Shree Guluru Jangama Matha

Shree Guluru Jangama Matha Claimed

ಶ್ರೀ ಗೂಳೂರು ಜಂಗಮ ಮಠ

Average Reviews

Description

ಶ್ರೀ ಗೂಳೂರು ಜಂಗಮ ಮಠ – ಐತಾಂಡಹಳ್ಳಿ

ಶ್ರೀ ಮ.ಘ.ಚ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು

ಬಂಗಾರಪೇಟೆ ತಾಲ್ಲೂಕು ಕೇಂದ್ರದಿಂದ ಕೇವಲ 6 ಕಿ.ಮೀ. ದೂರದಲ್ಲಿರುವಐತಾಂಡಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಗೂಳೂರು ಜಂಗಮಮಠವು ಹೆಸರೇ ಸೂಚಿಸುವಂತೆ ಗೂಳೂರಿನ ಶ್ರೀ ನಿಡುಮಾಮಿಡಿ ಜಗದ್ಗುರು ಪೀಠದಶಾಖಾಮಠವಾಗಿ ಬೆಳೆದು ಬಂದಿದೆ. ಶ್ರೀಮಠವು ಸುಮಾರು ಮುನ್ನೂರು ವರ್ಷಗಳ ಹಿಂದೆಶ್ರೀ ಮನ್ನಿಡುಮಾಮಿಡಿ ಮಹಾಸಂಸ್ಥಾನದ ಆಗಿನ ಜಗದ್ಗುರುಗಳಿಂದ ಸ್ಥಾಪಿಸಲ್ಪಟ್ಟು ಮುಂದೆಅನೇಕ ಕಾಲ ಖಾಲಿ ಉಳಿದಂತೆ ತೋರುತ್ತದೆ.ಶ್ರೀಮಠದ ಪರಂಪರೆಯಲ್ಲಿ ಈಗ್ಗೆ 150 ವರ್ಷಗಳ ಹಿಂದೆ ಶ್ರೀ ಲಿಂಗರಾಜಮಹಾಸ್ವಾಮಿಗಳು ಆನಂತರ ಶ್ರೀ ಷಣ್ಮುಗ ಸ್ವಾಮಿಗಳು ಅಧಿಕಾರ ನಡೆಸಿದ್ದು ಶ್ರೀ ಷಣ್ಮುಗಸ್ವಾಮಿಗಳು 1909ರಲ್ಲಿ ಲಿಂಗೈಕ್ಯರಾಗಿದ್ದಾರೆ. ಶ್ರೀ ಷಣ್ಮುಗ ಸ್ವಾಮಿಗಳ ಕಾಲವಶದಿಂದಅವ್ಯವಸ್ಥೆಗಳಾಗಿ ಶ್ರೀಮಠದ ಸ್ಥಿರ ಆಸ್ತಿಗಳು ಅನ್ಯರ ಪಾˉÁಗಿ ನಾಥರಿಲ್ಲದ ಈ ಮಠದಚರಸ್ಥಿರ ಸ್ವತ್ತುಗಳೆಲ್ಲವೂ ಕಳೆದುಹೋದುದು ಮಾತ್ರವಲ್ಲ ಮಠದ ಕಟ್ಟಡಗಳೂಜೀರ್ಣಗೊಳ್ಳತೊಡಗಿದವು.ಪರಂಪರೆಯ ಮಠವು ಜೀರ್ಣಗೊಳ್ಳತೊಡಗಿದ್ದನ್ನು ಕಂಡ ಮಠದ ಶಿಷ್ಯರೂ,ಗ್ರಾಮದ ಮುಖಂಡರೂ ಮೂಲಪೀಠ ಶ್ರೀ ನಿಡುಮಾಮಿಡಿ ಜಗದ್ಗುರು ಪೀಠಕ್ಕೆ ಅರಿಕೆಮಾಡಿಕೊಂಡರು. ಆಗ ಜಗದ್ಗುರು ಡಾ. ಶ್ರೀ ಜ.ಚ.ನಿಯವರು ಶಿಷ್ಯವೃಂದದ ಅಪೇಕ್ಷೆಯಂತೆಐತಾಂಡಹಳ್ಳಿ ಮಠದ ಜೀರ್ಣಾಭಿವೃದ್ದಿಗಾಗಿ ಗ್ರಾಮಸ್ಥರನ್ನೊಳಗೊಂಡ ಜೀರ್ಣೋದ್ಧಾರಕಮಿಟಿ ಮಾಡಿ ಅದಕ್ಕೆ ಏಜೆಂಟರೊಬ್ಬರನ್ನು ನೇಮಿಸಿ ಅವರಿಗೆ ಅಧಿಕಾರ ವಹಿಸಿದರು.ತದನಂತರ 1970ರ ಜೂನ್ 22ರಂದು ಈಗಿನ ಶ್ರೀಗಳಾದ ಶ್ರೀ ಮ.ಘ.ಚ. ನೀಲಕಂಠಶಿವಾಚಾರ್ಯ ಮಹಾಸ್ವಾಮಿಗಳನ್ನು ಶ್ರೀಮಠಕ್ಕೆ ಪಟ್ಟಾಧಿಕಾರಗೊಳಿಸಿದರು.ಪ್ರಸ್ತುತ ಶ್ರೀಗಳು ಶ್ರೀಮಠದ ಜೀರ್ಣಾಭಿವೃದ್ದಿ ಕಮಿಟಿ ಹಾಗೂ ಗ್ರಾಮಸ್ಥರಸಹಕಾರದೊಂದಿಗೆ ಶ್ರೀಮಠವನ್ನು ಜೀರ್ಣೋದ್ಧಾರಗೊಳಿಸಿದ್ದಲ್ಲದೇ, 1988ರ ಏಪ್ರಿˉï03ರಂದು ಅಚ್ಚಾಳು ಶ್ರೀ ವೀರಭದ್ರೇಶ್ವರ ದೇವಾಲಯವನ್ನು ನಿರ್ಮಿಸಿದ್ದಾರೆ.ಹಂತಹಂತವಾಗಿ ಶ್ರೀಮಠದ ಆಸ್ತಿಯನ್ನು ಪುನರ್ ಸಂಪಾದಿಸಿಕೊಂಡ ಶ್ರೀಗಳುಶ್ರೀಮಠವನ್ನು ಆಸ್ತಿವಂತ ಮಠವಾಗಿ ರೂಪಿಸಿದ್ದಾರೆ. ಕ್ರಿಯಾಶೀಲ ವ್ಯಕ್ತಿತ್ತ್ವದ ಶ್ರೀಗಳು ಕಳೆದನಾಲ್ಕೂವರೆ ದಶಕಗಳಲ್ಲಿ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸಲುಶ್ರಮಿಸಿದ್ದು ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.

Swamiji

Swamiji Name :
ಶ್ರೀ ಮ.ಘ.ಚ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
07-01-1947
Place :
ಐನಹಳ್ಳಿ, ಅರಸೀಕೆರೆ ತಾ||
Pattadikara :
22-06-1970
Photo :

Programs

ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ
ಜೂನ್ ತಿಂಗಳಲ್ಲಿ ಪ್ರಸ್ತುತ ಶ್ರೀಗಳ ವರ್ಧಂತಿ ಮಹೋತ್ಸವ

Photos

Full Address Kannada

ಶ್ರೀ ಗೂಳೂರು ಜಂಗಮ ಮಠ
ಐತಾಂಡಹಳ್ಳಿ, ಡಿ.ಕೆ.ಹಳ್ಳಿ (ಪೋ) - 563 114
ಬಂಗಾರಪೇಟೆ ತಾ||, ಕೋಲಾರ ಜಿಲ್ಲೆ

Map

Near by Places

ಬಂಗಾರಪೇಟೆ - 6 ಕಿ.ಮೀ.
ಕೋಲಾರ - 20 ಕಿ.ಮೀ.
ಹೊಸಕೋಟೆ - 52 ಕಿ.ಮೀ.

Statistic

33 Views
0 Rating
0 Favorite
0 Share
error: Content is protected !!