ಕರ್ತೃ – ಪೂಜ್ಯ ಶ್ರೀ ಗದ್ದುಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಅಫಜಲಪುರ ತಾಲ್ಲೂಕು ಕೇಂದ್ರದಿಂದ 11 ಕಿ.ಮೀ. ದೂರದಲ್ಲಿರುವ ಚಿಂಚೋಳಿಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಗದ್ದುಗೇಶ್ವರ ಮಠವು ಶ್ರೀಮದ್ ಉಜ್ಜಯಿನಿ ಪೀಠದಶಾಖಾಮಠವಾಗಿದ್ದು ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಪೂಜ್ಯ ಶ್ರೀಗದ್ದುಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಗದ್ದುಗೇಶ್ವರಮಠದ ಸ್ಥಾಪಿತ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಪುರಾತನ ಕಾಲದಿಂದಲೂ ತನ್ನ ಅಸ್ತಿತ್ತ್ವವನ್ನು ಉಳಿಸಿಕೊಂಡು ಬಂದ ಮಠದಗುರುಪರಂಪರೆಯ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲವಾದರೂ ಇಲ್ಲಿಯವರೆಗೂ 9 ಜನ ಶ್ರೀಗಳುಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿರುವುದು ತಿಳಿದು ಬರುತ್ತದೆ. ಪರಂಪರೆಯ ಹಿಂದಿನಶ್ರೀಗಳಾದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು 1988ರಲ್ಲಿ ಶ್ರೀಮಠದಪಟ್ಟಾಧಿಕಾರ ಸ್ವೀಕರಿಸಿ ಧಾರ್ಮಿಕ ಆಚರಣೆಗಳೊಂದಿಗೆ ಶ್ರೀಮಠವನ್ನು ಅಭಿವೃದ್ಧಿಪಡಿಸಿದ್ದು2008ರಲ್ಲಿ ಲಿಂಗೈಕ್ಯರಾಗಿದ್ದಾರೆ. ಗುರುಗಳು ಶ್ರೀಮಠದ ಜೊತೆಯಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿತಾಲ್ಲೂಕಿನ ಇಸ್ಲಾಂಪುರದ ಶ್ರೀ ಅಡವಿ ಸಿದ್ದೇಶ್ವರ ವಿರಕ್ತ ಮಠದ ಅಧಿಕಾರವನ್ನೂನಿರ್ವಹಿಸಿಕೊಂಡು ಬಂದಿದ್ದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು ಶ್ರೀ ಗದ್ದುಗೇಶ್ವರ ಮಠದ 9ನೇ ಪೀಠಾಧಿಪತಿಗಳಾಗಿ 2012ರ ಏಪ್ರಿಲ್ 13ರಂದುಪಟ್ಟಕ್ಕೆ ಬಂದಿದ್ದು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳುಶಿವಯೋಗ ಮಂದಿರದಲ್ಲಿ ಸಂಸ್ಕøತ, ಕಾವ್ಯ, ವೇದ, ಯೋಗ, ಉಪನಿಷತ್ತುಗಳ ಬಗ್ಗೆಆಳವಾದ ಅರಿವನ್ನು ಪಡೆದುಕೊಂಡವರಾಗಿದ್ದಾರೆ.ಶ್ರೀ ಷ.ಬ್ರ. ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಪುರಾತನಪರಂಪರೆಯ ಶ್ರೀಮಠವನ್ನು ಅಭಿವರದ್ದಿಪಥದತ್ತ ಮುನ್ನಡೆಸುತ್ತಿದ್ದು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ. ಪ್ರತಿವರ್ಷ ಚೈತ್ರಮಾಸದಲ್ಲಿ ಶ್ರೀಮಠದ ಜಾತ್ರೆಯು ವಿಜೃಂಭಣೆಯಿಂದ ಜರುಗುತ್ತಿದ್ದು ಡಿಸಂಬರ್12ರಂದು ಲಿಂ|| ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳ ಆರಾಧನೆನಡೆಸಲಾಗುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
Date of Birth :
20-05-1988
Place :
ಅನೂರು, ಅಫಜಲಪುರ ತಾ||
Pattadikara :
13-04-2012
Photo :
Programs
ಪ್ರತಿ ಅಮವಾಸಗೆ ರುದ್ರಾಭಿಷೇಕ, ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ
ಚೈತ್ರ ಮಾಸದಲ್ಲಿ ಶ್ರೀಮಠದ ಜಾತ್ರೆ (ಏಪ್ರಿಲ್ 12-13) ಡಿಸಂಬರ್ 12ರಂದು
ಲಿಂ|| ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ
Photos
Full Address Kannada
ಶ್ರೀ ಗದ್ದುಗೇಶ್ವರ ಮಠ ಚಿಂಚೋಳಿ - 585 301
ಅಫಜಲಪುರ ತಾ||, ಕಲಬುರಗಿ ಜಿಲ್ಲೆ