ಯಾದಗಿರಿ ಜಿಲ್ಲೆ, ಶಹಾಪುರ ತಾಲ್ಲೂಕಿನ ಮದ್ದರಕಿ ಗ್ರಾಮದ ಹೊರಭಾಗದಲ್ಲಿಶ್ರೀ ಷ.ಬ್ರ. ಮಹಾಂತೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಪುರಾತನಕಾಲದ ಶ್ರೀ ಗಚ್ಚಿನಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈಭಾಗದಲ್ಲಿ ಹೆಸರಾಗಿದೆ. ಶ್ರೀಮಠವು ಶ್ರೀ ಕಾಶಿಪೀಠದ ಶಾಖಾಮಠವಾಗಿದ್ದು ಪುತ್ರವರ್ಗದಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀ ಗಚ್ಚಿನ ಮಠವು ಪುರಾತನ ಕಾಲದ್ದೆಂದು ಹೇಳಲಾದರೂ ಸ್ಪಷ್ಟತೆಯಿಲ್ಲ.ಅದರೆ ವಿಶಾಲವಾದ ಜಾಗದಲ್ಲಿ ಭವ್ಯವಾಗಿ ರೂಪುಗೊಂಡಿರುವ ಕಲ್ಲಿನ ಕಟ್ಟಡ ಹಾಗೂಅದರ ಹಿಂಭಾಗದಲ್ಲಿರುವ ರಚನೆಗಳ ಆಧಾರದ ಮೆಲೆ ಬಹು ಹಿಂದೆಯೇ ಶ್ರೀಮಠವುಸ್ಥಾಪಿತಗೊಂಡು ವೈಭವದಿಂದ ಆಚರಣೆಗಳನ್ನು ನಡೆಸಿರುವ ಕುರುಹನ್ನು ಬಿಂಬಿಸುತ್ತದೆ.ಕರ್ತೃಗುರುಗಳಾದ ಶ್ರೀ ಷ.ಬ್ರ.ಮಹಾಂತೇಶ್ವರ ಶಿವಾಚಾರ್ಯರು ಧರ್ಮನಿಷ್ಠರೂ,ತಪೋನಿಷ್ಠರೂ ಆಗಿದ್ದು ತಮ್ಮ ತಪಃಪ್ರಭಾವದಿಂದ ಭಕ್ತರಲ್ಲಿ ಧರ್ಮ ಜಾಗೃತಿಯನ್ನುಂಟುಮಾಡುತ್ತಿದ್ದ ಮಹಾಪುರುಷರು. ಇವರ ನಂತರ ಬಂದಿರಬಹುದಾದ ಎಲ್ಲ ಪೀಠಾಧಿಪತಿಗಳುಪ್ರಭಾವಿಗಳಾಗಿದ್ದು ಶ್ರೀಮಠವನ್ನು ಅಭಿವೃದ್ಧಿಗೊಳಿಸಿರುವ ಕುರುಹುಗಳು ಕಂಡುಬರುವುದಾದರೂ ನಿಖರತೆಯಿಲ್ಲ. ಬಹುಶಃ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ರಾಚೋಟೇಶ್ವರಶಿವಾಚಾರ್ಯ ಸ್ವಾಮಿಗಳು ಲಿಂಗೈಕ್ಯರಾದ ನಂತರ ಬಹಳ ಕಾಲ ಶ್ರೀಮಠವು ಖಾಲಿಉಳಿದಿರುವುದು ಇದಕ್ಕೆ ಕಾರಣ.ಪ್ರಸ್ತುತ ಶ್ರೀ ಷ.ಬ್ರ. ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು 2013ರ ಮೇ 21ರಲ್ಲಿಶ್ರೀಮಠದ ಅಧಿಕಾರ ವಹಿಸಿಕೊಂಡು ಬಂದಿದ್ದು ಮಠದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆನೀಡಿದ್ದಾರೆ. ಶಿವಪೂಜಾನಿಷ್ಠರೂ ಆಗಿರುವ ಶ್ರೀಗಳು ಭಕ್ತರನ್ನು ಸಂಪಾದಿಸಿಕೊಂಡುಅವರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿ ನಿತ್ಯರುದ್ರಾಭಿಷೇಕ, ಕಡ್ಲೆ ಹುಣ್ಣಿಮೆಯಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮಹೋತ್ಸವಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
Swamiji
Swamiji Name :
ಶ್ರೀ ಷ.ಬ್ರ. ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು
Place :
ಇನಾಮ್ ಲಕುಮಾಪುರ, ಹಾನಗಲ್ಲು ತಾ||
Pattadikara :
21-5-2013
Photo :
Programs
ಕಡ್ಲೆ ಹುಣ್ಣಿಮೆಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರಾವಣದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ಪ್ರತಿ ವರ್ಷ ಮೇ 21ಕ್ಕೆ ಶ್ರೀಗಳ ವರ್ಧಂತಿ ಮಹೋತ್ಸವ.