Shree Gavimatha, Navalgunda

Shree Gavimatha, Navalgunda Claimed

ಶ್ರೀ ಗವಿಮಠ, ನವಲಗುಂದ

Average Reviews

Description

ಶ್ರೀ ಗವಿಮಠ, ನವಲಗುಂದ

ಕರ್ತೃ ಶ್ರೀ ಮ.ನಿ.ಪ್ರ. ಜಡೆಸಿದ್ದ ಶಿವಯೋಗಿಗಳು

ನವಲಗುಂದ ಪಟ್ಟಣದ ಗುಡ್ಡದ ತಪ್ಪಲಿನಲ್ಲಿರುವ ಶ್ರೀ ಗವಿಮಠವು ಪುರಾತನಇತಿಹಾಸವನ್ನು ಹೊಂದಿದ್ದು ಶ್ರೀಮಂತ ಪರಂಪರೆ ಹೊಂದಿದೆ. 15ನೇ ಶತಮಾನದಲ್ಲಿ ಶ್ರೀತೋಂಟದ ಸಿದ್ದಲಿಂಗೇಶ್ವರರು ತಮ್ಮ ನೂರೊಂದು ವಿರಕ್ತರೊಡನೆ ಸಂಚಾರದಲ್ಲಿದ್ದಸಂದರ್ಭದಲ್ಲಿ ನವಲಗುಂದಕ್ಕೆ ಆಗಮಿಸಿ ಅನುಷ್ಠಾನಗೊಂಡಿದ್ದರು. ಆ ಸಮಯದಲ್ಲಿ ಭಕ್ತರಕೋರಿಕೆಗೆ ತಮ್ಮ ಶಿಷ್ಯರಾಗಿದ್ದ ಶ್ರೀ ಜಡೆಸಿದ್ದ ಶಿವಯೋಗಿಗಳನ್ನು ಇಲ್ಲಿ ನೆಲೆಸಿ ಧರ್ಮ ಪ್ರಸಾರಮಾಡುವಂತೆ ಆಶೀರ್ವದಿಸಿ ಮುನ್ನಡೆದರೆಂದು ಹೇಳಲಾಗುತ್ತದೆ. ಹೀಗೆ ಇಲ್ಲಿ ನೆಲೆಗೊಂಡಶ್ರೀ ಜಡೆಸಿದ್ದ ಶಿವಯೋಗಿಗಳು ನವಲಗುಂದದ ಜೈನ ಗೌಡನಿಗೆ ತಮ್ಮ ಪವಾಡ ತೋರಿದ್ದರಿಂದ ಗೌಡನು ಶ್ರೀಗಳು ನೆಲೆನಿಂತಿದ್ದ ಗವಿ ಹಾಗೂ ಸುತ್ತಮುತ್ತಲಲ್ಲಿ ಭೂಮಿಯನ್ನು ದಾನಮಾಡಿ ಶ್ರೀಮಠದ ಅಭಿವೃದ್ಧಿಗೆ ಕಾರಣರಾದರೆಂಬ ಜನಪದ ಕಥೆ ಪ್ರಚುರದಲ್ಲಿದೆ.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ನಿಖರ ದಾಖಲೆಗಳು ಲಭ್ಯವಿಲ್ಲ.ಈಗ್ಗೆ 3 ತಲೆಮಾರುಗಳ ಬಗ್ಗೆ ಮಾತ್ರ ತಿಳಿದುಬರುತ್ತದೆ. ಪರಂಪರೆಯ ಶ್ರೀ ಸಿದ್ದಲಿಂಗ ಸ್ವಾಮಿಗಳು ಭಕ್ತರ ಶ್ರೇಯೋಭಿವೃದ್ದಿಗೆ ಸದಾ ಕಟಿಬದ್ಧರಾಗಿದ್ದು ತಮ್ಮ ಉತ್ತರಾಧಿಕಾರಿಗಳನ್ನಾಗಿಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳನ್ನು ನೇಮಿಸಿಕೊಂಡರು. ಶ್ರೀಬಸವಲಿಂಗ ಸ್ವಾಮಿಗಳು ಗುರುಗಳ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಶಿಕ್ಷಣ ಪಡೆದುಸಿರಸಂಗಿ, ದಾರವಾಡ, ಹುಬ್ಬಳ್ಳಿ ಮೂರುಸಾವಿರ ಮಠಗಳಲ್ಲಿ ಸಂಸ್ಕøತವನ್ನು ಅಭ್ಯಸಿಸಿದರು.ನಂತರ ಶಿವಯೋಗ ಮಂದಿರ ಸ್ಥಾಪನೆಯ ವರ್ಷದ ಸಪ್ತ ಜನ ಸಾಧಕರಲ್ಲಿ ಒಬ್ಬರಾಗಿಹಾನಗಲ್ಲ ಗುರು ಕುಮಾರ ಸ್ವಾಮಿಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಿ ಗವಿಮಠಕ್ಕೆ ಮರಳಿಶ್ರೀಮಠದ ಅಧಿಕಾರ ಸ್ವೀಕರಿಸಿದರು.ಶ್ರೀಗಳು ಶ್ರೀಮಠವನ್ನು ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸಾಂಸ್ಕøತಿಕಕ್ಷೇತ್ರಗಳಲ್ಲಿ ಶ್ರೀಮಂತಗೊಳಿಸಿದರು. ಬಾಗಲಕೋಟೆಯಲ್ಲಿ ಶ್ರೀ ಬಸವೇಶ್ವರ ಕಾಲೇಜು ಹಾಗೂನವಲಗುಂದ, ಹುಬ್ಬಳ್ಳಿಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದರು. ಈಗಿನ ಶ್ರೀಗಳಾದಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು 1999ರ ಏಪ್ರಿಲ್ 23ರಂದು ಶ್ರೀಮಠದ ಅಧಿಕಾರಸ್ವೀಕರಿಸಿ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವತ್ತ ಚಿತ್ತ ಹರಿಸಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳು
Date of Birth :
11-11-1969
Place :
ಬಸರಕೋಡ, ರೋಣ ತಾ||
Pattadikara :
23-4-1999
Photo :

Programs

ಪ್ರತಿ ಅಮವಾಸ್ಯೆಗೆ ಶಿವಾನುಭವ ಗೋಷ್ಠಿ.
ವೈಶಾಖ ಮಾಸದಲ್ಲಿ ಶ್ರೀಮಠದ ಜಾತ್ರೆ.
(ಶ್ರೀಮಠದಲ್ಲಿ ಸರ್ವ ಧರ್ಮ ಸಮ್ಮೇಳನ, ಮಹಿಳಾಗೋಷ್ಠಿ, ಆರೋಗ್ಯ ಚಿಂತನ, ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುತ್ತವೆ.)

Photos

Full Address Kannada

ಶ್ರೀ ಗವಿಮಠ
ನವಲಗುಂದ - 581 113
ಧಾರವಾಡ ಜಿ||

Map

Near by Places

ನರಗುಂದ - 19 ಕಿ.ಮೀ.
ಹುಬ್ಬಳ್ಳಿ - 30 ಕಿ.ಮೀ.
ಧಾರವಾಡ - 30 ಕಿ.ಮೀ.

Statistic

349 Views
0 Rating
0 Favorite
0 Share
error: Content is protected !!