Shree Gouda Halli Virakta Matha

Shree Gouda Halli Virakta Matha Claimed

ಶ್ರೀ ಗೌಡಹಳ್ಳಿ ವಿರಕ್ತ ಮಠ

Average Reviews

Description

ಶ್ರೀ ಗೌಡಹಳ್ಳಿ ವಿರಕ್ತ ಮಠ

ಕರ್ತೃ – ಶ್ರೀ.ಮ.ನಿ.ಪ್ರ. ಬಳ್ಳಾರಿ ಮಹಾಂತ ಮಹಾಸ್ವಾಮಿಗಳು

ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಗ್ರಾಮವು
ತಾಲ್ಲೂಕು ಕೇಂದ್ರದಿಂದ 08 ಕಿ.ಮೀ ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ
ಅಸ್ತಿತ್ವದಲ್ಲಿರುವ ಶ್ರೀ ಗೌಡಹಳ್ಳಿ ವಿರಕ್ತ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ
ಕಾರ್ಯಚಟುವಟಿಕೆಗಳ ಮುಖೇನ ಪ್ರಚಲಿತದಲ್ಲಿದೆ. ಸುಮಾರು ಒಂದು ಶತಮಾನಕ್ಕಿಂತಲೂ
ಹೆಚ್ಚಿನ ಇತಿಹಾಸ ಹೊಂದಿರುವ ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಮ.ನಿ.ಪ್ರ. ಬಳ್ಳಾರಿ
ಮಹಾಂತ ಮಹಾಸ್ವಾಮಿಗಳನ್ನು ಗುರುತಿಸಲಾಗಿದೆ.
ಉತ್ತರದ ಕಡೆಯಿಂದ ಬಂದ ಶ್ರೀ ಬಳ್ಳಾರಿ ಮಹಾಂತ ಮಹಾಸ್ವಾಮಿಗಳು
ದೇವನಹಳ್ಳಿಯಲ್ಲಿ ನೆಲೆಸಿ ಅಲ್ಲಿಂದ ಮುಂದೆ ಸಂಚಾರದಲ್ಲಿ ಗೌಡಹಳ್ಳಿಗೆ ಬಂದು ನೆಲೆನಿಂತು
ಮಠವನ್ನು ಸ್ಥಾಪನೆ ಮಾಡಿದ್ದಾರೆ. ಇವರ ನಂತರ ಶ್ರೀಮಠದ ಅಧಿಕಾರಕ್ಕೆ ಬಂದ ಹಿಂದಿನ
ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು ಭಕ್ತರ ಸಹಕಾರದೊಂದಿಗೆ
ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶತಾಯುಷಿಗಳಾಗಿ ಸುದೀರ್ಘಕಾಲ
ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿದ ಶ್ರೀಗಳು 1984ರಲ್ಲಿ ಲಿಂಗೈಕ್ಯರಾಗಿದ್ದಾರೆ.
ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ಮರಿ ತೋಂಟದಾರ್ಯ ಸ್ವಾಮಿಗಳು
ಹಿಂದಿನ ಗುರುಗಳಿರುವಾಗಲೇ 1981ರಲ್ಲಿ ಗುರುಗಳ ಸಮ್ಮುಖದಲ್ಲಿ ನಂಜನಗೂಡು
ತಾಲ್ಲೂಕು ಹುಲ್ಲಳ್ಳಿಯ ಹಿರಿಯ ಸ್ವಾಮಿಗಳ ಅನುಗ್ರಹದಿಂದ ಪಟ್ಟಾಧಿಕಾರ ಸ್ವೀಕರಿಸಿದರು.
ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಪರಿಪಕ ್ವಗೊಂಡ ಶ್ರೀಗಳು ¨s Àಕ ್ತರ
ಸಹಕಾರದೊಂದಿಗೆ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದು ಶ್ರೀಮಠದ
ಕಟ್ಟಡವನ್ನು ಜೀಣೋದ್ಧಾರಗೊಳಿಸಿದ್ದಾರೆ.
ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ವಿಶೇಷ ಸಂದರ್ಭಗಳಲ್ಲಿ
ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಬಸವ ಜಯಂತಿಯನ್ನು ಭಕ್ತರ
ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಶ್ರೀಗಳು ಶ್ರೀಮಠದಲ್ಲಿ ಆಗಾಗ್ಗೆ ಲಿಂಗಧಾರಣೆ
ಹಾಗೂ ಅಯ್ಯಾಚಾರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾg

Swamiji

Swamiji Name :
ಶ್ರೀ ನಿ.ಪ್ರ.ಸ್ವ. ಮರಿತೋಂಟದಾರ್ಯ ಸ್ವಾಮಿಗಳು
Date of Birth :
01-04-1960
Place :
ಗೌಡಹಳ್ಳಿ, ಯಳಂದೂರು ತಾ||
Pattadikara :
1981
Photo :

Programs

ಬಸವ ಜಯಂತಿ ಆಚರಣೆ ಆಗಾಗ್ಗೆ ಲಿಂಗದಾರಣೆ ಆಯ್ಯಾಚಾರ ಕಾರ್ಯಕ್ರಮಗಳು

Photos

Full Address Kannada

ಶ್ರೀ ಗೌಡಹಳ್ಳಿ ವಿರಕ್ತ ಮಠ
ಗೌಡಹಳ್ಳಿ - 571 441
ಯಳಂದೂರು ತಾ|| ಚಾಮರಾಜನಗರ ಜಿ||

Map

Near by Places

ಯಳಂದೂರು 8 ಕಿ.ಮೀ.
ಚಾಮರಾಜನಗರ 25ಕಿ.ಮೀ.

Statistic

44 Views
0 Rating
0 Favorite
0 Share
error: Content is protected !!