ಬೀದರ್ ಜಿಲ್ಲೆಯ ಗಾದಗಿ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಗವಿಮಠವು ತನ್ನಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುತ್ತಿದೆ.ಶ್ರೀ ಗವಿಮಠವು ಶ್ರೀಮದ್ ಕಾಶಿಪೀಠದ ಶಾಖಾಮಠವಾಗಿ ಪಂಚಪೀಠಗಳ ಸಂಪ್ರದಾಯದಅನುಗುಣವಾಗಿ ಮುನ್ನಡೆದುಕೊಂಡು ಬರುತ್ತಿದೆ.ಶ್ರೀಮಠದ ಕರ್ತೃಗುರುಗಳು ಹಾಗೂ ನಂತರದ ಪರಂಪರೆಯ ಬಗ್ಗೆ ತಿಳಿದುಬರುವುದಿಲ್ಲ. ಶ್ರೀಮಠದ ಹೊಲದಲ್ಲಿ ಮೂರು ಗದ್ದುಗೆಗಳನ್ನು ಕಾಣಬಹುದಾಗಿದ್ದು ಇದರಆಧಾರದ ಮೇಲೆ ಶ್ರೀಮಠದಲ್ಲಿ ಮೂರಕ್ಕಿಂತ ಹೆಚ್ಚಿನ ಶ್ರೀಗಳು ಅಧಿಕಾರ ನಡೆಸಿದ್ದರೆಂದುಅಂದಾಜಿಸಬಹುದಾಗಿದೆ. ಹಿಂದಿನ ಶ್ರೀಗಳಾದ ಪೂಜ್ಯ ಶ್ರೀ ಮಡಿವಾಳೇಶ್ವರ ದೇಶಿಕರುಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಭಕ್ತರಿಗೆ ಸೂಕ್ತ ಮಾರ್ಗದರ್ಶನನೀಡುತ್ತಿದ್ದರು.ಈಗಿನ ಶ್ರೀಗಳಾದ ಪೂಜ್ಯ ಶ್ರೀ ವೈಜನಾಥ ದೇಶಿಕರು 1942ರಲ್ಲಿ ಇದೇ ಗ್ರಾಮದಲ್ಲಿಜನಿಸಿದವರಾಗಿದ್ದು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಭಕ್ತರನ್ನು ಸಂಪಾದಿಸಿಕೊಂಡಿದ್ದು ಅವರ ಸಹಕಾರದೊಂದಿಗೆಇತ್ತೀಚೆಗೆ 2011ರಲ್ಲಿ ಶ್ರೀಮಠವನ್ನು ನವೀಕರಿಸಿದ್ದು ಇನ್ನೂ ಹೆಚ್ಚಿನ ಅಭಿವೃದ್ಧಿಯತ್ತ ಗಮನಹರಿಸಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಗೆಶಿವಾನುಭವಗೋಷ್ಠಿಗಳನ್ನು ನಡೆಸಲಾಗುತ್ತದೆ. ಹಾಗೂ ಜೇಷ್ಠ ಮಾಸದ ಶುದ್ಧ ನವಮಿಗೆಹಿಂದಿನ ಶ್ರೀಗಳಾದ ಲಿಂ. ಶ್ರೀ ಮಡಿವಾಳೇಶ್ವರ ದೇಶಿಕರ ಪುಣ್ಯಾರಾಧನೆ ಮಹೋತ್ಸವವನ್ನುಆಚರಿಸಲಾಗುತ್ತಿದ್ದು ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.
Swamiji
Swamiji Name :
ಪೂಜ್ಯ ಶ್ರೀ ವೈಜನಾಥ ದೇಶಿಕರು
Date of Birth :
1947
Place :
ಗಾದಗಿ, ಬೀದರ್ ತಾ||
Photo :
Programs
ಪ್ರತಿ ಅಮವಾಸ್ಯೆಗೆ ಶಿವಾನುಭವಗೋಷ್ಠಿ.
ಜೇಷ್ಠ ಶುದ್ಧ ನವಮಿಗೆ ಲಿಂ. ಶ್ರೀ ಮಡಿವಾಳೇಶ್ವರ ದೇಶಿಕರ ಪುಣ್ಯ ಸ್ಮರಣೋತ್ಸವ.
ಬಸವಜಯಂತಿ ಹಾಗೂ ಶ್ರೀ ರೇಣುಕ ಜಯಂತಿಗಳ ಆಚರಣೆ.