Shree Gadduge Matha – Kalaburgi

Shree Gadduge Matha – Kalaburgi Claimed

ಶ್ರೀ ಗದ್ದುಗೆ ಮಠ - ಕಲಬುರಗಿ

Average Reviews

Description

ಶ್ರೀ ಗದ್ದುಗೆ ಮಠ – ಕಲಬುರಗಿ

ಕರ್ತೃ ಶ್ರೀ.ಮ.ನಿ.ಪ್ರ. ರೇವಣಸಿದ್ದ ಮಹಾಸ್ವಾಮಿಗಳು

ಕಲಬುರಗಿ ನಗರದ ಮುಕ್ತಂಪುರ ಬಡಾವಣೆಯಲ್ಲಿ ಸ್ಥಾಪನೆಯಾಗಿರುವ ಶ್ರೀಗದ್ದುಗೆ ಮಠವು ವಿರಕ್ತ ಸಂಪ್ರದಾಯದ ಮಠವಾಗಿದ್ದು ನಗರದ ಪ್ರಮುಖ ಧಾರ್ಮಿಕಕೇಂದ್ರಗಳಲ್ಲಿ ಒಂದಾಗಿದೆ. ಸುಮಾರು ಮುನ್ನೂರು ವರ್ಷಗಳ ಹಿಂದೆ ಶ್ರೀ.ಮ.ನಿ.ಪ್ರ.ರೇವಣಸಿದ್ದ ಮಹಾಸ್ವಾಮಿಗಳಿಂದ ಅಸ್ತಿತ್ವಕ್ಕೆ ಬಂದಿರುವ ಶ್ರೀಮಠವು ಇಲ್ಲಿಯವರೆಗೂ 14ಜನ ಶ್ರೀಗಳ ಮುಖೇನ ಬಸವಾದಿ ಶಿವಶರಣರ ತತ್ತ್ವಾದರ್ಶಗಳನ್ನು ಜನರಿಗೆ ತಲುಪಿಸುವಕಾರ್ಯದಲ್ಲಿ ನಿರತವಾಗಿದೆ.ಕರ್ತೃಗುರುಗಳು ಸಂಸ್ಕøತ, ವೇದ ಹಾಗೂ ಶರಣ ಸಾಹಿತ್ಯವನ್ನು ಆಳವಾಗಿಅಭ್ಯಸಿಸಿ ಅವುಗಳ ಸಾರವನ್ನು ಜನರಿಗೆ ತಲುಪಿಸುತ್ತಿದ್ದರು. ಇವರ ಪಾಂಡಿತ್ಯಕ್ಕೆ ಮನಸೋತನಾಡಿನ ಅನೇಕ ಶಿವಯೋಗಿಗಳು ಇವರಲ್ಲಿಗೆ ಬಂದು ಶಿವಯೋಗ ತತ್ತ್ವದ ಬಗ್ಗೆ ಚಿಂತನೆನಡೆಸಿ ಹೋಗುತ್ತಿದ್ದರು. ಇವರ ಕಾಲದಲ್ಲಿ ಶ್ರೀಮಠವು ಬೃಹತ್ತಾಗಿ ಬೆಳೆದಿದ್ದು ಅನುಭವಮಂಟಪದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತೆಂದು ತಿಳಿದು ಬರುತ್ತದೆ. ಇವರ ನಂತರಇವರ ಕರಕಮಲ ಸಂಜಾತರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ.ಮ.ನಿ.ಪ್ರ. ಶಿವಶಂಕರಮಹಾಸ್ವಾಮಿಗಳು ಮಠವನ್ನು ಮುನ್ನಡೆಸಿದ್ದಾರೆ. ಶ್ರೀಮಠದ ಹಿಂದಿನ ಶ್ರೀಗಳಾದಶ್ರೀ.ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮಿಗಳು 1961ರಲ್ಲಿ ತಮ್ಮ ಗುರುಗಳಾದ ಶ್ರೀ.ಮ.ನಿ.ಪ್ರ.ಶಿವಮೂರ್ತಿ ಮಹಾಸ್ವಾಮಿಗಳಿರುವಾಗಲೇ ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡಿದ್ದುಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಶ್ರೀಗಳು 1976ರ ಸೆಪ್ಟಂಬರ್ 17ರಲ್ಲಿಲಿಂಗೈಕ್ಯರಾಗಿದ್ದು ಆ ನಂತರ ಮಠದ ಭಕ್ತರೇ ಈಗಿನ ಶ್ರೀಗಳನ್ನು ಹುಬ್ಬಳ್ಳಿ ಮೂರು ಸಾವಿರಮಠದಿಂದ ಕರೆತಂದು ಅಧಿಕಾರ ನೀಡಿದ್ದಾರೆ.ಈಗಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ರೇವಣಸಿದ್ದ ಸ್ವಾಮಿಗಳು ಶಿವಯೋಗ ಮಂದಿರಹಾಗೂ ಬೆಂಗಳೂರಿನ ಸರ್ಪಭೂಷಣ ಮಠಗಳಲ್ಲಿ ಆದ್ಯಾತ್ಮ ಶಿಕ್ಷಣವನ್ನು ಪಡೆದು 1978ರಫೆಬ್ರವರಿ 17ರಲ್ಲಿ ಶ್ರೀಮಠದ ಅಧಿಕಾರ ಸ್ವೀಕರಿಸುತ್ತಾರೆ. ಗುರುಗಳು ಸಾಹಿತ್ಯ ಪ್ರೇಮಿಗಳಾಗಿದ್ದುಸಾಹಿತ್ಯದ ಮೂಲಕ ಧರ್ಮವನ್ನು ಪ್ರಚಾರ ಮಾಡಬಹುದೆಂದರಿತು ಸದ್ಬಾವಗೋಷ್ಠಿಪ್ರಕಾಶನದಿಂದ ಈವರೆಗೂ 43ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಶ್ರೀಗಳು ಶ್ರೀಮಠದಜಮೀನನ್ನು ಅಭಿವೃದ್ದಿ ಪಡಿಸಿ ಮಠದ ಆದಾಯವನ್ನು ಹೆಚ್ಚಿಸಿದ್ದು ಶ್ರೀಮಠದಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಶ್ರೀಮಠದ ಪರಂಪರೆಯ ಗದ್ದುಗೆಗಳು ಶ್ರೀಮಠಹಾಗೂ ಶಾಖಾಮಠಗಳಲ್ಲಿದ್ದು ಗುರುಗಳು ಎಲ್ಲಾ ಗದ್ದುಗೆಗಳನ್ನು ನವೀಕರಿಸುತ್ತಿದ್ದಾರೆ.

ವಿಶೇಷತೆ

ಶ್ರೀಮಠದ ಸದ್ವಾವನಗೋಷ್ಠಿ

ಪ್ರಕಾಶನದಿಂದ

43 ಪುಸ್ತಕಗಳ ಪ್ರಕಟಣೆ

Swamiji

Swamiji Name :
ಶ್ರೀ.ಮ.ನಿ.ಪ್ರ. ರೇವಣಸಿದ್ದ ಸ್ವಾಮಿಗಳು
Date of Birth :
01-1-1946
Place :
ಶ್ರೀ.ಮ.ನಿ.ಪ್ರ. ರೇವಣಸಿದ್ದ ಸ್ವಾಮಿಗಳು
Pattadikara :
17-2-1978
Photo :

Programs

ಜನವರಿಯಲ್ಲಿ ಸದ್ಭಾವ ಗೋಷ್ಠಿ ಮಾಘ ಶುದ್ಧ
ಭಾರತ ಹುಣ್ಣಿಮೆಗೆ ಶ್ರೀಮಠದ ರಥೋತ್ಸವ ಹಾಗೂ ಪೂರ್ವದಲ್ಲಿ 20ದಿನಗಳ ಕಾಲ ಪುರಾಣ ಪ್ರವಚನ ಶ್ರಾವಣ ಮಾಸದಲ್ಲಿ ಜಂಗಮ ಪಾದ ಪೂಜೆ

Photos

Full Address Kannada

ಶ್ರೀ ಗದ್ದುಗೆ ಮಠ
ಮುಕ್ತಂಪುರ, ಕಲಬುರಗಿ - 585 101

Map

Near by Places

ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ - 4 ಕಿ.ಮೀ.
ರೈಲ್ವೆ ಸ್ಟೇಷನ್ - 4 ಕಿ.ಮೀ.

Statistic

4 Views
0 Rating
0 Favorite
0 Share
error: Content is protected !!