ಜೊತೆಯಲ್ಲಿಯೇ ಭಕ್ತರ ಸಹಕಾರ ಪಡೆದು ಮಠವನ್ನು ಅಭಿವೃದ್ಧಿಪಡಿಸಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಗೆವಿಶೇಷ ಪೂಜೆ ನಡೆಸುತ್ತಾರೆ. ಹಾಗೆಯೇ ಕಾರ್ತೀಕ ಶುದ್ಧ ಚತುರ್ದಶಿಯ ದಿನದಿಂದಮುಳ್ಳುಗದ್ದುಗೆ ಉತ್ಸವವನ್ನು ಆಯೋಜಿಸಿ ಜಾತ್ರೆ ನಡೆಸುತ್ತಾರೆ. ಆ ದಿನದಂದು ಸಾವಿರಾರುಭಕ್ತರು ಶ್ರೀಮಠಕ್ಕೆ ಬಂದು ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯುತ್ತಾರೆ.

Swamiji

Swamiji Name :
ಪರಮಪೂಜ್ಯ ಶ್ರೀ ಸದ್ಗುರು ಹಾಲಸಿದ್ಧಿ ತಪಸ್ವಿ ತೆಗ್ಗಿನಮಠದ ಗಿರಿರಾಜ ಹಾಲಸ್ವಾಮಿಗಳು
Date of Birth :
14-7-1943
Place :
ನಾಗತಿಬಸಾಪುರ, ಹೂವಿನಹಡಗಲಿ ತಾ||
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಪ್ರತಿ ಹಬ್ಬಗಳಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು.
ಕಾರ್ತೀಕ ಶುದ್ಧ ಚತುರ್ದಶಿಗೆ ಮುಳ್ಳುಗದ್ದುಗೆ ಉತ್ಸವ ಹಾಗೂ ಜಾತ್ರೆ.

Full Address Kannada

ಶ್ರೀ ಗುರು ಹಾಲಸ್ವಾಮಿ ಮಠ ನಾಗತಿ
ಬಸಾಪುರ - 583 219
ಹೂವಿನಹಡಗಲಿ ತಾ||, ಬಳ್ಳಾರಿ ಜಿ||

Map

Near by Places

ಹರಪನಹಳ್ಳಿ - 18 ಕಿ.ಮೀ.
ಹೂವಿನಹಡಗಲಿ - 8 ಕಿ.ಮೀ.
ಹಿರೇಹಡಗಲಿ - 25 ಕಿ.ಮೀ.

Statistic

51 Views
0 Rating
0 Favorite
1 Share
error: Content is protected !!