Shree Dodda Matha – Kanchugal Bidare

Shree Dodda Matha – Kanchugal Bidare

ಶ್ರೀ ದೊಡ್ಡಮಠ - ಕಂಚುಗಲ್ ಬಿದರೆ

Average Reviews

Description

ಶ್ರೀ ದೊಡ್ಡಮಠ – ಕಂಚುಗಲ್ ಬಿದರೆ

ಕರ್ತೃ ಶ್ರೀ ಪ್ರಭು ದೊಡ್ಡ ಅಜ್ಜಯ್ಯ ಮಹಾಸ್ವಾಮಿಗಳು

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಕಂಚುಗಲ್ ಬಿದರೆ ಗ್ರಾಮದ ಕೆರೆಯಹತ್ತಿರ ಸ್ಥಾಪಿತಗೊಂಡಿರುವ ಶ್ರೀ ದೊಡ್ಡಮಠವು ಪುರಾತನ ಕಾಲದಿಂದಲೂ ಈ ಭಾಗದಜನರ ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ರೂಪುಗೊಂಡಿದೆ. ಶ್ರೀಮಠಕ್ಕೆ ಸಾವಿರವರ್ಷಗಳ ಇತಿಹಾಸವಿದೆಯೆಂದು ಹೇಳಲಾಗುತ್ತದಾದರೂ ಸೂಕ್ತ ಮಾಹಿತಿಗಳಕೊರತೆಯಿದೆ. ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದು ಬಂದಿರುವ ಶ್ರೀಮಠದ ಇತಿಹಾಸ ಲಭ್ಯವಾಗುವುದು ಶ್ರೀ ಪ್ರಭು ದೊಡ್ಡಅಜ್ಜಯ್ಯಸ್ವಾಮಿಗಳ ಕಾಲದಿಂದ.ಶ್ರೀ ಪ್ರಭು ದೊಡ್ಡಅಜ್ಜಯ್ಯ ಸ್ವಾಮಿಗಳು ಶ್ರೀಮಠದ ಅಧಿಕಾರ ಸ್ವೀಕರಿಸಿಧೀರ್ಘಕಾಲ ಬದುಕಿ ಮಠವನ್ನು ಜನಮನದ ಹತ್ತಿರ ಕೊಂಡೊಯ್ದು ವೀರಶೈವ ಧರ್ಮಬೆಳೆಯುವಂತೆ ಮಾಡಿದ್ದರು. ಶ್ರೀಗಳು ತಾವಿರುವಾಗಲೇ ಶ್ರೀ ಷ.ಬ್ರ. ಯೋಗಿರಾಜಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡುವಿದ್ಯಾಭ್ಯಾಸಕ್ಕಾಗಿ ಶಿವಯೋಗ ಮಂದಿರಕ್ಕೆ ಕಳುಹಿಸಿಕೊಟ್ಟರು. ಅಲ್ಲಿ ಶ್ರೀ ಪ್ರಭುಕುಮಾರಸ್ವಾಮಿಗಳು ಹಾನಗಲ್ಲಿನ ಶ್ರೀ ಕುಮಾರ ಸ್ವಾಮಿಗಳ ಪರಮ ಶಿಷ್ಯರಾಗಿ ಅವರಮಾರ್ಗದರ್ಶನದಲ್ಲಿ ಯೋಗವಿದ್ಯೆಯನ್ನು ಕಲಿತು “ಯೋಗಿರಾಜ” ಎಂಬ ಬಿರುದುಪಡೆದರು. ತದನಂತರ ಕೆ. ಬಿದರೆಯ ಮಠಕ್ಕೆ ಮರಳಿ ಬಂದ ಶ್ರೀಗಳು ಹಿರಿಯ ಗುರುಗಳಮಾರ್ಗದರ್ಶನದಲ್ಲಿ ಮಠವನ್ನು ಮುನ್ನಡೆಸಿದರು.ಶ್ರೀ ಪ್ರಭುಕುಮಾರ ಸ್ವಾಮಿಗಳು ಮತ್ತೆ ಸಂಚಾರ ಹೊರಟು ಭಕ್ತರ ಒಳಿತಿಗಾಗಿಯೋಗ ಪ್ರದರ್ಶನ ಮಾಡುತ್ತಾ ಭಕ್ತರ ಅಪೇಕ್ಷೆ ಮೇರೆಗೆ ಕಡೂರು ತಾಲ್ಲೂಕಿನಗಿರಿಯಾಪುರದಲ್ಲಿ ತಮ್ಮ ಕೊನೆ ದಿನಗಳನ್ನು ಕಳೆದು ಲಿಂಗೈಕ್ಯರಾದರು. ಇತ್ತ ಕೆ.ಬಿದರೆಮಠದಲ್ಲಿ ದೊಡ್ಡ ಅಜ್ಜಯ್ಯ ಸ್ವಾಮಿಗಳು ಲಿಂಗೈಕ್ಯರಾಗಿದ್ದು ಕೆಲ ಕಾಲ ಮಠ ಖಾಲಿಉಳಿಯಿತು. ನಂತರ ಸಖರಾಯಪಟ್ಟಣದ ಶ್ರೀ ಸದಾಶಿವ ಶಿವಾಚಾರ್ಯ ಹಾಲುಸ್ವಾಮಿಗಳಅನುಗ್ರಹದಿಂದ ಶ್ರೀ ಷ.ಬ್ರ. ಘನಲಿಂಗ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದಪಟ್ಟಾಧಿಕಾರವನ್ನು ವಹಿಸಿಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸಿ 2007ರ ಅಕ್ಟೋಬರ್ 07ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀಮಠದ ಶ್ರೀಗಳಾದ ಶ್ರೀ ಷ.ಬ್ರ. ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳುಹಿರಿಯ ಗುರುಗಳಿರುವಾಗಲೇ 1993ರ ಏಪ್ರಿಲ್ 25ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದುಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳು
Date of Birth :
26-06-1970
Place :
ಕೆ.ಬಿದರೆ, ಕಡೂರು ತಾ||
Pattadikara :
25-04-1993
Photo :

Programs

ಏಪ್ರಿಲ್ ತಿಂಗಳಲ್ಲಿ ಶ್ರೀ ಹಿರಿಯ ಗುರುಗಳ ಸ್ಮರಣೋತ್ಸವ
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ
ಕಾರ್ತಿಕ ಮಾಸದ ಹುಣ್ಣಿಮೆಯಂದು
ಶ್ರೀ ಮಠದ ಜಾತ್ರೆ ಮಹೋತ್ಸವ ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ ಕಾಲೇಜ್
ಗೋ ಶಾಲೆ

Photos

Full Address Kannada

ಶ್ರೀ ದೊಡ್ಡ ಮಠ
ಕಂಚುಗಲ್ ಬಿದರೆ - 577 138
ಕಡೂರು ತಾ||, ಚಿಕ್ಕಮಗಳೂರು ಜಿಲ್ಲೆ

Map

Near by Places

ಪಂಚನಹಳ್ಳಿ - 13 ಕಿ.ಮೀ.
ಕಡೂರು - 30 ಕಿ.ಮೀ.
ಚಿಕ್ಕಮಗಳೂರು - 60 ಕಿ.ಮೀ.

Statistic

91 Views
0 Rating
0 Favorite
0 Share
error: Content is protected !!