Shree Guru Bhadreshwara Chowki Matha

Shree Guru Bhadreshwara Chowki Matha Claimed

ಶ್ರೀ ಗುರು ಭದ್ರೇಶ್ವರ ಚೌಕಿ ಮಠ

Average Reviews

Description

ಶ್ರೀ ಗುರು ಭದ್ರೇಶ್ವರ ಚೌಕಿ ಮಠ

ಕರ್ತೃ – ಪೂಜ್ಯ ಶ್ರೀ ಗುರು ಭದ್ರೇಶ್ವರ ಮಹಾಸ್ವಾಮಿಗಳು

ಬೀದರ್ ಜಿಲ್ಲೆಯ ನಿಡವಂಚಾ ಗ್ರಾಮದ ಮಧ್ಯಭಾಗದಲ್ಲಿ ಕರ್ತೃ ಪೂಜ್ಯ ಶ್ರೀಗುರು ಭದ್ರೇಶ್ವರ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಗುರು ಭದ್ರೇಶ್ವರ ಚೌಕಿಮಠವುಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡು ಸರ್ವಧರ್ಮ ಸಮನ್ವತೆಯ ಕೇಂದ್ರವಾಗಿದೆ.ಶ್ರೀಮಠದ ಸ್ಥಾಪಿತ ಕಾಲಮಾನದ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲವಾದರೂಶ್ರೀಮಠದ ಪರಂಪರೆ ಶ್ರೀಮಂತವಾಗಿದೆ.ಕರ್ತೃ ಶ್ರೀ ಗುರುಭದ್ರೇಶ್ವರ ಸ್ವಾಮಿಗಳು ಜಾತ್ಯಾತೀತತೆಯ ಹರಿಕಾರರು,ಸರ್ವಧರ್ಮದವರಿಗೂ ಹಾಗೂ ಮಹಿಳೆಯರಿಗೂ ಸಮಾನ ಅವಕಾಶ ನೀಡಬೇಕೆಂಬಬಸವಣ್ಣನವರ ಆದರ್ಶಗಳ ಪ್ರತಿಬಿಂಬದಂತಿದ್ದವರು. ತಾವೇ ಸ್ವತಃ ತತ್ವ ಪದಕಾರರಾಗಿ ತತ್ವಪದಗಳನ್ನು ರಚಿಸಿ ಜನಜಾಗೃತಿ ಮೂಡಿಸುತ್ತಿದ್ದರು. ಹೀಗೆ ಜಾತ್ಯಾತೀತ ತಳಹದಿಯ ಮೇಲೆಪ್ರಾರಂಭವಾದ ಶ್ರೀಮಠದ ಪರಂಪರೆಯಲ್ಲಿ ಇದುವರೆಗೂ ಮಹಿಳೆಯರು ಹಾಗೂ ಅನ್ಯಧರ್ಮೀಯರೂ ಕೂಡ ಮಠಾಧಿಪತಿಗಳಾಗಿ ಅಧಿಕಾರ ನಡೆಸಿದ್ದಾರೆ.ಪ್ರಸ್ತುತ ಪೂಜ್ಯ ಶ್ರೀ ಮಾತೆ ಮೈತ್ರಾದೇವಿ ತಾಯಿಯವರು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡಿದ್ದು ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀ ಗುರು ಭದ್ರೇಶ್ವರ ಶಿಕ್ಷಣಸಂಸ್ಥೆಯನ್ನು ಪ್ರಾರಂಭಿಸಿ ಅದರ ಮೂಲಕ ನಿಡವಂಚಾದಲ್ಲಿ ಪ್ರಾಥಮಿಕ ಹಾಗೂಪ್ರೌಢಶಾಲೆಗಳನ್ನು ಪ್ರಾರಂಭಿಸಿ ನಿರ್ವಹಿಸುತ್ತಿದ್ದಾರೆ ಹಾಗೂ ಅನಾಥಾಶ್ರಮವನ್ನು ಸ್ಥಾಪಿಸಿಅನಾಥ ಮಕ್ಕಳ ಆರೈಕೆಯಲ್ಲಿ ನಿರತರಾಗಿದ್ದಾರೆ.ಶ್ರೀಮಠದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯ ಹಿಂದಿನ ದಿನದಂದು ಮಾಸಿಕಶಿವಾನುಭವ ಗೋಷ್ಠಿಗಳನ್ನು ನಡೆಸುತ್ತಿದ್ದು ವಿವಿಧ ವಿಷಯಗಳ ಮೇಲೆ ಚರ್ಚೆ ಕೈಗೊಳ್ಳಲಾಗುತ್ತಿದೆ ಹಾಗೂ ಪ್ರತಿವರ್ಷ ಫೆಬ್ರವರಿ ತಿಂಗಳ 5,6,7 ರಂದು ಬಸವ ಧರ್ಮ ಸಮಾವೇಶಮತ್ತು ಸಂಗೀತ, ನಾಟಕೋತ್ಸವಗಳನ್ನು ಆಯೋಜಿಸಲಾಗುತ್ತಿದ್ದು ಅಪಾರ ಭಕ್ತಸಮೂಹಪಾಲ್ಗೊಳ್ಳು ತ್ತದೆ. ಈ ಎರಡೂ ಕಾರ್ಯಕ್ರಮಗಳು ಇಲ್ಲಿಗೆ ಸಮೀಪದ ಮೆನ್ನಾಎಖೆಳ್ಳಿಯಲ್ಲಿನಡೆಯುತ್ತವೆ.

Swamiji

Swamiji Name :
ಪೂಜ್ಯ ಶ್ರೀ ಮಾತೆ ಮೈತ್ರಾದೇವಿ ತಾಯಿಯವರು
Place :
ಖೇಣಿ ರಂಜೋಳಿ, ಬೀದರ್ ತಾ||
Photo :

Programs

ಪ್ರತಿ ತಿಂಗಳು ಹುಣ್ಣಿಮೆ ಹಿಂದಿನ ದಿನ ‘ಮಾಸಿಕ ಶಿವಾನುಭವ ಗೋಷ್ಠಿ’ (ಮೆನ್ನಾ ಎಖೆಳ್ಳಿಯಲ್ಲಿ).
ಫೆಬ್ರವರಿ 5,6,7 ರಂದು ಬಸವ ಧರ್ಮ ಸಮಾವೇಶ ಮತ್ತು ಸಂಗೀತ ನಾಟಕೋತ್ಸವ (ಮೆನ್ನಾ ಎಖೆಳ್ಳಿಯಲ್ಲಿ). ಯುಗಾದಿಗೆ ವಿಶೇಷ ಕಾರ್ಯಕ್ರಮ. ಶ್ರಾವಣದಲ್ಲಿ ನಿತ್ಯ ಬಿಲ್ವಾರ್ಚನೆ, ವಚನಾಭಿಷೇಕ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಅನಾಥಾಶ್ರಮ.

Full Address Kannada

ಶ್ರೀ ಗುರು ಭದ್ರೇಶ್ವರ ಚೌಕಿ ಮಠ
ನಿಡವಂಚಾ, ಬೊಂಬಳಗಿ ಪೋಸ್ಟ್ - 585 227
ಬೀದರ್ ತಾ|| ಜಿ||

Map

Near by Places

ಮೆನ್ನಾಎಖೆಳ್ಳಿ - 2 ಕಿ.ಮೀ.
ಬೀದರ್ - 35 ಕಿ.ಮೀ.
ಹುಮನಾಬಾದ್ - 30 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!