Shree Gummalapura Matha

Shree Gummalapura Matha Claimed

ಶ್ರೀ ಗುಮ್ಮಳಾಪುರ ಮಠ

Average Reviews

Description

ಶ್ರೀ ಗುಮ್ಮಳಾಪುರ ಮಠ

ಕರ್ತೃ – ಶ್ರೀ ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು

ಶಹಾಪುರ ಪಟ್ಟಣದ ಪಶ್ಚಿಮ ಭಾಗದಲ್ಲಿ ಪುರಾತನ ಕಾಲದಲ್ಲಿ ಶ್ರೀ ಷ.ಬ್ರ.ಗುಮ್ಮಳೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿದೆ ಎಂದು ಹೇಳಲಾಗಿರುವ ಶ್ರೀಗುಮ್ಮಳಾಪುರ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಸಿದ್ಧಿಗೆ ಬಂದಿದೆ.ಶ್ರೀಮಠವು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿದ್ದು ಪತ್ರವರ್ಗದ ಪರಂಪರೆಯಲ್ಲಿಬೆಳೆದು ಬಂದಿದೆ.ಶ್ರೀಮಠದ ಪರಂಪರೆಯಲ್ಲಿ ಸುಮಾರು 9 ಜನ ಶ್ರೀಗಳು ಅಧಿಕಾರಕ್ಕೆಬಂದಿರಬಹುದೆಂದು ಹೇಳಲಾಗಿದ್ದು ನಿಖರತೆಯಿಲ್ಲ. ಕಾರಣ ಶ್ರೀಮಠದಲ್ಲಿ ಕರ್ತೃಗುರುಗಳಗದ್ದುಗೆಯೂ ಸೇರಿದಂತೆ ಒಟ್ಟು ನಾಲ್ಕು ಗದ್ದುಗೆಗಳು ಮಾತ್ರ ಸ್ಥಾಪನೆಯಾಗಿದ್ದು,ಶಾಖಾಮಠಗಳೆಂದು ಗುರುತಿಸಲಾದ ಹೊತಪೇಟೆ, ಮುರಗೋಳು ಹಾಗೂ ಅಗರಹುಂಡಿಗೆಗಳಲ್ಲಿ ಕೆಲವು ಗದ್ದುಗೆಗಳು ಕಾಣಸಿಗುತ್ತವೆ.ಶ್ರೀಮಠದ ಪರಂಪರೆಯಲ್ಲಿ ಬಂದಿರುವ ಶ್ರೀ ಷ.ಬ್ರ. ಸಿದ್ದಯ್ಯ ಶಿವಾಚಾರ್ಯಸ್ವಾಮಿಗಳು ಪವಾಡ ಪುರುಷರಾಗಿ ಭಕ್ತರನ್ನು ಉದ್ಧರಿಸಿದ್ದು ತಮ್ಮ ಧಾರ್ಮಿಕ ಆಚರಣೆಗಳುಹಾಗೂ ಅಭಿವೃದ್ಧಿ ಕಾರ್ಯಗಳಿಂದಾಗಿ ಶ್ರೀಮಠವನ್ನು ಮುನ್ನಡೆಸಿದ್ದು ಅಪಾರ ಸಂಖ್ಯೆಯಭಕ್ತವೃಂದವನ್ನು ಹೊಂದಿದ್ದರು. ನಂತರ ಶ್ರೀ ಗುರುಶಾಂತ ಶಿವಾಚಾರ್ಯರು ಅಧಿಕಾರನಡೆಸಿದ್ದು ತದನಂತರ ಬಹುಕಾಲ ಶ್ರೀಮಠ ಖಾಲಿ ಉಳಿದಿರುವಂತೆ ತೋರುತ್ತದೆ.ಪ್ರಸ್ತುತ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು 1988ರ ಏಪ್ರಿಲ್ 1ರಲ್ಲಿಶ್ರೀಮಠಕ್ಕೆ ಪಟ್ಟಾಧಿಕಾರ ಹೊಂದಿದ್ದಾರೆ. ಶ್ರೀಗಳು ಶಿವಯೋಗಿ ಮಂದಿರ, ರಂಭಾಪುರಿ ಪೀಠಹಾಗೂ ಮಹಾಂತಿನ ಮಠಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದು ಶ್ರೀ ಫಕೀರೇಶ್ವರ ಮಠದ ಶ್ರೀಮ.ನಿ.ಪ್ರ. ಗಂಗಾಧರ ಸ್ವಾಮಿಗಳ ಆಶೀರ್ವಾದದೊಂದಿಗೆ ಶ್ರೀಮಠದ ಪಟ್ಟಕ್ಕೆ ಬಂದಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿ ನಿತ್ಯಪರಾಣ ಪ್ರವಚನ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡುಬರುತ್ತಿದ್ದು ಕಾರ್ತೀಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮಹೋತ್ಸವವನ್ನುಆಚರಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
1978
Place :
ಇಂಗಳಗಿ, ಚಿತ್ತಾಪುರ ತಾ.
Pattadikara :
1-4-1988
Photo :

Programs

ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಹಾಗೂ ವಿಶೇಷ ಪೂಜೆ.
ಕಾರ್ತೀಕ ಮಾಸದಲ್ಲಿ ಕರ್ತೃಗುರುಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ಗುಮ್ಮಳಾಪುರ ಮಠ
ಗಾಂಧಿ ಚೌಕಿ, ಶಹಾಪುರ - 585 223
ಶಹಾಪುರ ತಾ||, ಯಾದಗಿರಿ ಜಿ||

Map

Near by Places

ದೇವದುರ್ಗ - 32 ಕಿ.ಮೀ.
ಯಾದಗಿರಿ - 35 ಕಿ.ಮೀ.
ಕಲಬುರ್ಗಿ - 80 ಕಿ.ಮೀ.

Statistic

6 Views
0 Rating
0 Favorite
0 Share
error: Content is protected !!