Shree Guru Adavi Siddeshwara Samsthana Matha – Kotabala
Claimed
ಶ್ರೀ ಗುರು ಅಡವಿ ಸಿದ್ದೇಶ್ವರ ಸಂಸ್ಥಾನ ಮಠ - ಕೊತಬಾಳ
Average Reviews
Description
ಶ್ರೀ ಗುರು ಅಡವಿ ಸಿದ್ದೇಶ್ವರ ಸಂಸ್ಥಾನ ಮಠ – ಕೊತಬಾಳ
ಕರ್ತೃ – ಶ್ರೀ. ಮ.ನಿ.ಪ್ರ. ಅಡವಿ ಸಿದ್ದೇಶ್ವರ ಮಹಾಸ್ವಾಮಿಗಳು
ಗದಗ ಜಿಲ್ಲೆ ರೋಣ ತಾಲ್ಲೂಕಿನ ಕೊತಬಾಳ ಗ್ರಾಮವು ತಾಲ್ಲೂಕು ಕೇಂದ್ರದಿಂದ07 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ಮ.ನಿ.ಪ್ರ. ಅಡವಿ ಸಿದ್ದೇಶ್ವರಮಹಾಸ್ವಾಮಿಗಳಿಂದ ಸುಮಾರು 96 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀ ಗುರುಅಡವಿ ಸಿದ್ದೇಶ್ವರ ಸಂಸ್ಥಾನ ಮಠವು ತನ್ನ ಕರ್ತೃತ್ವ ಶಕ್ತಿಯಿಂದಾಗಿ ಈ ಭಾಗದ ಪ್ರಮುಖಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದೆ.ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಅಂಕಲಗಿ ಅಡವಿ ಮಠದ ಮೂರನೇಪಟ್ಟಾಧ್ಯಕ್ಷರಾಗಿದ್ದ ಶ್ರೀ ಅಡವಿ ಸಿದ್ದೇಶ್ವರ ಮಹಾಸ್ವಾಮಿಗಳು ಲೋಕಸಂಚಾರಕ್ಕೆ ಹೊರಟುಕೊತಬಾಳ ಗ್ರಾಮದ ಈ ಸ್ಥಳದಲ್ಲಿ ನೆಲೆನಿಂತು ದೀರ್ಘ ಅನುಷ್ಠಾನವನ್ನು ಕೈಗೊಂಡು ಇಲ್ಲಿನಗ್ರಾಮದ ಭಕ್ತರ ಅಪೇಕ್ಷೆಯ ಮೇರೆಗೆ ಸ್ವತಂತ್ರ ಮಠವನ್ನು ಸ್ಥಾಪಿಸಿ ತಮ್ಮ ತಪೋಶಕ್ತಿಯಬಲದಿಂದ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿ ಪಡಿಸಿ ಜನ ಮಾನಸದಲ್ಲಿಶಾಶ್ವತವಾಗಿ ನೆಲೆನಿಂತರು. ಶ್ರೀ ಅಡವಿ ಸಿದ್ದೇಶ್ವರ ಮಹಾಸ್ವಾಮಿಗಳ ಶಿಷ್ಯರಾದ ಶ್ರೀ ಮ.ನಿ.ಪ್ರ.ರಾಜಶೇಖರ ಸ್ವಾಮಿಗಳು ಶ್ರೀ ಅಡವಿ ಸಿದ್ದೇಶ್ವರರಿಂದಲೇ ಪಟ್ಟಾಧಿಕಾರದ ಅನುಗ್ರಹ ಪಡೆದುಅಧಿಕಾರಕ್ಕೆ ಬಂದಿದ್ದು ಗುರುಗಳ ಹಾದಿಯಲ್ಲಿಯೇ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನುನಡೆಸುತ್ತಾ, ಧೀರ್ಘ ಕಾಲಗಳ ಕಾಲ ಶ್ರೀಮಠದ ಅಧಿಕಾರ ನಡೆಸಿ ತಮ್ಮ ಸಾಮಾಜಿಕಕಾರ್ಯಕ್ರಮಗಳ ಮೂಲಕ ಜನರಲ್ಲಿನ ಮೌಡ್ಯವನ್ನು ತೊಡೆದುಹಾಕಿ ಅವರಿಗೆ ಧಾರ್ಮಿಕಸಂಸ್ಕಾರವನ್ನು ನೀಡಿದವರು.ಈಗಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಗಂಗಾಧರ ಮಹಾಸ್ವಾಮಿಗಳು 2000ದಫೆಬ್ರವರಿ 17ರಲ್ಲಿ ಶ್ರೀಮಠದ ಪಟ್ಟಾಧಿಕಾರಕ್ಕೆ ಬಂದಿದ್ದು ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಹಿಂದಿನ ಶ್ರೀಗಳು ಇರುವಾಗಲೇ ಶ್ರೀ ಮಠದಉತ್ತರಾಧಿಕಾರಿಗಳಾಗಿ ನೇಮಕಗೊಂಡು ವಿದ್ಯಾಭ್ಯಾಸ ಮುನ್ನಡೆಸಿದ್ದರು. ಆದರೆ ಹಿರಿಯಶ್ರೀಗಳು ಲಿಂಗೈಕ್ಯರಾದ ನಂತರ ಶ್ರೀಮಠದ ಅಧಿಕಾರ ವಹಿಸಿಕೊಳ್ಳಬೇಕಾಯಿತು.ಶ್ರೀಮಠದಲ್ಲಿ ಪ್ರತಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಹಾಗೂಕಾರ್ತೀಕ ಮಾಸಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಆಗಿ ಹುಣ್ಣಿಮೆ ಆದಮೂರು ದಿನಕ್ಕೆ ಶ್ರೀಮಠದ ಜಾತ್ರಯು ನಡೆಯುತ್ತವೆ. ಶ್ರೀಮಠದ ಹಿರಿಮೆಯೆಂದರೆಶ್ರೀಮಠವು ಉತ್ತರ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ 1980ರಲ್ಲಿ ಸಾಮೂಹಿಕವಿವಾಹಗಳನ್ನು ನೆರವೇರಿಸಿದ ಮಠ.
Swamiji
Swamiji Name :
ಶ್ರೀ. ಮ.ನಿ.ಪ್ರ. ಗಂಗಾಧರ ಮಹಾಸ್ವಾಮಿಗಳು
Date of Birth :
1/7/1976
Place :
ಕೊತಬಾಳ, ರೋಣ ತಾ||
Pattadikara :
17-02-2000
Photo :
Programs
ಪ್ರತಿ ಅಮವಾಸ್ಯೆಗೆ & ಹುಣ್ಣಿಮೆಗೆ ವಿಶೇಷ ಪೂಜೆ
ಆಗಿ ಹುಣ್ಣಿಮೆ ಆದ ಮೂರು ದಿನಕ್ಕೆ ಶ್ರೀ ಮಠದ ಜಾತ್ರೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಕಾರ್ತಿಕ ಮಾಸದಲ್ಲಿ ದೀಪೋತ್ಸವ
Photos
Full Address Kannada
ಶ್ರೀ ಗುರು ಅಡವಿ ಸಿದ್ದೇಶ್ವರ ಸಂಸ್ಥಾನ ಮಠ
ಕೊತಬಾಳ - 582 209
ರೋಣ ತಾ||, ಗದಗ ಜಿಲ್ಲೆ