Shree Durdundeshwara Mahanta Shivayogigalavara Matha

Shree Durdundeshwara Mahanta Shivayogigalavara Matha Claimed

ಶ್ರೀ ದುರ್ದುಂಡೇಶ್ವರ ಮಹಾಂತ ಶಿವಯೋಗಿಗಳವರ ಮಠ

Average Reviews

Description

ಶ್ರೀ ದುರ್ದುಂಡೇಶ್ವರ ಮಹಾಂತ ಶಿವಯೋಗಿಗಳವರ ಮಠ – ಬೇಬಿಗ್ರಾಮ

ಕರ್ತೃ – ಶ್ರೀ ಮ.ನಿ.ಪ್ರ. ಸ್ವ. ಮರಿದೇವರು ಶಿವಯೋಗಿ ಮಹಾಸ್ವಾಮಿಗಳು

ಮಂಡ್ಯ ಜಿˉÉ್ಲ ಪಾಂಡವಪುರ ತಾಲ್ಲೂಕು ಕೇಂದ್ರದಿಂದ 16 ಕಿ.ಮೀ.ದೂರದಲ್ಲಿರುವ ಬೇಬಿಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ದುರ್ದಂಡೇಶ್ವರ ಮಹಾಂತಶಿವಯೋಗಿಗಳವರ ಮಠವು ಈ ಭಾಗದಲ್ಲಿ ತನ್ನದೇ ಆದ ಪ್ರಭಾವವನ್ನು ಹೊಂದಿದ್ದುಪ್ರಸಿದ್ದಿಯಲ್ಲಿದೆ. ಇಲ್ಲಿಗೆ ಸಮೀಪದಲ್ಲಿಯೇ ಬೇಬಿ ಬೆಟ್ಟವಿದ್ದು ಅಲ್ಲಿ ಈ ಮಠದ ಕರ್ತೃಗುರುಗಳಿಂದˉÉೀ ಸ್ಥಾಪಿತಗೊಂಡಿದ್ದ ಶ್ರೀ ರಾಮಯೋಗೀಶ್ವರ ಮಠವಿರುವುದು ವಿಶೇಷ.ಮಂಡ್ಯ ಜಿˉÉ್ಲಯ ಬೇಬಿಗ್ರಾಮ ಪ್ರದೇಶವು ಪುರಾತನ ಕಾಲದಿಂದಲೂಮಹಾತಪಸ್ವಿಗಳ ಸಿದ್ದರ ನೆˉÉವೀಡು. ಅಂತಹ ತಪಸ್ವಿಗಳಲ್ಲಿ ಒಬ್ಬರಾಗಿದ್ದ ಶ್ರೀರಾಮಯೋಗೀಶ್ವರರು ಬೇಬಿ ಬೆಟ್ಟದಲ್ಲಿ ನೆˉÉನಿಂತು ಸುತ್ತಮುತ್ತಲಿನ ಭಕ್ತರನ್ನುಉದ್ದರಿಸಿದ್ದರೆಂದು ತಿಳಿದುಬರುತ್ತದೆ. ಇಂತಹ ತಪೋಭೂಮಿಯಲ್ಲಿ ಈಗ್ಗೆ 65 ವರ್ಷಗಳಹಿಂದೆ ಭಕ್ತರ ಪಾಲಿನ ಆರಾಧ್ಯದೈವವಾಗಿ ಬಂದವರೇ ಶ್ರೀ ಮ.ನಿ.ಪ್ರ.ಸ್ವ. ಮರಿದೇವರುಶಿವಯೋಗಿ ಮಹಾಸ್ವಾಮಿಗಳು.ಬೆಳಗಾವಿ ಜಿˉÉ್ಲಯ ಮುರುಗೋಡಿನ ಮಹಾಂತ ಮಠದಲ್ಲಿದ್ದ ಶ್ರೀ ಮರಿದೇವರುಶಿವಯೋಗಿಗಳು ಅಲ್ಲಿಂದ ಸಂಚಾರ ಹೊರಟು ಅಲ್ಲಲ್ಲಿ ನೆˉÉನಿಲ್ಲುತ್ತಾ ಕೊಳ್ಳೇಗಾಲತಾಲ್ಲೂಕಿನ ಶಂಭುಲಿಂಗೇಶ್ವರ ಬೆಟ್ಟದಲ್ಲಿ ಅನುಷ್ಟಾನಗೊಂಡು ಭಕ್ತರನ್ನು ಹರಸಿದರು.ಅಲ್ಲಿಂದ ಮುಂದೆ ಬೇಬಿ ಗ್ರಾಮಕ್ಕೆ ಆಗಮಿಸಿದ ಶ್ರೀಗಳು ಇಲ್ಲಿ ನೆˉÉನಿಂತು ತಮ್ಮ ಆಚರಣೆಗಳಮೂಲಕ ಅಪಾರ ಭಕ್ತಬಳಗವನ್ನು ಸಂಪಾದಿಸಿದರು.ಬೇಬಿ ಗ್ರಾಮದಲ್ಲಿ ಕೆಲಕಾಲವಿದ್ದ ಶ್ರೀಗಳು ಬೇಬಿ ಬೆಟ್ಟದಲ್ಲಿ ಪುರಾತನ ಕಾಲದಲ್ಲಿಸ್ಥಾಪಿತಗೊಂಡು ಜೀರ್ಣಗೊಂಡಿದ್ದ ತಪೋಕ್ಷೇತ್ರ ಶ್ರೀ ರಾಮಯೋಗೀಶ್ವರ ಮಠದಮಹತ ್ವವನ್ನರಿತು ¨s Àಕ ್ತರ ಸಹಕಾರದೊಂದಿಗೆ ನಿರಂತರವಾಗಿ ಶ್ರಮಿಸಿಜೀರ್ಣಾಭಿವೃದ್ದಿಗೊಳಿಸಿದರು. ಆನಂತರ 1950ರಲ್ಲಿ ಆ ಮಠದ ಪಟ್ಟಾಧಿಕಾರಿಯಾಗಿಅಧಿಕಾರ ಸ್ವೀಕರಿಸಿದ ಶ್ರೀಗಳು ಅಖಂಡ ಮೂರೂವರೆ ದಶಕಗಳ ಕಾಲ ಮಠವನ್ನುಅಭಿವೃದ್ದಿಗೊಳಿಸಿ ಭಕ್ತರಿಗೆ ಸನ್ಮಾರ್ಗ ತೋರಿದರು. ತದ ನಂತರ ಶ್ರೀ ಮ.ನಿ.ಪ್ರ.ಸ್ವ. ಸದಾಶಿವಸ್ವಾಮಿಗಳನ್ನು ಅಧಿಕಾರಕ್ಕೆ ತಂದು ತಾವು ಧೀರ್ಘಾನುಷ್ಠಾನ ಕೈಗೊಂಡರು.ಹೀಗೆ ಧೀರ್ಘಾನುಷ್ಠಾನ ಕೈಗೊಂಡ ಶ್ರೀ ಮರಿದೇವರು ಶಿವಯೋಗಿಗಳುಕೆಲಕಾಲದ ನಂತರ ಬೇಬಿಗ್ರಾಮದಲ್ಲಿ ಭಕ್ತರ ಸಹಕಾರದೊಂದಿಗೆ 1993ರಲ್ಲಿ ಮತ್ತೊಂದುಮಠವನ್ನು ಸ್ಥಾಪಿಸಿ ಆ ಮಠಕ್ಕೆ ಶ್ರೀ ದುರ್ದಂಡೇಶ್ವರ ಮಹಾಂತ ಶಿವಯೋಗಿಗಳವರಮಠವೆಂದು ಹೆಸರಿಟ್ಟರು. ಆ ಮಠವೇ ಕೇವಲ ಎರಡು ದಶಕಗಳಲ್ಲಿ ಮಂಡ್ಯ ಜಿˉÉ್ಲಯಪ್ರಮುಖ ಮಠಗಳಲ್ಲಿ ಒಂದಾಗಿ ಬೆಳೆದಿದೆ. ಬೇಬಿ ಗ್ರಾಮದಲ್ಲಿ ಶ್ರೀಮಠವನ್ನು ಸ್ಥಾಪಿಸಿ ಭಕ್ತರಲ್ಲಿಧರ್ಮಜಾಗೃತಿ ಮೂಡಿಸಿದ ಶ್ರೀಗಳು ಶತಾಯುಷಿಗಳಾಗಿ ಸಾರ್ಥಕ ಜೀವನ ನಡೆಸಿಲಿಂಗೈಕ್ಯರಾದರು.ಶ್ರೀ ಮರಿದೇವರು ಶಿವಯೋಗಿಗಳ ನಂತರ ಶ್ರೀ ಮಠವನ್ನು ಮುನ್ನಡೆಸುತ್ತಿರುವಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು ಧಾರ್ಮಿಕ ಚಿಂತಕರು. 1999ರ ಜನವರಿ28ರಂದು ಶ್ರೀಮಠದ ಅಧಿಕಾರ ಸ್ವೀಕರಿಸಿರುವ ಶ್ರೀಗಳು ಕರ್ತೃ ಗುರುಗಳ ಹಾದಿಯಲ್ಲಿಯೇಭಕ್ತರನ್ನು ಮುನ್ನಡೆಸುತ್ತಾ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನುಆಯೋಜಿಸುತ್ತಿದ್ದಾರೆ ಹಾಗೂ ಶ್ರೀಗಳು ತಮ್ಮ ಕಾರ್ಯಕ್ರಮಗಳ ಮೂಲಕ ಭಕ್ತರನ್ನುಧಾರ್ಮಿಕ ಚಿಂತನೆಗೆ ಒಳಪಡಿಸುತ್ತಿದ್ದಾರೆ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿಗಳು ಕೇವಲ ಧಾರ್ಮಿಕ ಆಚರಣೆಗಳಿಗೆಮಹತ್ವ ನೀಡದೇ ಶೈಕ್ಷಣಿಕವಾಗಿಯೂ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ಕರ್ತೃಗುರುಗಳಾದ ಶ್ರೀ ಮರಿದೇವರು ಶಿವಯೋಗಿಗಳ ಹೆಸರಿನಲ್ಲಿ ಶ್ರೀಮಠದಲ್ಲಿ ವಿದ್ಯಾರ್ಥಿನಿಲಯ ಹಾಗೂ ಅತಿಥಿ ಗೃಹಗಳನ್ನು ನಿರ್ಮಿಸಿದ್ದಾರೆ ಹಾಗೂ 2004-05ರ ಸಾಲಿನಿಂದ”ಡಿ.ಎಂ.ಎಸ್. ಜ್ಞಾನ ಕುಟೀರ”ವನ್ನು ಸ್ಥಾಪಿಸಿ ಅದರ ಅಡಿಯಲ್ಲಿ ಬಡ ಮಕ್ಕಳಿಗೆ ಶಿಕ್ಷಣನೀಡುತ್ತಿದ್ದಾರೆ. ಜೊತೆಗೆ ದೇಶದˉÉ್ಲೀ ಪ್ರಪ್ರಥಮವಾಗಿ ಮೈಸೂರಿನಲ್ಲಿ ಶ್ರೀ ಡಿ.ಎಂ.ಎಸ್.ಲಲಿತಕˉÁ ಮಹಾಸಂಸ್ಥಾನವನ್ನು ಸ್ಥಾಪಿಸಿ ದೂರ ಶಿಕ್ಷಣ ಸಂಪರ್ಕದಲ್ಲಿ ಶಿಕ್ಷಣನೀಡುತ್ತಿದ್ದಾರೆ.ಪ್ರಸ್ತುತ ಶ್ರೀಗಳು ಶ್ರೀಮಠದ ಜೊತೆಯಲ್ಲಿ 2003ರಲ್ಲಿ ಶ್ರೀರಂಗಪಟ್ಟಣ ತಾಲ್ಲೂಕುಕಾವೇರಿ ತೀರ ಪಶ್ಚಿಮವಾಹಿನಿಯಲ್ಲಿ ಶ್ರೀ ದುರ್ದಂಡೇಶ್ವರ ಮಹಾಂತ ಶಿವಯೋಗಿಚಂದ್ರವನ ಆಶ್ರಮವನ್ನು ಸ್ಥಾಪಿಸಿ ಆ ಭಾಗದ ಭಕ್ತರಲ್ಲಿ ಧರ್ಮಜಾಗೃತಿ ಮೂಡಿಸುತ್ತಿದ್ದಾರೆ.ಶ್ರೀಗಳು ಬೇಬಿಗ್ರಾಮದ ಮಠದಲ್ಲಿ ಪ್ರತಿ ಹುಣ್ಣಿಮೆಗಳಲ್ಲಿ ಬಹಿರಂಗ ಸಾಮೂಹಿಕ ಇಷ್ಟಲಿಂಗಪೂಜೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ ಹಾಗೂ ಆಗಸ್ಟ್ 13ರಂದು ಕರ್ತೃಗುರುಗಳಾದ ಶ್ರೀ ಮರಿದೇವರು ಶಿವಯೋಗಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನುಆಯೋಜಿಸುತ್ತಿದ್ದು ವಿವಿದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

Swamiji

Swamiji Name :
ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳು
Date of Birth :
03-08-1976
Place :
ತೆಂಡೇಕೆರೆ, ಕೆ.ಆರ್.ಪೇಟೆ ತಾ||
Pattadikara :
28-01-1999
Photo :

Programs

ಪ್ರತಿ ಹುಣ್ಣಿಮೆಗೆ ರುದ್ರಾಭಿಷೇಕ ಹಾಗೂ ಶ್ರೀಗಳ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ (ಬಹಿರಂಗ) ¥ತಿÀ್ರ ವರ್ಷ ಆಗಸ್ಟ್ 13ರಂದು ಲಿಂ|| ಶ್ರೀ ಮ.ನಿ.ಪ್ರ. ಸ್ವ. ಮರಿದೇವರು ಶಿವಯೋಗಿಗಳ ಆರಾಧನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜನವರಿ ತಿಂಗಳ ಹುಣ್ಣಿಮೆ ದಿನದಂದು ಕರ್ತೃಗುರುಗಳ ಜನ್ಮದಿನೋತ್ಸವ ªಷ ರ್Àದಲ್ಲಿ ಹಲವು ಬಾರಿ ಆರೋಗ್ಯ ಶಿಬಿರಗಳ ಆಯೋಜನೆ

Institutions

ಡಿ.ಎಂ.ಎಸ್. ಜ್ಞಾನ ಕುಠೀರ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾˉÉ ¥ದ Àವಿ ಪೂರ್ವ ಕಾˉÉೀಜ್ ಲಲಿತಕˉÁ ಮಹಾಸಂಸ್ಥಾನ, ಮೈಸೂರು

Photos

Full Address Kannada

ಶ್ರೀ ದುರ್ದಂಡೇಶ್ವರ ಮಹಾಂತ ಶಿವಯೋಗಿ ಮಠ
ಬೇಬಿಗ್ರಾಮ, ಚಿನಕುರಳಿ ಹೋಬಳಿ - 571 455
ಪಾಂಡವಪುರ ತಾ||, ಮಂಡ್ಯ ಜಿಲ್ಲೆ

Map

Near by Places

ಚಿನಕುರಳಿ - 8 ಕಿ.ಮೀ.
ಪಾಂಡವಪುರ - 16 ಕಿ.ಮೀ.
ಮಂಡ್ಯ - 70 ಕಿ.ಮೀ.
ಮೈಸೂರು - 35 ಕಿ.ಮೀ.

Statistic

66 Views
0 Rating
0 Favorite
0 Share
error: Content is protected !!