ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಬೆಟ್ಟದಹಳ್ಳಿ ಹೊರವಲಯದ ಗುಡ್ಡದತಪ್ಪಲಿನಲ್ಲಿ ಸ್ಥಾಪಿತಗೊಂಡಿರುವ ಶ್ರೀ ಗವಿ ಮಠವು ತನ್ನ ಧಾರ್ಮಿಕ, ಸಾಮಾಜಿಕ ಹಾಗೂಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಮೂಲಕ ಈ ಭಾಗದಲ್ಲಿ ಪ್ರಸಿದ್ಧಿಯಲ್ಲಿದೆ. ಹನ್ನೆರಡನೇಶತಮಾನದ ಕಲ್ಯಾಣ ಕ್ರಾಂತಿಯ ನಂತರ ದಕ್ಷಿಣದ ಕಡೆಗೆ ಬಂದ ಶರಣರು ಅಲ್ಲಲ್ಲಿನೆಲೆನಿಂತು ಧರ್ಮಪ್ರಸಾರ ಮಾಡಿದರು. ಈ ರೀತಿ ಕೆಲ ಶರಣರು ಬೆಟ್ಟದಹಳ್ಳಿ ಗುಡ್ಡದಗವಿಯಲ್ಲಿ ವಾಸ್ತವ್ಯ ಹೂಡಿ ಅನುಷ್ಠಾನಗೊಂಡು ಈ ಕ್ಷೇತ್ರವನ್ನು ಜಾಗೃತ ಸ್ಥಳವನ್ನಾಗಿರೂಪಿಸಿದ್ದರು. ಆ ನಂತರ ಅನೇಕ ಶರಣ-ಶರಣೆಯರು ಇಲ್ಲೆ ನೆಲೆಗೊಂಡಿದ್ದರೆಂಬ ಪ್ರತೀತಿ.ಹನ್ನೆರಡನೇ ಶತಮಾನದಿಂದಲೂ ಧರ್ಮ ಜಾಗೃತಿ ಮೂಡಿಸುತ್ತಿದ್ದ ಈ ಗವಿಮಠಕ್ಕೆ ಜಂಗಮ ಮೂರ್ತಿಗಳಾಗಿ ಬಂದವರೇ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನಶಿವಯೋಗಿಗಳು. ಶ್ರೀಗಳ ಪೂರ್ವಾಶ್ರಮದ ಸ್ಥಳ ಬಾಣಹಳ್ಳಿಯಾಗಿದ್ದು, ಅಲ್ಲಿಂದಗುರುವನ್ನರಸಿ, ಕೆಂಗಲ್ ಗವಿಯಲ್ಲಿ ಗುರುವಿನಿಂದ ಪರಿಶುದ್ಧರಾಗಿ, ಸಂಚಾರ ಹೊರಟುಶ್ರೀಗಳು ತಮ್ಮ ಇಳಿವಯಸ್ಸಿನಲ್ಲಿ ಬಂದು ತಲುಪಿದ್ದು ಬೆಟ್ಟದಹಳ್ಳಿಗೆ. ಇದು ಈ ಭಾಗದ ಜನರಸುದೈವವೆಂದೇ ಇಲ್ಲಿಯ ಭಕ್ತರು ಹೇಳುತ್ತಾರೆ. ಶ್ರೀ ಗವಿಮಠದಲ್ಲಿ ಕೇವಲ 9 ತಿಂಗಳ ಕಾಲಜೀವಿಸಿದ್ದ ಜಂಗಮಮೂರ್ತಿ ಅಷ್ಟರಲ್ಲೇ ಅಪಾರ ಸಂಖ್ಯೆಯ ಭಕ್ತರನ್ನು ಸಂಪಾದಿಸಿಕೊಂಡುಅವರಿಗೆ ಸನ್ಮಾರ್ಗ ತೋರಿದ್ದರು. ಇವರ ಸಮಾದಿ ಗದ್ದುಗೆಯನ್ನು ಭಕ್ತರು ಗವಿಮಠದಲ್ಲಿಯೇಸ್ಥಾಪಿಸಿ ನಿತ್ಯಪೂಜೆಗೆ ಒಳಪಡಿಸಿದರು.ತದ ನಂತರ ಶ್ರೀ ಮಠವು ಮತ್ತೆ ಖಾಲಿ ಉಳಿದಾಗ ಗ್ರಾಮದ ಭಕ್ತರ ಅಪೇಕ್ಷೆಮೇರೆಗೆ ತುಮಕೂರು ಸಿದ್ದಗಂಗಾ ಶ್ರೀಗಳು ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚಂದ್ರಶೇಖರಸ್ವಾಮಿಗಳನ್ನು ಶ್ರೀ ಮಠಕ್ಕೆ ನೇಮಿಸಿದರು. 1975ರ ಮೇ 22ರಂದು ಸಿದ್ದಗಂಗಾ ಕ್ಷೇತ್ರದಲ್ಲಿಪಟ್ಟಾಧಿಕಾರದ ಅನುಗ್ರಹ ಸ್ವೀಕರಿಸಿದ ಶ್ರೀಗಳು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ 1977ರಲ್ಲಿಬೆಟ್ಟದಹಳ್ಳಿ ಮಠಕ್ಕೆ ಆಗಮಿಸಿದರು. ಕ್ರಿಯಾಶೀಲ ವ್ಯಕ್ತಿತ್ವದವರಾದ ಶ್ರೀ ಚಂದ್ರಶೇಖರಸ್ವಾಮಿಗಳು ಭಕ್ತರನ್ನು ಸಂಘಟಿಸಿ ಅವರ ಸಹಕಾರದೊಂದಿಗೆ ಶ್ರೀ ಮಠವನ್ನು ಬೃಹತ್ತಾಗಿಬೆಳೆಸಲು ಶ್ರಮವಹಿಸುತ್ತಿದ್ದಾರೆ. ಶ್ರೀ ಮಠದ ವತಿಯಿಂದ ಶ್ರೀ ಮಲ್ಲಿಕಾರ್ಜುನ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಅದರ ಅಡಿಯಲ್ಲಿ ಸಂಸ್ಕøತ ಪಾಠಶಾಲೆಗಳೂ ಸೇರಿದಂತೆ ಅನೇಕಶಿಕ್ಷಣ ಕೇಂದ್ರಗಳನ್ನು ತೆರೆದಿದ್ದಾರೆ. ಶ್ರೀಗಳ ನೇತೃತ್ವದಲ್ಲಿ ಇಂದು ಶ್ರೀ ಮಠವು ಈ ಭಾಗದಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ.
Swamiji
Swamiji Name :
ಶ್ರೀ ಮ. ನಿ. ಪ್ರ. ಚಂದ್ರಶೇಖರ ಸ್ವಾಮಿಗಳು
Date of Birth :
01-06-1958
Place :
ಕೊಟ್ಟನಹಳ್ಳಿ, ತುಮಕೂರು ತಾ||
Pattadikara :
22-05-1975
Photo :
Programs
ಪ್ರತಿ ಪೌರ್ಣಮಿಯಂದು ಭಜನೆ ಮತ್ತು ತತ್ವ ಚಿಂತನೆ ಹಾಗೂ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳು ಬಸವ ಜಯಂತಿಯಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಶ್ರೀ ಸಿದ್ಧರಾಮ ಜಯಂತಿ ಆಚರಣೆ ಜುಲೈನಲ್ಲಿ "ಅನಾದಿ ನಿರಂಜನ ಜಂಗಮೋತ್ಸವ" ಕಾರ್ಯಕ್ರಮ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ಸಂಸ್ಕøತ ಪಾಠಶಾಲೆ ಸರ್ವೆ ಕಾಲೇಜು ಮತ್ತು ಟೈಲರಿಂಗ್ ತರಬೇತಿ ಕೇಂದ್ರ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ ನಿಲಯ ಅನಾಥಾಶ್ರಮ
Photos
Full Address Kannada
ಶ್ರೀ ಗವಿಮಠ ಬೆಟ್ಟದಹಳ್ಳಿ - 572 222 ಗುಬ್ಬಿ ತಾ||, ತುಮಕೂರು ಜಿಲ್ಲೆ