ಗದಗ ತಾಲ್ಲೂಕಿನ ಮುಳಗುಂದ ಗ್ರಾಮದ ಮಧ್ಯಭಾಗದಲ್ಲಿ ಸುಮಾರು 18-19ನೇಶತಮಾನದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಗವಿಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕಕೇಂದ್ರವಾಗಿ ಬೆಳೆದು ಬಂದಿದೆ. ಬಿಜಾಪುರ ಜಿಲ್ಲೆಯ ಎರನಾಳದಲ್ಲಿ 1823ರಲ್ಲಿ ಬಾಲ್ಯದಲ್ಲೇತಂದೆ ತಾಯಿಗಳನ್ನು ಕಳೆದುಕೊಂಡು ಮುಳುಗುಂದದ ಕಲ್ಮಠದ ಶ್ರೀಗಳ ಜೋಳಿಗೆಗೆಸೇರಿದವರೆ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು. ಇವರಿಂದಾಗಿಯೇ ಶ್ರೀ ಮಠವುಹೆಚ್ಚು ಪ್ರಚಲಿತಕ್ಕೆ ಬಂದು ನಾಡಿನಾದ್ಯಂತ ಪಸರಿಸಿತು. ಇವರ ಪೂರ್ವದಲ್ಲಿ ಶ್ರೀಗವಿಮಠವನ್ನು ಶ್ರೀ ಗುರು ಮಹಾಂತ ಶಿವಯೋಗಿಗಳು ಸಮರ್ಥವಾಗಿ ಮುನ್ನಡೆಸಿದ್ದರೆಂದುತಿಳಿದುಬರುತ್ತದೆ.ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು ಬಾಲ್ಯದಲ್ಲೇ ಲಿಂಗನಾಯಕನ ಹಳ್ಳಿಹಾಲುವರ್ತಿ ವಿರಕ್ತಮಠದ ಶ್ರೀ ಚನ್ನವೀರಸ್ವಾಮಿಗಳ ಹತ್ತಿರ ವಿದ್ಯಾರ್ಜನೆ ಮಾಡಿ, ಲೋಕಸಂಚಾರ ಕೈಗೊಂಡು ಪುನಃ ಮುಳಗುಂದಕ್ಕೆ ಆಗಮಿಸಿದರು. ಶ್ರೀಗಳು ಹಿಂದಿನ ಶ್ರೀಗಳಆಶಯದಂತೆ ಶ್ರೀ ಗವಿಮಠದ ಅಧಿಕಾರವನ್ನು ವಹಿಸಿಕೊಂಡು ತಮ್ಮ ತಪೋಶಕ್ತಿಯಿಂದಾಗಿನಾಡಿನಾದ್ಯಂತ ಪ್ರಸಿದ್ದರಾಗಿದ್ದರು.ಶ್ರೀಗಳು ಮುಳಗುಂದದ ಬಸಮ್ಮನೆಂಬ ಮಹಾಮಾತೆಯ ಇಬ್ಬರು ಮಕ್ಕಳುಹಾವುಕಚ್ಚಿ ತೀರಿಕೊಂಡಾಗ ಆ ತಾಯಿಯ ದುಃಖವನ್ನು ಕಂಡು “ಅವ್ವಾ! ಇನ್ನು ಮುಂದೆನಾನೇ ನಿನ್ನ ಮಗನೆಂದು ಸಮಾದಾನ ಪಡಿಸಿ ಬಾಲಲೀಲೆಗಳನ್ನು ತೋರಿಸಿದರು. ಮುಂದೆಆ ತಾಯಿಯು ತೀರಿಕೊಂಡಾಗ ತಾವು ವಿರಕ್ತರಾಗಿದ್ದರೂ ಆ ತಾಯಿಯ ಅಗಲುವಿಕೆಯನೋವನ್ನು ಅನುಭವಿಸುತ್ತಾರೆ. ಆಗ ರಚನೆಗೊಂಡವೇ ನಾಡಿನ ಅಮೂಲ್ಯ ಕೆಲವೇ ಕೈವಲ್ಯಕೃತಿಗಳಲ್ಲಿ ಒಂದಾದ “ಕೈವಲ್ಯ ದರ್ಪಣ”.ಶ್ರೀಗಳ ನಂತರ ಶ್ರೀ ಮಠದ ಅಧಿಕಾರ ವಹಿಸಿಕೊಂಡ ಎಲ್ಲಾ ಶ್ರೀಗಳುಶ್ರೀಮಠವನ್ನು ಧಾರ್ಮಿಕವಾಗಿ ಸಾಮಾಜಿಕವಾಗಿ ಮುನ್ನಡೆಸಿದ್ದಾರೆ. ಈಗಿನ ಶ್ರೀಗಳಾದ ಶ್ರೀಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು 1974ರಲ್ಲಿ ಶ್ರೀ ಮಠದ ಅಧಿಕಾರವಹಿಸಿಕೊಂಡಿದ್ದು ಶ್ರೀಮಠದ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಗಳು ಪ್ರಸ್ತುತ ಧಾರವಾಡ ಮುರುಘಾಮಠದ ಅಧಿಕಾರವನ್ನು ವಹಿಸಿಕೊಂಡುಅಭಿವೃದ್ದಿಪಡಿಸುತ್ತಿದ್ದಾರೆ. ಈಗಿನ ಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಸರ್ವಾಂಗೀಣವಾಗಿಅಭಿವೃದ್ದಿ ಕಂಡಿದ್ದು ಭಕ್ತರಿಗೆ ಸನ್ಮಾರ್ಗ ತೋರುತ್ತಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಮಲ್ಲೀಕಾರ್ಜುನ ಮಹಾಸ್ವಾಮಿಗಳು
Date of Birth :
1974
Place :
ಕೆರೂರು, ಬಾದಾಮಿ ತಾ||
Photo :
Programs
ಬಸವ ಜಯಂತಿ ಆಚರಣೆ ಮಾಘ ಮಾಸದಲ್ಲಿ ಶ್ರೀಮಠದ ಜಾತ್ರೆ
ಶ್ರಾವಣ ಮಾಸ ಮತ್ತು ಮಹಾನವಮಿಯಲ್ಲಿ ನಿತ್ಯ ವಿಶೇಷ ಪೂಜೆ
Institutions
ಪ್ರಸಾದ ವಸತಿ ಇದೆ.
ಸಂಸ್ಕøತ ವೇದ ಪಾಠಶಾಲೆ ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
ಕಾಲೇಜ್