Shree Guddalishwara Swami Matha

Shree Guddalishwara Swami Matha Claimed

ಶ್ರೀ ಗುದ್ದಲೀಶ್ವರ ಸ್ವಾಮಿ ಮಠ

Average Reviews

Description

ಶ್ರೀ ಗುದ್ದಲೀಶ್ವರ ಸ್ವಾಮಿ ಮಠ

ಕರ್ತೃ ಶ್ರೀ ಮ.ನಿ.ಪ್ರ. ಗುದ್ದಲೀಶ್ವರ ಮಹಾಸ್ವಾಮಿಗಳು

ಹಾವೇರಿ ಜಿಲ್ಲೆಯ ಪ್ರಭಾವಿ ಮಠಗಳಲ್ಲೊಂದಾದ ಶ್ರೀ ಗುದ್ದಲೀಶ್ವರ ಸ್ವಾಮಿಮಠವು ಸುಮಾರು 18ನೇ ಶತಮಾನದ ಅಂತ್ಯಭಾಗದಲ್ಲಿ ಶ್ರೀ ಗುದ್ದಲೀಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿದೆ. ಹಾಗೆಯೇ ಶ್ರೀ ಗುದ್ದಲೀಶ್ವರ ಸಮಾಧಿ ಗದ್ದುಗೆÀ ಶ್ರೀಮಠದಲ್ಲಿದೆ.ಕತೃಗುರುಗಳಾದ ಶ್ರೀ ಗುದ್ದಲೀಶ್ವರ ಮಹಾಸ್ವಾಮಿಗಳು ಬಾಲ್ಯವಿರಾಗಿಗಳು. ಸಣ್ಣವಯಸ್ಸಿನಲ್ಲಿಯೇ ಮನೆ ತೊರೆದು ಶಿವದೀಕ್ಷೆ ಪಡೆದು ಲೋಕ ಸಂಚಾರ ಕೈಗೊಂಡ ಶ್ರೀಗಳುಉರುವಕೊಂಡದ ಶ್ರೀ ಕರಿಬಸವ ಸ್ವಾಮಿಗಳ ಆಶ್ರಮಕ್ಕೆ ಬಂದು ಆಧ್ಯಾತ್ಮ ವಿಚಾರಗಳಲ್ಲಿಪಾರಂಗತರಾಗಿ ಶ್ರೀ ಉರವಕೊಂಡ ಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಳ್ಳುತ್ತಾರೆ.ಆದರೆ ಒಂದೆಡೆ ನಿಲ್ಲಲು ಇಚ್ಛೆಪಡದ ಶ್ರೀಗಳು ಮತ್ತೆ ಲೋಕ ಸಂಚಾರಕ್ಕೆ ಹೊರಡುತ್ತಾರೆ.ಹೀಗೆ ಹೊರಟ ಶ್ರೀಗಳು ಅಲ್ಲಲ್ಲಿ ಪವಾಡಗಳನ್ನು ಮಾಡುತ್ತಾ ಅಂಚೋಳಿಗೆಆಗಮಿಸಿ ಅಲ್ಲಿನ ಗೌಡರ ಮನೆಯಲ್ಲಿ ತಮ್ಮ ಪವಾಡದೊಂದಿಗೆ ಗುದ್ದಲಿಯನ್ನು ಸ್ವೀಕರಿಸಿ ಶ್ರೀಗುದ್ದಲೀಶ್ವರ ಸ್ವಾಮಿಗಳೆಂದು ಹೆಸರಾಗುತ್ತಾರೆ. ನಂತರ ಚನ್ನೂರು ಗ್ರಾಮಕ್ಕೆ ಬರುವ ಶ್ರೀಗಳುಅಲ್ಲೇ ಮಠ ಸ್ಥಾಪಿಸಿ ನೆಲೆನಿಲ್ಲುತ್ತಾರೆ. ಕಾಲಾನಂತರ ಶ್ರೀ ಕೊಟ್ಟೂರೇಸ್ವರ ಸ್ವಾಮಿಗಳಿಗೆಅಧಿಕಾರ ವಹಿಸಿ ಕೊಟ್ಟು ಹೊಸರಿತ್ತಿಯಲ್ಲಿ ನೆಲೆನಿಂತು ಇಲ್ಲೇ ಸಮಾಧಿ ಹೊಂದುತ್ತಾರೆ.ಶ್ರೀ ಕೊಟ್ಟೂರೇಶ್ವರ ಸ್ವಾಮಿಗಳು ನಾಡಿನ ನಾನಾ ಭಾಗಗಳಲ್ಲಿ ಸಂಚರಿಸಿಧರ್ಮಪ್ರಚಾರ ಕೈಗೊಂಡು ಮಠವನ್ನು ಬೆಳಕಿಗೆ ತಂದಿದ್ದಾರೆ. ಇವರ ನಂತರ ಶ್ರೀ ಗುದ್ದಲಿಸ್ವಾಮಿಗಳು ಹಾಗೂ ಶ್ರೀ ಗದ್ದಿಗಪ್ಪಯ್ಯ ಸ್ವಾಮಿಗಳು ಕ್ರಿಯಾಶೀಲಮೂರ್ತಿಗಳಾಗಿದ್ದುಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ ತಮ್ಮ ಸಹೋದರ ಸಂಬಂಧಿಯಾದ ಶ್ರೀಗುದ್ದಲೀಶ್ವರರನ್ನು ಉತ್ತರಾದಿಕಾರಿಗಳನ್ನಾಗಿ ಮಾಡಿಕೊಳ್ಳುತ್ತಾರೆ.ಶ್ರೀ ಗುದ್ದಲೀಶ್ವರ ಸ್ವಾಮಿಗಳು 1967ರಲ್ಲಿ ಶ್ರೀ ಮಠದ ಆಡಳಿತವನ್ನುವಹಿಸಿಕೊಂಡು ಹಿರಿಯ ಗುರುಗಳ ಹಾದಿಯಲ್ಲಿಯೇ ಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ.ಮಠದ ಆಸ್ತಿಯನ್ನು ಅಭಿವೃದ್ಧಿಪಡಿಸಿ ಮಠಕ್ಕೆ ಹೆಚ್ಚಿನ ಆದಾಯ ಬರುವಂತೆ ಮಾಡಿದ್ದಾರೆಹಾಗೆಯೇ ಗ್ರಾಮಾಂತರ ಮಕ್ಕಳಿಗೆ ಓದಿಗೆ ಬೇಕಾದ ಸಹಾಯ ಹಾಗೂ ಜಾಗೃತಿಯನ್ನುಮಾಡುತ್ತಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಗುದ್ದಲೀ ಶಿವಯೋಗಿ ಸ್ವಾಮಿಗಳು
Date of Birth :
26-10-1951
Place :
ಹೊಸರಿತ್ತಿ, ಹಾವೇರಿ ತಾ||
Pattadikara :
ಮೇ 1967
Photo :

Programs

ಪ್ರತಿ ಅಮವಾಸ್ಯೆಗÉ ಶಿವಾನುಭವ ಗೋಷ್ಠಿ.
ಬನದ ಹುಣ್ಣಿಮೆಗೆ ಶ್ರೀಮಠದ ಜಾತÉ್ರ ದಸರಾದ ದುರ್ಗಾಷ್ಠಮಿಯಂದು ಲಕ್ಷದೀಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ,
ಪ್ರವಚನ ಹಾಗೂ ಕಾರ್ಯಕ್ರಮಗಳು..

Institutions

ಕಿರಿಯ/ ಹಿರಿಯ ಪ್ರಾಥಮಿಕ ಶಾಲೆ.
ಸಂಗೀತ ಪಾಠಶಾಲೆ

Photos

Full Address Kannada

ಶ್ರೀ ಗುದ್ದಲೀಶ್ವರ ಸ್ವಾಮಿ ಮಠ
ಹೊಸರಿತ್ತಿ- 581 213
ಹಾವೇರಿ (ತಾ.) (ಜಿ.)

Map

Near by Places

ಗುತ್ತಲ - 11 ಕಿ.ಮೀ.
ರಾಣೆಬೆನ್ನೂರು - 38 ಕಿ.ಮೀ.
ಹಾವೇರಿ - 24 ಕಿ.ಮೀ.

Statistic

16 Views
0 Rating
0 Favorite
0 Share
error: Content is protected !!