Shree Dasoha Matha

Shree Dasoha Matha Claimed

ಶ್ರೀ ದಾಸೋಹ ಮಠ

Average Reviews

Description

ಶ್ರೀ ದಾಸೋಹ ಮಠ, ಸುರಪುರ

ಪೂಜ್ಯ ಶ್ರೀ ಶರಣಯ್ಯ ಸ್ವಾಮಿಗಳು

ಯಾದಗಿರಿ ಜಿಲ್ಲೆ ಸುರಪುರ ಪಟ್ಟಣದ ಕುಂಬಾರ ಪೇಟೆಯಲ್ಲಿ ಶ್ರೀ ದಾಸೋಹಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳಿಂದ ಪ್ರಚಲಿತಕ್ಕೆ ಬಂದಿದೆ. ಶ್ರೀದಾಸೋಹ ಮಠದ ಸ್ಥಾಪಕರು ಯಾರು, ಈ ಮೊದಲು ಶ್ರೀಮಠವು ಅಸ್ತಿತ್ವದಲ್ಲಿ ಇತ್ತೆಂಬುದಕ್ಕೆಯಾವುದೇ ದಾಖಲೆಗಳು ದೊರೆಯುವುದಿಲ್ಲ.ಪ್ರಸ್ತುತ ಪೂಜ್ಯ ಶ್ರೀ ಶರಣಯ್ಯ ಸ್ವಾಮಿಗಳು ಶ್ರೀಮಠದ ಧಾರ್ಮಿಕ ಆಚರಣೆಗಳುಹಾಗೂ ಭಕ್ತರ ಪ್ರಸಾದ ವ್ಯವಸ್ಥೆ ಮಾಡುತ್ತಾ ಶ್ರೀಮಠವನ್ನು ಮುನ್ನಡೆಸುತ್ತಿದ್ದು ಭಕ್ತರಲ್ಲಿಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀಗಳು 1950ರಲ್ಲಿ ಸುರಪುರತಾಲ್ಲೂಕಿನ ನರಸಿಂಗಪೇಟೆಯಲ್ಲಿ ಜನಿಸಿದವರಾಗಿದ್ದು ಶ್ರೀಮಠವನ್ನು ಪುನರುಜ್ಜೀವನಗೊಳಿಸಿಕೊಂಡು ನಿರಂತರವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಮಠದಲ್ಲಿ ಕಂತೆಭಿಕ್ಷದ ಮೂಲಕ ಪ್ರಸಾದವನ್ನು ಸಂಗ್ರಹಿಸಿ ಅಸಹಾಯಕರಿಗೆ,ಬಡವರಿಗೆ, ಹಸಿದು ಬಂದ ಭಕ್ತರಿಗೆ ನೀಡುತ್ತಾ ಬರಲಾಗುತ್ತಿದೆ. ಅದರೆ ಶ್ರೀಮಠದ ಆರ್ಥಿಕಸ್ಥಿತಿಗತಿಗಳು, ಕಟ್ಟಡದ ಸ್ಥಿತಿಗತಿಗಳಾಗಲೀ ಭದ್ರವಾಗಿಲ್ಲ. ಆದರೂ ತಮ್ಮ ಕೈಲಾದಷ್ಟುಭಕ್ತರಿಗೆ ಸಹಾಯ ಮಾಡುತ್ತಾ ಅವರ ಸಹಕಾರದೊಂದಿಗೆ ಕಾರ್ತೀಕ ಮತ್ತು ಶ್ರಾವಣಮಾಸಗಳಲ್ಲಿ ನಿತ್ಯ ವಿಶೇಷ ಪೂಜೆ ನಡೆಸುತ್ತಿದ್ದು, ಕಡ್ಲೆ ಹುಣ್ಣಿಮೆಯಲ್ಲಿ ಭಜನೆಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಶರಣಯ್ಯ ಸ್ವಾಮಿಗಳು
Date of Birth :
1950
Place :
ನರಸಿಂಗಪೇಟೆ, ಸುರಪುರ ತಾ||
Photo :

Programs

ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ವಿಶೇಷ ಪೂಜೆ.
ಕಾರ್ತೀಕ ಮಾಸದಲ್ಲಿ ನಿತ್ಯ ವಿಶೇಷ ಪೂಜೆ.
ಕಡ್ಲೆ ಹುಣ್ಣಿಮೆಗೆ ಭಜನೆ ಕಾರ್ಯಕ್ರಮ.

Photos

Full Address Kannada

ಶ್ರೀ ದಾಸೋಹ ಮಠ
ಕುಂಬಾರ ಪೇಟೆ, ಸುರಪುರ - 585 290
ಸುರಪುರ ತಾ||, ಯಾದಗಿರಿ ಜಿ||

Map

Near by Places

ಸುರಪುರ - 1 ಕಿ.ಮೀ.
ತಿಥಣಿ ಸೇತುವೆ - 20 ಕಿ.ಮೀ.
ಲಿಂಗಸೂಗೂರು - 50 ಕಿ.ಮೀ.

Statistic

62 Views
0 Rating
0 Favorite
0 Share
error: Content is protected !!