Shree Doddamatha

Shree Doddamatha Claimed

ಶ್ರೀ ದೊಡ್ಡಮಠ

Average Reviews

Description

ಶ್ರೀ ದೊಡ್ಡಮಠ

ಕರ್ತೃ – ಶ್ರೀ ಮ.ನಿ.ಪ್ರ. ಹೊಸಕೋಟೆ ಮಹಾಂತ ಮಹಾಸ್ವಾಮಿಗಳು

ಬೆಂಗಳೂರು ನಗರದ ಅಕ್ಕಿಪೇಟೆಯ ಮುಖ್ಯರಸ್ತೆಯಲ್ಲಿರುವ ಶ್ರೀ ದೊಡ್ಡಮಠವುಬೆಂಗಳೂರಿನ ಪುರಾತನ ಮಠಗಳಲ್ಲಿ ಒಂದಾಗಿದ್ದು ಸುಮಾರು 16ನೇ ಶತಮಾನದಲ್ಲಿಕೆಳದಿಯ ಅರಸರಿಂದ ಕಟ್ಟಲ್ಪಟ್ಟ ಮಠವೆಂದು ಹೇಳಲಾಗುತ್ತದೆ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಮ.ನಿ.ಪ್ರ. ಹೊಸಕೋಟೆ ಮಹಾಂತ ಮಹಾಸ್ವಾಮಿಗಳನ್ನುಹೆಸರಿಸಲಾಗಿದೆ. ಆದರೂ ಈ ಬಗ್ಗೆ ಇನ್ನೂ ಖಚಿತವಾದ ಹಾಗೂ ನೇರವಾದ ಮಾಹಿತಿಗಳಕೊರತೆಯಿದೆ. (ಶ್ರೀಮಠದಲ್ಲಿ ಶ್ರೀ ಎಡೆಯೂರು ಸಿದ್ದಲಿಂಗೇಶ್ವರರ ತೋರು ಗದ್ದುಗೆ ಇದೆ.)ಕೆಲವು ಮೂಲಗಳ ಪ್ರಕಾರ ಬೆಂಗಳೂರಿನ ಬೇಲಿ ಮಠವು “ಕೆಂಪಿನ ಸಮಯ”ದಮುಖ್ಯ ಚರಂತಿಗೆಯವರ ಪ್ರಮುಖ ಮಠವಾಗಿದ್ದು, ಅದರ ಮೂಲ ಶಾಖೆಯೇಅರಳೆಪೇಟೆಯ ದೊಡ್ಡಮಠವೆಂದು ಅಲ್ಲಿನ ದಾಖಲೆಗಳಲ್ಲಿ ಉಲ್ಲೇಖವಿದೆ. ಆದರೆ ಇದರಬಗ್ಗೆ ಸ್ಪಷ್ಟತೆಯಿಲ್ಲ. ಕರ್ತೃ ಗುರುಗಳ ನಂತರ ಅನೇಕ ಗುರುಗಳು ಆಳ್ವಿಕೆ ನಡೆಸಿದ್ದುಇಲ್ಲಿಯವರೆಗೂ 8 ಜನ ಶ್ರೀಗಳು ಅಧಿಕಾರ ನಡೆಸಿದ್ದಾರೆಂದು ತಿಳಿದು ಬರುತ್ತದೆ. ಆದರೆಶ್ರೀಮಠದಲ್ಲಿ ಪರಂಪರೆಯ ಗುರುಗಳ ಯಾವುದೇ ಗದ್ದುಗೆಗಳು ಇಲ್ಲ. ಶಿವನಗರದ ಶ್ರೀಜಂಗಮ ಮಠದಲ್ಲಿ ಎರಡು ಗದ್ದುಗೆಗಳನ್ನು ಕಾಣಬಹುದು.ಶ್ರೀಮಠದ ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ಚನ್ನವೀರ ಮಹಾಸ್ವಾಮಿಗಳುಶ್ರೀಮಠವನ್ನು ಅಭಿವೃದ್ದಿ ಪಥದೆಡೆಗೆ ಮುನ್ನಡೆಸಿದ್ದಾರೆ. ಶ್ರೀಮಠ ಹಾಗೂ ಸಮಾಜದಶ್ರೇಯೋಭಿವೃದ್ದಿಗೆ ಶ್ರಮಿಸಿದ ಶ್ರೀಗಳು 1998ರ ಅಕ್ಟೋಬರ್ 11 ರಂದು ಲಿಂಗೈಕ್ಯರಾಗಿದ್ದುಇವರ ಐಕ್ಯಾನಂತರ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಬಸವ ಸ್ವಾಮಿಗಳು ಅಧಿಕಾರಕ್ಕೆಬಂದಿದ್ದಾರೆ. 1998ರ ಅಕ್ಟೋಬರ್ 23ರಂದು ಸಿದ್ದಗಂಗೆ, ಕನಕಪುರ ದೇಗುಲಮಠ,ಕಂಚುಗಲ್ ಬಂಡೆಮಠ ಮುಂತಾದ ಮಠಗಳ ಗುರುಗಳ ಸಮ್ಮುಖದಲ್ಲಿ ಶ್ರೀಗಳಿಗೆಪಟ್ಟಾಧಿಕಾರದ ಅನುಗ್ರಹವಾಗಿದೆ.ಪ್ರಸ್ತುತ ಶ್ರೀಗಳು ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠದ ಅಮೂಲಾಗ್ರಅಭಿವೃದ್ಧಿಗೆ ಶ್ರಮಿಸಿದ್ದು ಸಮಾಜೋದ್ದಾರಕ ಕಾರ್ಯಕ್ರಮಗಳು ನಿತ್ಯ ನಡೆಯುತ್ತಿವೆ.ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿರುವ ಶ್ರೀಗಳು ಪ್ರತಿ ವರ್ಷಶಿವರಾತ್ರಿ, ಸಂಕ್ರಾಂತಿ, ಯುಗಾದಿ ಹಾಗೂ ಗಣೇಶನ ಹಬ್ಬಗಳನ್ನು ಆಚರಿಸುತ್ತಾ ಬರುತ್ತಿದ್ದಾರೆ.ಪ್ರತಿ ವರ್ಷ ಅಕ್ಟೋಬರ್ 11ರಂದು ಲಿಂ|| ಶ್ರೀ ಮ.ನಿ.ಪ್ರ. ಚನ್ನವೀರ ಮಹಾಸ್ವಾಮಿಗಳಆರಾಧನಾ ಮಹೋತ್ಸವ ನಡೆಯಲ್ಪಡುತ್ತದೆ.

Swamiji

Swamiji Name :
ಶ್ರೀ ನಿ.ಪ್ರ.ಸ್ವ. ಶಿವಬಸವ ಮಹಾಸ್ವಾಮಿಗಳು
Date of Birth :
11-10-1969
Place :
ಬೆಂಗಳೂರು
Pattadikara :
23-10-1998
Photo :

Programs

ಶಿವರಾತ್ರಿ, ಸಂಕ್ರಾಂತಿ, ಯುಗಾದಿ, ಗಣೇಶನ ಹಬ್ಬಗಳಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ಅಕ್ಟೋಬರ್ 11ರಂದು ಲಿಂ|| ಶ್ರೀ ಮ.ನಿ.ಪ್ರ. ಚನ್ನವೀರ ಮಹಾಸ್ವಾಮಿಗಳ ಪುಣ್ಯಾರಾಧನೆ
ಕಾರ್ತೀಕ ಮಾಸದಲ್ಲಿ ದೀಪಾರಾಧನೆ

Photos

Full Address Kannada

ಶ್ರೀ ದೊಡ್ಡಮಠ ಅಕ್ಕಮಹಾದೇವಿ ರಸ್ತೆ,
ಅಕ್ಕಿಪೇಟೆ, ಬೆಂಗಳೂರು - 560 053

Map

Near by Places

ಕೆಂ.ಬ.ನಿ. - 1 ಕಿ.ಮೀ.
ಮೆಟ್ರೋಸ್ಟೇಷನ್ - 1 ಕಿ.ಮೀ.
ರೈಲ್ವೆಸ್ಟೇಷನ್ - 1 ಕಿ.ಮೀ.

Statistic

19 Views
0 Rating
0 Favorite
0 Share
error: Content is protected !!