ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಬಾಲೇಹೊಸೂರು ಗ್ರಾಮವು ತಾಲ್ಲೂಕುಕೇಂದ್ರದಿಂದ 40 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 300ವರ್ಷಗಳ ಹಿಂದೆಶ್ರೀ ಮ.ನಿ.ಪ್ರ. ದಿಂಗಾಲೇಶ್ವರ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ದಿಂಗಾಲೇಶ್ವರಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಭಕ್ತರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದಿದೆ.ಕರ್ತೃಗುರುಗಳು ಲೋಕ ಸಂಚಾರ ಮಾಡುತ್ತಾ ಅಲ್ಲಲ್ಲಿ ಅನುಷ್ಠಾನಗೊಂಡು ಆಸ್ಥಳಗಳನ್ನು ಜಾಗೃತ ಸ್ಥಳಗಳನ್ನಾಗಿ ಪರಿವರ್ತಿಸುತ್ತಾ ಬಾಳೇಹೊಸೂರು ಗ್ರಾಮಕ್ಕೆಆಗಮಿಸಿದರು. ಶ್ರೀಗಳು ಇಲ್ಲಿ ಅನುಷ್ಟಾನ ಕೈಗೊಂಡು ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾಭಕ್ತರನ್ನು ಸೆಳೆದು ಅವರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿದರು. ಶ್ರೀಗಳುಸಮಾಜವನ್ನು ಧರ್ಮದ ನೆಲೆಗಟ್ಟಿನ ಮೇಲೆ ಬೆಳೆಸಲು ಶ್ರೀಮಠವನ್ನು ಸ್ಥಾಪಿಸಿದ್ದಾರೆ.ಶ್ರೀ ಮ.ನಿ.ಪ್ರ. ದಿಂಗಾಲೇಶ ್ವರ ಶಿವಯೋಗಿಗಳು ಸಾಮಾಜಿಕವಾಗಿಕ್ರಿಯಾಶೀಲರಾಗಿ ಶ್ರೀಮಠದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಭಕ್ತರಲ್ಲಿನಅಂಧಕಾರವನ್ನು ತೊಡೆದು ಹಾಕಿ ಸೂಕ್ತ ಮಾರ್ಗದರ್ಶನ ನೀಡಿ ಶ್ರೀಮಠವನ್ನುಮುನ್ನಡೆಸಿದ್ದು ಸನ್ಮಾರ್ಗ ತೋರಿದ್ದಾರೆ. ಇಂದು ಶ್ರೀಮಠವು ಸಕಲ ದರ್ಮದವರನ್ನೂಶ್ರೀಮಠದತ್ತ ಸೆಳೆದಿದ್ದು ಪ್ರಮುಖ ಮಠವಾಗಿ ಬೆಳೆದಿದೆ.ಕರ್ತೃಗುರುಗಳ ನಂತರದ ಎಲ್ಲಾ ಸ್ವಾಮಿಗಳು ಕರ್ತೃಗುರುಗಳ ಹೆಸರನ್ನೇಅಭಿದಾನ ಪಡೆದು ಶ್ರೀ ದಿಂಗಾಲೇಶ್ವರ ಸ್ವಾಮಿಗಳೆಂದು ಪಟ್ಟಕ್ಕೆ ಬಂದಿದ್ದು ಇಲ್ಲಿಯವರೆಗೂ 5ಜನ ಶ್ರೀಗಳು ಶ್ರೀಮಠದ ಅಧಿಕಾರಕ್ಕೆ ಬಂದಿದ್ದು ಈಗಿನ ಶ್ರೀಗಳು ಅನೇಯವರೆಂದುಹೇಳಲಾಗಿದೆ. ಪರಂಪರೆಯಲ್ಲಿ ಬಂದ ಎಲ್ಲಾ ಗುರುಗಳು ಕರ್ತೃಗುರುಗಳಂತೆಯೇಶ್ರೀಮಠದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದುಶ್ರೀಮಠದ ಅಭಿವೃದ್ದಿಯನ್ನು ಮುಂದುವರೆಸಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ದಿಂಗಾಲೇಶ್ವರ ಮಹಾಸ್ವಾಮಿಗಳುಶಿವಪೂಜಾನಿಷ್ಠರಾಗಿದ್ದರು ಹಾಗೂ ಧಾರ್ಮಿಕ ಚಟುವಟಿಕೆಯ ಕಡೆಗೆ ಒತ್ತು ಕೊಟ್ಟುಮಠವನ್ನು ಮುನ್ನಡೆಸಿದ್ದಾರೆ. ಶ್ರೀಗಳು ಅನುಷ್ಟಾನ ಪ್ರಿಯರಾಗಿದ್ದು ಧಾರ್ಮಿಕತೆಯ ಹಾಗೂಧರ್ಮಾಚರಣೆಗಳ ಮಹತ್ವವನ್ನು ಭಕ್ತರಿಗೆ ತಿಳಿಯಪಡಿಸಿ ಭಕ್ತರಲ್ಲಿ ಧಾರ್ಮಿಕ ಸಂಸ್ಕಾರವನ್ನುತುಂಬುತ್ತಿದ್ದರೆಂದು ತಿಳಿದುಬರುತ್ತದೆ. ಇಂತಹ ಮಹಾಮಹಿಮ ಶ್ರೀಗಳು ಲಿಂಗೈಕ್ಯರಾದನಂತರ ಕೆಲಕಾಲ ಶ್ರೀಮಠವು ಖಾಲಿ ಉಳಿದಿತ್ತು.ಈಗಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ದಿಂಗಾಲೇಶ್ವರ ಮಹಾಸ್ವಾಮಿಗಳು 6ನೇಶ್ರೀಗಳಾಗಿದ್ದು 1995ರ ಏಪ್ರಿಲ್ 20ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ಪಡೆದುಕೊಂಡಿದ್ದಾರೆ. 80ಬಹುಕಾಲ ಖಾಲಿ ಉಳಿದ ಶ್ರೀ ಮಠಕ್ಕೆ ಮುಂಡರಗಿಯ ಶ್ರೀ ಮ.ನಿ.ಪ್ರ. ಅನ್ನದಾನೇಶ್ವರಮಹಾಸ್ವಾಮಿಗಳು ಹಾಗೂ ಬಳ್ಳಾರಿ ಜಿಲ್ಲೆ ಲಿಂಗನಾಯಕನ ಹಳ್ಳಿಯ ಶ್ರೀ ಚನ್ನವೀರಮಹಾಸ್ವಾಮಿಗಳ ಕೃಪಾದೃಷ್ಟಿಯಿಂದ ಶ್ರೀಮಠದ ಉತ್ತರಾದಿಕಾರಿಗಳಾಗಿ ನೇಮಕಗೊಂಡಶ್ರೀಗಳ ಮೂಲ ನಾಮದೇಯ ಶ್ರೀ ಬೊಮ್ಮಲಿಂಗೇಶ್ವರ ದೇವರು. ಬೊಮ್ಮನಾಳದಲ್ಲಿ ಜನಿಸಿದಶ್ರೀ ಬೊಮ್ಮಲಿಂಗೇಶ್ವರ ದೇವರು ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸ ಮಾಡಿ ನಂತರಕೊಪ್ಪಳದ ಗವಿಮಠದಲ್ಲಿ ಧಾರ್ಮಿಕ ಶಿಕ್ಷಣವನ್ನು ಪಡೆದವರು.ಶ್ರೀಗಳು 1995ರಲ್ಲಿ ಶ್ರೀಮಠದ ಅಧಿಕಾರಕ್ಕೆ ಬರುವ ಮೊದಲೇ ಶ್ರೀಮಠದಉತ್ತರಾಧಿಕಾರಗಳಾಗಿ ಮಠದಲ್ಲಿ ನೆಲೆಸಿ ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಯ ಕಡೆಗೆಒತ್ತುಕೊಟ್ಟರು. ಕರ್ತೃಗುರುಗಳ ಗದ್ದುಗೆಗೆ ಕಟ್ಟಡ ನಿರ್ಮಾಣ ಮಾಡಿದರು. ಬಸವತತ್ವಗಳನ್ನುಪ್ರಚಾರಕ್ಕೆ ತರುವ ಉದ್ದೇಶದಿಂದ ಪ್ರವಚನ ಕಾರ್ಯ ಕೈಗೊಂಡು ಭಕ್ತರು ಮಠದೆಡೆಗೆ ಒಲವುತೋರುವಂತೆ ಮಾಡಿದರು. ಶ್ರೀ ಮಠದ ಕಟ್ಟಡವನ್ನು ಕಲ್ಲಿನಿಂದ ನಿರ್ಮಿಸಿದ ಶ್ರೀಗಳುಧಾರ್ಮಿಕ ಸ್ಮಾರಕವನ್ನಾಗಿ ಪರಿವರ್ತಿಸಿದರು.ಶ್ರೀಮಠದ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡ ನಂತರವಷ್ಟೇ ಅಧಿಕಾರವಹಿಸಿಕೊಂಡ ಶ್ರೀಗಳು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ ಹಾಗೂ ತಮ್ಮ ಪ್ರವಚನಗಳಮುಖಾಂತರ ಸಮಾಜವನ್ನು ಸನ್ಮಾರ್ಗದಲ್ಲಿ ಕರೆದೊಯ್ಯುತ್ತಿದ್ದಾರೆ. ಹಾಗೆಯೇ ಸಂಗೀತ,ಸಾಹಿತ್ಯ, ಕಲೆ ಮತ್ತು ಸಂಸ್ಕøತಿಗಳ ಬಗ್ಗೆ ಒಲವು ಇರುವ ಗುರುಗಳು ಸಮಾಜದಲ್ಲಿ ಸಾಂಸ್ಕøತಿಕವಾತಾವರಣ ಬೆಳೆಯಲು ನೆರವಾಗಿದ್ದಾರೆ.ಶ್ರೀಗಳು ಶ್ರೀಮಠದ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನುಆಯೋಜಿಸಿ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ ಹಾಗೂ ಸಂತಾನ ಭಾಗ್ಯ ಇಲ್ಲದವರಿಗೆಔಷದವನ್ನು ಸ್ವತಃ ಶ್ರೀಗಳೇ ನೀಡುತ್ತಾರೆ. ಇವರಿಂದ ಔಷದ ಪಡೆದ ಬಹುತೇಕರಿಗೆ ಸಂತಾನಭಾಗ್ಯ ದೊರೆತಿದೆ ಎಂದು ತಿಳಿದುಬರುತ್ತದೆ. ಹಾಗೆಯೇ ವಿದ್ಯಾರ್ಥಿಗಳಿಗೆ ಶ್ರೀಮಠದವತಿಯಿಂದ ಉಚಿತ ಪ್ರಸಾದ ನಿಲಯವಿದ್ದು ಜೊತೆಯಲ್ಲಿ ಅನಾಥ ಮಕ್ಕಳ ದತ್ತು ಸ್ವೀಕರಿಸಿಆ ಮಕ್ಕಳಿಗೆ ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಮಾರ್ಗದರ್ಶನ ಮಾಡಿ ಬೆಳೆಸುತ್ತಿದ್ದಾರೆ.
ವಿಶೇಷತೆ
ಅನಾಥ ಮಕ್ಕಳ ದತ್ತು ಸ್ವೀಕಾರ
ಶ್ರೀಮಠದ ವತಿಯಿಂದ ಪರಿಸರ ಜಾಗೃತ ಕಾರ್ಯಕ್ರಮ
Swamiji
Swamiji Name :
ಶ್ರೀ ಮ.ನಿ.ಪ್ರ. ದಿಂಗಾಲೇಶ್ವರ ಮಹಾಸ್ವಾಮಿಗಳು
Date of Birth :
02-07-1976
Place :
ಬೊಮ್ಮನಾಳ, ಕುಷ್ಠಗಿ ತಾ||
Pattadikara :
20-04-1995
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ
ಚೈತ್ರ ಮಾಸದಲ್ಲಿ ನಿತ್ಯಪ್ರವಚನ
ಚೈತ್ರ ಬಹುಳ ಪಂಚಮಿಗೆ ಶ್ರೀ ಮಠದ ರಥೋತ್ಸವ
ಚೈತ್ರಬಹುಳ ಷಷ್ಠಿಗೆ ಕಡಿಬಿನ ಕಾಳಗ ನಿಮಿತ್ತ 3 ದಿನಗಳ ಉಚಯ್ಯರ ಉತ್ಸವ, ಶ್ರೀ ಚೌಡೇಶ್ವರಿ ತಾಯಿಗೆ
ಉಡಿ ತುಂಬುವುದು ಶಿವದೀಕ್ಷೆ, ಅಯ್ಯಚಾರ, ಧರ್ಮಸಭೆ, ಸಾಮೂಹಿಕ ವಿವಾಹ, ರಕ್ತದಾನ, ನೇತ್ರದಾನ
ಹಾಗೂ ಆರೋಗ್ಯ ತಪಾಸಣೆ ಇರುತ್ತದೆ ಮತ್ತು ಕೃಷಿಮೇಳ
ಕಾರ್ತಿಕ ಮಾಸದಲ್ಲಿ ದೀಪೋತ್ಸವ
ದಸರಾದಲ್ಲಿ ಶ್ರೀ ಮಠದಿಂದ ಬನ್ನಿಮುಡಿಯುವ ಕಾರ್ಯಕ್ರಮ
ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Institutions
ಸಂಗೀತ / ವೈಧಿಕ ಪಾಠಶಾಲೆ ವಿದ್ಯಾರ್ಥಿ ನಿಲಯ
ಗೋಶಾಲೆ
ಉಚಿತ ಪ್ರಸಾದ ನಿಲಯ
Photos
Full Address Kannada
ಶ್ರೀ ದಿಂಗಾಲೇಶ್ವರ ಮಠ
ಬಾಲೇಹೊಸೂರು - 582 116
ಶಿರಹಟ್ಟಿ ತಾ||, ಗದಗ ಜಿಲ್ಲೆ