Shree Gaddugeshwara Hirematha – Nimbarga

Shree Gaddugeshwara Hirematha – Nimbarga Claimed

ಶ್ರೀ ಗದ್ದುಗೇಶ್ವರ ಹಿರೇಮಠ - ನಿಂಬರ್ಗಾ

Average Reviews

Description

ಶ್ರೀ ಗದ್ದುಗೇಶ್ವರ ಹಿರೇಮಠ – ನಿಂಬರ್ಗಾ

ಕರ್ತೃ ಶ್ರೀ ಷ.ಬ್ರ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮವು ತಾಲ್ಲೂಕುಕೇಂದ್ರದಿಂದ 22 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಗದ್ದುಗೇಶ್ವರಹಿರೇಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕಕೇಂದ್ರವಾಗಿ ಬೆಳೆದುಬಂದಿದೆ. ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀ ಗದ್ದುಗೇಶ್ವರ ಹಿರೇಮಠದ ಸ್ಥಾಪಕಗುರುಗಳು ಶ್ರೀ ಷ.ಬ್ರ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು.ಶ್ರೀ ಗದ್ದುಗೇಶ್ವರ ಹಿರೇಮಠದ ಸ್ಥಾಪಿತ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಪುರಾತನ ಕಾಲದ್ದಾದ ಶ್ರೀಮಠದ ಪರಂಪರೆಯಲ್ಲಿ ಬಂದಿರುವ ಎಲ್ಲಾ ಗುರುಗಳುಶ್ರೀಮಠವನ್ನು ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕವಾಗಿ ಸಮರ್ಥವಾಗಿ ಮುನ್ನಡೆಸಿದ್ದಾರೆ.ಶ್ರೀಮಠವು ಊರ ಒಳಗೆ ಹಾಗೂ ಊರ ಹೊರಗೆ ಎರಡು ಮಠದ ಕಟ್ಟಡಗಳನ್ನುಹೊಂದಿದ್ದು ಊರೊಳಗಿನ ಮಠದಲ್ಲಿ ಒಂದು ಗದ್ದುಗೆ ಹಾಗೂ ಊರ ಹೊರಗಿನ ಮಠದಲ್ಲಿ8 ಗದ್ದುಗೆಗಳನ್ನು ಕಾಣಬಹುದು. ಹಾಗಾಗಿ ಪರಂಪರೆಯಲ್ಲಿ ಪ್ರಸ್ತುತ ಶ್ರೀಗಳನ್ನು10ನೇಯವರು ಎಂದು ಹೇಳಬಹುದಾದರೂ ಇತಿಹಾಸದಲ್ಲಿ ಪ್ರಸ್ತುತ ಶ್ರೀಗಳನ್ನು 22ನೇಯಶ್ರೀಗಳೆಂದು ಹೇಳಲಾಗಿದೆ.ಶ್ರೀಮಠದ ಗುರುಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲವಾದರೂ ಮಠದಗದ್ದುಗೆಗಳನ್ನು ಸಂರಕ್ಷಿಸಿಕೊಂಡು ಬರಲಾಗಿರುವುದು ವಿಶೇಷ. ಇನ್ನುಳಿದ ಗದ್ದುಗೆಗಳಸಂಶೋಧನಾ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. ಪರಂಪರೆಯ ಹಿಂದಿನ ಶ್ರೀಗಳಾದ ಶ್ರೀಷ.ಬ್ರ. ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಮುನ್ನಡೆಸಿ ಲಿಂಗೈಕ್ಯರಾಗಿದ್ದಾರೆ. ಇವರ ಕಾಲಮಾನ ಯಾವುದು ಹಾಗೂಈಗಿನ ಶ್ರೀಗಳ ಹಿಂದೆ ಎಷ್ಟು ಕಾಲ ಶ್ರೀಮಠವು ಖಾಲಿ ಉಳಿದಿದೆ ಎಂಬುದರ ಬಗ್ಗೆ ನಿಖರಮಾಹಿತಿಗಳು ಲಭ್ಯವಿಲ್ಲ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು1978ರ ಜೂನ್ 02ರಲ್ಲಿ ಇದೇ ಗ್ರಾಮದ ಗದಗಯ್ಯ ಶಿವಲಿಂಗಯ್ಯ ಸ್ಥಾವರಮಠ ಹಾಗೂಶಶಿಕಲಾ ಗದಗಯ್ಯಾ ಸ್ಥಾವರಮಠ ಎಂಬ ದಂಪತಿಗಳ ಪುತ್ರರಾಗಿ ಜನಿಸಿದರು.ಬಾಲ್ಯದಿಂದಲೂ ಮನೆಯ ವಾತಾವರಣದಿಂದಾಗಿ ಆಧ್ಯಾತ್ಮಿಕತೆಯತ ್ತ ಒಲವುಬೆಳೆಸಿಕೊಂಡಿದ್ದ ಶ್ರೀಗಳು ಬಾಲ್ಯದಲ್ಲೇ ರಂಭಾಪುರಿ ಪೀಠದಲ್ಲಿ ಅಭ್ಯಸಿಸಿದವರು. ನಿಂಬರ್ಗಾಗ್ರಾಮದಲ್ಲೇ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದ ಶ್ರೀಗಳು ಪ್ರೌಢ ಶಿಕ್ಷಣವನ್ನು ರಂಭಾಪುರಿಪೀಠದಲ್ಲಿ ಪಡೆದು ಜೊತೆಗೆ ಆಧ್ಯಾತ್ಮ ಶಿಕ್ಷಣವನ್ನೂ ಪಡೆದರು. ತದನಂತರ ಶಿವಯೋಗ ಮಂದಿರದಲ್ಲಿ 2 ವರ್ಷಗಳ ಆಧ್ಯಾತ್ಮ ಶಿಕ್ಷಣವನ್ನು ಪಡೆದ ಶ್ರೀಗಳು ಬೆಂಗಳೂರಿನಲ್ಲಿ ಎಂ.ಎ.ಸ್ನಾತಕೋತ್ತರ ಪದವಿಯನ್ನು ಸಂಸ್ಕøತ, ಕಾವ್ಯ, ಸಾಹಿತ್ಯ ವಿಷಯಗಳಲ್ಲಿ ಪಡೆದರು. ಶ್ರೀಗಳುವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಮಠಕ್ಕೆ ತೆರಳಿ ಶ್ರೀ ಗದ್ದುಗೇಶ್ವರ ಹಿರೇಮಠದಅಧಿಕಾರವನ್ನು 2001ರಲ್ಲಿ ಸ್ವೀಕರಿಸಿದರು. ಇವರಿಗೆ ಪಟ್ಟಾಧಿಕಾರದ ಅನುಗ್ರಹವನ್ನುನೀಡಿದವರು ಅಫಜಲಪುರ ತಾಲ್ಲೂಕು ಬಡದಾಳ ಶ್ರೀಗಳು.ಶ್ರೀ ಷ.ಬ್ರ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದಅಧಿಕಾರವಹಿಸಿಕೊಂಡ ನಂತರ ಶ್ರೀಮಠವು ಅಭಿವೃದ್ಧಿಪಥದತ್ತ ಸಾಗಿದೆ. ಅನೇಕ ಕಾಲಖಾಲಿ ಉಳಿದಿದ್ದ ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ ಶ್ರೀಗಳು ಭಕ್ತರಸಹಕಾರದೊಂದಿಗೆ ಶ್ರೀಮಠದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮಠದಭಕ್ತರಿಗೆ ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳನ್ನು ಬೋಧಿಸಿ, ಆಚಾರ್ಯರುಪ್ರತಿಪಾದಿಸಿದ ವೀರಶೈವ ಸಿದ್ದಾಂತಗಳನ್ನು ಪ್ರಚುರಪಡಿಸುತ್ತಿದ್ದಾರೆ.ಶ್ರೀಮಠದಲ್ಲಿ ಶ್ರೀಗಳು ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆ,ಹುಣ್ಣಿಮೆಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಶ್ರಾವಣ ಮಾಸದಲ್ಲಿಶ್ರೀಗಳು ಪ್ರತಿವರ್ಷ ಬೇರೆ ಬೇರೆ ಸ್ಥಳಗಳಲ್ಲಿ ಅನುಷ್ಠಾನ ಕಾರ್ಯಕ್ರಮವನ್ನು ನೆರವೇರಿಸುತ್ತಾಬಂದಿದ್ದಾರೆ ಹಾಗೂ ದಸರಾದಲ್ಲಿ ಲಿಂ|| ಶ್ರೀ ಷ.ಬ್ರ. ಗುರುಪಾದ ಶಿವಾಚಾರ್ಯಮಹಾಸ್ವಾಮಿಗಳ ಪುಣ್ಯಾರಾಧನೆ ಮಹೋತ್ಸವವನ್ನು ನಡೆಸುತ್ತಿದ್ದು ಆ ಸಮಯದಲ್ಲಿಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಭೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
02-06-1978
Place :
ನಿಂಬರ್ಗಾ, ಆಳಂದ ತಾ||
Pattadikara :
2001
Photo :

Programs

ಪ್ರತಿ ಅಮವಾಸೆ, ಹುಣ್ಣಿಮೆಗೆ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ಶ್ರೀ ಮಠದ ಶ್ರೀಗಳು ಅನುಷ್ಠಾನ ಕಾರ್ಯಕ್ರಮಗಳು
ಪ್ರತಿ ವರ್ಷ ಬೇರೆ ಬೇರೆ ಸ್ಥಳಗಳಲ್ಲಿ ನೆರವೇರಿಸುವರು.
ದಸರಾದಲ್ಲಿ ಲಿಂ|| ಶ್ರೀ ಷ.ಬ್ರ. ಗುರುಪಾದ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ,
ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಭೆ ಮುಂತಾದ ಕಾರ್ಯಕ್ರಮಗಳು

Photos

Videos

Full Address Kannada

ಶ್ರೀ ಗದ್ದುಗೇಶ್ವರ ಹಿರೇಮಠ
ನಿಂಬರ್ಗಾ - 585213
ಆಳಂದ ತಾ||, ಕಲಬುರಗಿ ಜಿಲ್ಲೆ

Map

Near by Places

ಗಾಣಗಾಪುರ 5 ಕಿ.ಮೀ.
ಆಳಂದ 22 ಕಿ.ಮೀ.
ಕಲಬುರಗಿ 35 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!