ವಿಜಯಪುರ ಜಿಲ್ಲಾ ಬಸವನಬಾಗೇವಾಡಿ ತಾಲ್ಲೂಕಿನ ದಿಂಡವಾರ ಗ್ರಾಮವುತಾಲ್ಲೂಕು ಕೇಂದ್ರದಿಂದ 14 ಕಿ.ಮೀ. ದೂರದಲ್ಲಿದ್ದು, ಈ ಗ್ರಾಮದ ಹೊರವಲಯದಲ್ಲಿಪೂಜ್ಯಶ್ರೀ ಮುರುಘೇಂದ್ರ ಶಿವಾಚಾರ್ಯ ಸ್ವಾಮಿಗಳಿಂದ ಸುಮಾರು 16ನೇ ಶತಮಾನದಲ್ಲಿಸ್ಥಾಪಿಸಲ್ಪಟ್ಟಿದೆ ಎಂದು ಹೇಳˉÁಗಿರುವ ಶ್ರೀ ಗಚ್ಚಿನಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕಆಚರಣೆಗಳ ಮೂಲಕ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದೆ.ಶ್ರೀ ಗಚ್ಚಿನಮಠವು 16ನೇ ಶತಮಾನದ್ದೆಂದು ಹೇಳˉÁದರೂ ಅದಕ್ಕೆ ಸೂಕ್ತದಾಖˉÉಗಳು ಸಿಗುವುದಿಲ್ಲ ಹಾಗೂ ಶ್ರೀಮಠದ ಪರಂಪರೆಯಲ್ಲಿ ಕರ್ತೃಗುರುಗಳ ನಂತರಬಂದಿರಬಹುದಾದ ಶ್ರೀಗಳ ಬಗ್ಗೆಯೂ ವಿವರ ಲಭ್ಯವಿಲ್ಲದಾಗಿದೆ. ಕರ್ತೃಗುರುಗಳಾದ ಶ್ರೀಮುರುಘೇಂದ್ರ ಸ್ವಾಮಿಗಳು ಶ್ರೀಮಠದ ಸ್ಥಾಪಕರು ಎಂಬುದನ್ನು ಬಿಟ್ಟರೆ ಅವರ ನಿರ್ದಿಷ್ಟಕಾಲಮಾನ ಅವರ ಆಚರಣೆಗಳ ಬಗ್ಗೆ ನಿಖರವಾಗಿ ತಿಳಿದು ಬರುವುದಿಲ್ಲ.ಪ್ರಸ್ತುತ ಶ್ರೀ.ಷ.ಬ್ರ. ಲಿಂಗಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಇದೇದಿಂಡವಾರ ಗ್ರಾಮದಲ್ಲಿ ಜನಿಸಿದವರಾಗಿದ್ದು ಬಾಲ್ಯದಲ್ಲಿಯೇ ಆಧ್ಯಾತ್ಮಿಕ ಒಲವನ್ನುಬೆಳೆಸಿಕೊಂಡಿದ್ದವರು. ಇಂತಹ ಶ್ರೀಗಳು ಶ್ರೀಮಠದ ಪಟ್ಟಾದಿಕಾರವನ್ನು ಸ್ವೀಕರಿಸಿಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿ ಭಕ್ತರ ಸಹಕಾರದೊಂದಿಗೆಶ್ರೀಮಠದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಶ್ರೀ ಮಠದಲ್ಲಿ ಪ್ರತಿನಿತ್ಯ ಪೂಜಾ ಕಾರ್ಯಕ್ರಮಗಳೊಂದಿಗೆ ಪ್ರತಿ ಅಮವಾಸ್ಯೆ,ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ, ಪ್ರತಿ ಹಬ್ಬಗಳ ಆಚರಣೆಗಳನ್ನೂ ಮಾಡˉÁಗುತ್ತದೆ.ಹಾಗೂ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ ಹಾಗೂ ವಿವಿಧಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸˉÁಗುತ್ತದೆ. ಶ್ರೀಗಳು ಶ್ರೀಮಠದ ವತಿಯಿಂದಕಿರಿಯ, ಹಿರಿಯ ಪ್ರಾಥಮಿಕ ಶಾˉÉಯನ್ನು ನಡೆಸುತ್ತಿದ್ದು ಜೊತೆಯಲ್ಲಿ ವಿಶೇಷವಾಗಿ ಕಿವುಡಮತ್ತು ಮೂಕರ ಶಾˉÉಯನ್ನು ಮುನ್ನಡೆಸುತ್ತಾ ಸಾಮಾಜಿಕವಾಗಿಯೂತೊಡಗಿಸಿಕೊಂಡಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಲಿಂಗಾನಂದ ಶಿವಾಚಾರ್ಯ ಮಹಾಸ್ವಾಮಿಗಳು
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ ಹಾಗೂ ವಿವಿಧ ಕಾರ್ಯಕ್ರಮಗಳು.
Photos
Full Address Kannada
ಶ್ರೀ ಗಚ್ಚಿನಮಠ
ದಿಂಡವಾರ - 586 203
ಬಸವನಬಾಗೇವಾಡಿ ತಾ||, ವಿಜಯಪುರ ಜಿ||