Shree Dasoha Matha, Adnur

Shree Dasoha Matha, Adnur Claimed

ಶ್ರೀ ದಾಸೋಹ ಮಠ, ಆಡ್ನೂರು

Average Reviews

Description

ಶ್ರೀ ದಾಸೋಹ ಮಠ, ಆಡ್ನೂರು

ಕರ್ತೃ ಪೂಜ್ಯ ಶ್ರೀ ಫಕೀರೇಶ್ವರ ಮಹಾಸ್ವಾಮಿಗಳು

ಧಾರವಾಡ ಜಿಲ್ಲೆ ಆಡ್ನೂರು ಗ್ರಾಮದಲ್ಲಿ ಶ್ರೀಶೈಲ ಪೀಠದ ಶಾಖಾ ಮಠವಾದ ಶ್ರೀದಾಸೋಹ ಮಠವು ಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿಶ್ರಮಿಸುತ್ತಿದೆ. ಪೂಜ್ಯ ಶ್ರೀ ಫಕೀರೇಶ್ವರ ಮಹಾಸ್ವಾಮಿಗಳು ಸುಮಾರು 200 ವರ್ಷಗಳಹಿಂದೆ ಈ ಭಾಗಕ್ಕೆ ಸಂಚಾರ ಬಂದು ಶ್ರೀ ದಾಸೋಹ ಮಠವನ್ನು ಸ್ಥಾಪಿಸಿದರೆಂದು ತಿಳಿದುಬರುತ್ತಿದ್ದು ತನ್ನ ದಾಸೋಹ ಕ್ರಿಯೆಯಿಂದಾಗಿ ಪ್ರಸಿದ್ಧಿಗೊಂಡಿದ್ದರು ಎಂದು ಹೇಳಲಾಗುತ್ತದೆ.ಕರ್ತೃಗುರುಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠದಲ್ಲಿ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ವ್ಯವಸ್ಥಿತ ರೀತಿಯಲ್ಲಿ ಶ್ರೀಮಠವನ್ನು ಅಭಿವೃದ್ಧಿಗೊಳಿಸಲು ಶ್ರಮಿಸಿರುವುದು ಕಂಡು ಬರುತ್ತದೆ. ಆದರೆ ಇವರ ಬಗೆಗೆ ಹೆಚ್ಚಿನ ದಾಖಲೆಗಳುಅಲಭ್ಯವಾಗಿವೆ. ಶ್ರೀಮಠದ ಪರಂಪರೆಯಲ್ಲಿ ಕಂಡುಬರುವ ಪ್ರಮುಖರೆಂದರೆ ಶ್ರೀಮಠದಅಧಿಕಾರ ವಹಿಸಿಕೊಳ್ಳದೇ ಮುನ್ನಡೆಸಿದ ಪ್ರಮುಖ ಚೇತನ ಶ್ರೀ ನಾಗಲಿಂಗ ಸ್ವಾಮಿಗಳು.ಹಾನಗಲ್ಲ ಕುಮಾರ ಸ್ವಾಮಿಗಳ ಕೃಪಾದೃಷ್ಠಿಗೆ ಒಳಗಾಗಿ ಆಧ್ಯಾತ್ಮ ಲೋಕಕ್ಕೆಆಗಮಿಸಿದ ಶ್ರೀ ನಾಗಲಿಂಗ ಸ್ವಾಮಿಗಳು ಸಂಸಾರವನ್ನು ತ್ಯಜಿಸಿ ಆಡ್ನೂರಿಗೆ ಬಂದುನೆಲೆಸಿದ್ದು ಆಧ್ಯಾತ್ಮ ಸಾಧನೆಯಲ್ಲಿ ನಿರತರಾಗಿದ್ದರು. ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಳ್ಳದಿದ್ದರೂ ತಮ್ಮ ಸಾಧನೆ ಮೂಲಕ ಭಕ್ತರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಕ್ರಮೇಣಶ್ರೀಮಠವು ಖಾಲಿ ಉಳಿದಿದ್ದು ಮೊದಲು ಉತ್ತರಾಧಿಕಾರಿಗಳಾಗಿ ಶ್ರೀ ಸಿದ್ಧವೀರ ದೇವರುಆಗಮಿಸಿದರಾದರೂ ನಂತರ ಅವರು ನವಲಗುಂದ ಗವಿಮಠಕ್ಕೆ ಪೀಠಾಧಿಪತಿಗಳಾಗಿಹೋದರು. ತದನಂತರ ಶ್ರೀ ಚಂದ್ರಶೇಖರ ದೇವರು ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿಬಂದರಾದರೂ ನಂತರದಲ್ಲಿ ಶ್ರೀ ನಿಡುಮಾಮಿಡಿ ಮಠದ ಪೀಠಾಧಿಪತಿಗಳಾಗಿ ಅಧಿಕಾರಸ್ವೀಕರಿಸಿದರು. ಅವರೇ ಮುಂದೆ ಜ.ಚ.ನಿ. ಎಂಬ ಹೆಸರಿನಿಂದ ಪ್ರಖ್ಯಾತಗೊಂಡವರು.ಈಗಿನ ಶ್ರೀಗಳಾದ ಶ್ರೀ ಮ.ಘ.ಚ. ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಬಹುಕಾಲ ಖಾಲಿ ಉಳಿದಿದ್ದ ಶ್ರೀಮಠದ ಅಧಿಕಾರವನ್ನು 1969ರ ಡಿಸೆಂಬರ್ 23ರಲ್ಲಿ ವಹಿಸಿಕೊಂಡು ಶ್ರೀಮಠವನ್ನು ಅಬಿವೃದ್ಧಿಪಥದತ್ತ ಕೊಂಡೊಯ್ಯುತ್ತಿದ್ದಾರೆ. ಶ್ರೀಗಳು ಸಾಹಿತ್ಯಿಕವಾಗಿಯೂ ಕಾರ್ಯತತ್ಪರರಾಗಿದ್ದು ಅದರ ಫಲವೇ ಶ್ರೀ ಜ.ಚ.ನಿ. ಸಾಹಿತ್ಯ ಜ್ಯೋತಿ ಹಾಗೂ1996ರಲ್ಲಿ ಸ್ಥಾಪಿತಗೊಂಡ ಡಾ. ವರಕವಿ ಬೇಂದ್ರೆ ಪ್ರತಿಷ್ಠಾನ.

Swamiji

Swamiji Name :
ಶ್ರೀ ಮ.ಘ.ಚ. ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು
Date of Birth :
20-1-1946
Place :
ಹುಲಗೂರು, ಶಿಗ್ಗಾಂವ ತಾ||
Pattadikara :
23-10-1969
Photo :

Programs

ಪ್ರತಿ ಅಮವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಕಾರ್ಯಕ್ರಮಗಳು
ಮಹಾನವಮಿಯಲ್ಲಿ ನಿತ್ಯ ಶ್ರೀದೇವಿ ಪುರಾಣ ಪ್ರವಚನ ಹಾಗೂ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Institutions

ಪ್ರೌಢಶಾಲೆ ಉಚಿತ ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ದಾಸೋಹ ಮಠ
ಆಡ್ನೂರು - 582 201
ನವಲಗುಂದ ತಾ||, ಧಾರವಾಡ ಜಿ||

Map

Near by Places

ಅಣ್ಣಿಗೇರಿ - 13 ಕಿ.ಮೀ.
ನವಲಗುಂದ - 20 ಕಿ.ಮೀ.
ಹುಬ್ಬಳ್ಳಿ - 48 ಕಿ.ಮೀ.
ಧಾರವಾಡ - 60 ಕಿ.ಮೀ.

Statistic

135 Views
0 Rating
0 Favorite
0 Share
error: Content is protected !!