Shree Doddamatha

Shree Doddamatha Claimed

ಶ್ರೀ ದೊಡ್ಡಮಠ

Average Reviews

Description

ಶ್ರೀ ದೊಡ್ಡಮಠ – ಬಂಡಳ್ಳಿ

ಕರ್ತೃ – ಪರಮ ಪೂಜ್ಯ ಶ್ರೀ ಫಲಹಾರ ಮಹಾಸ್ವಾಮಿಗಳು

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಬಂಡಳ್ಳಿ ಗ್ರಾಮದಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ದೊಡ್ಡಮಠವು ಪುರಾತನ ಇತಿಹಾಸವನ್ನು ಹೊಂದಿದಮಠವಾಗಿದೆ. ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿ ವಂಶ ಪಾರಂಪರ್ಯದಮಠವಾಗಿ ಬೆಳೆದು ಬಂದಿರುವ ಶ್ರೀ ದೊಡ್ಡಮಠವು ಈ ಭಾಗದ ಧಾರ್ಮಿಕ, ಸಾಂಸ್ಕøತಿಕಹಾಗೂ ಶೈಕ್ಷಣಿಕ ಪ್ರಗತಿಯ ಪ್ರತೀಕವಾಗಿ ಬೆಳೆದು ನಿಂತಿದೆ.ಬಹುಕಾಲದ ಹಿಂದೆ ಸಂಚಾರದಲ್ಲಿ ಗ್ರಾಮಕ್ಕೆ ಬಂದ ಜಂಗಮರೊಬ್ಬರುಬಂಡಳ್ಳಿಯಲ್ಲಿ ನೆಲೆಸಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಆಹಾರವಾಗಿ ಫಲಹಾರಸೇವಿಸುತ್ತಾ ಸರಳ ಜೀವನ ನಡೆಸಿ ಭಕ್ತರಿಗೆ ಧಾರ್ಮಿಕ ಮಾರ್ಗದರ್ಶನ ನೀಡುತ್ತಿದ್ದರು.ಕಾಲಕ್ರಮೇಣ ಶ್ರೀಗಳ ಪ್ರಸಿದ್ದಿ ಹೆಚ್ಚತೊಡಗಿ ಮಠದ ಕಾರ್ಯವ್ಯಾಪ್ತಿ ವಿಸ್ತರಿಸಿತು ಹಾಗೂಶ್ರೀಗಳು ಅನೇಕ ಪವಾಡಗಳನ್ನು ಮಾಡಿ ಭಕ್ತರನ್ನು ಉದ್ದರಿಸಿದರು ಎಂಬ ಜಾನಪದ ಕಥೆಕೇಳಿ ಬರುತ್ತದೆ. ಶ್ರೀಗಳು ಕೇವಲ ಫಲಾಹಾರ ಸ್ವೀಕರಿಸುತ್ತಿದ್ದರಿಂದ ಶ್ರೀಗಳಿಗೆ ಶ್ರೀ ಫಲಾಹಾರಮಹಾಸ್ವಾಮಿಗಳು ಎಂಬ ಹೆಸರು ಬಂದಿದ್ದು ನಂತರದ ಪರಂಪರೆಯ ಬಹುತೇಕಗುರುಗಳಿಗೆ ಈ ಹೆಸರೇ ಬಂದಿತೆಂದು ತಿಳಿದು ಬರುತ್ತದೆ.ಶ್ರೀಮಠದ ಪರಂಪರೆಯು ಶ್ರೀಮಂತವಾಗಿದೆಯಾದರೂ ದಾಖಲೆಗಳಕೊರತೆಯಿಂದ ಸ್ಪಷ್ಟತೆಯಿಲ್ಲ ಹಾಗೂ ಗುರುಪರಂಪರೆಯಲ್ಲಿ ಬಂದಿರಬಹುದಾದ ಎಲ್ಲಾಗುರುಗಳ ಮಾಹಿತಿ ಲಭ್ಯವಿಲ್ಲ. ಹಿಂದಿನ ಶ್ರೀಗಳಾದ ಲಿಂ|| ಶ್ರೀ ಷ.ಬ್ರ. ಫಲಹಾರಮಹಾಸ್ವಾಮಿಗಳು ಶ್ರೀಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆ ಅಭಿವೃದ್ಧಿ ಪಡಿಸಿ ಈಗಿನಶ್ರೀಗಳನ್ನು ನೇಮಿಸಿಕೊಂಡು ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಫಲಹಾರ ಪ್ರಭುದೇವ ಸ್ವಾಮಿಗಳು 1995ರಲ್ಲಿಶ್ರೀಮಠದ ಪಟ್ಟಕ್ಕೆ ಬಂದಿದ್ದು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸಿದ್ದಾರೆ.ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮಹತ್ವ ಕೊಟ್ಟಿರುವ ಶ್ರೀಗಳು “ಶ್ರೀ ಫಲಹಾರ ಪ್ರಭುವಿದ್ಯಾಸಂಸ್ಥೆ”ಯನ್ನು ಸ್ಥಾಪಿಸಿಕೊಂಡು ಅದರಡಿಯಲ್ಲಿ ಸಂಸ್ಕøತ ಪಾಠಶಾಲೆಗಳು ಹಾಗೂಪ್ರಾಥಮಿಕ ಶಾಲೆಗಳನ್ನು ಆರಂಭಿಸಿ ಶಿಕ್ಷಣಕ್ರಾಂತಿ ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಉಚಿತವಿದ್ಯಾರ್ಥಿ ನಿಲಯ ಸ್ಥಾಪಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ

Swamiji

Swamiji Name :
ಶ್ರೀ ಷ.ಬ್ರ. ಫಲಹಾರ ಪ್ರಭುದೇವ ಸ್ವಾಮಿಗಳು
Date of Birth :
01-06-1960
Place :
ಬಂಡಳ್ಳಿ, ಕೊಳ್ಳೇಗಾಲ ತಾ||
Pattadikara :
1995
Photo :

Programs

ಮೇ ತಿಂಗಳಲ್ಲಿ ಶ್ರೀ ಹಿರಿಯ ಗುರುಗಳ ಆರಾಧನೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ
ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ದೀಪೋತ್ಸವ

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
ಸಂಸ್ಕøತ ಪಾಠಶಾಲೆಗಳು
ಅಂಗನವಾಡಿ
ಉಚಿತ ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ದೊಡ್ಡಮಠ ಬಂಡಳ್ಳಿ
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ

Map

Statistic

9 Views
0 Rating
0 Favorite
0 Share
error: Content is protected !!