ಮಂಡ್ಯ ಜಿˉÉ್ಲಯ ಮಳವಳ್ಳಿ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ.ದೂರದಲ್ಲಿರುವ ನಂಜೇಗೌಡನದೊಡ್ಡಿ ಗ್ರಾಮದಲ್ಲಿ 1988ರಲ್ಲಿ ಊರಿನ ಗ್ರಾಮಸ್ಥರೇಸ್ಥಾಪಿಸಿದ ಶ್ರೀ ದಾಸೋಹ ಮಠವು ಅಸ್ತಿತ್ವದಲ್ಲಿದ್ದು ಪೂಜ್ಯ ಶ್ರೀ ದೇವಪ್ಪ ದೇವರು ಸ್ವಾಮಿಗಳನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನುಸೃಷ್ಠಿ ಮಾಡಿದೆ.ನಂಜೇಗೌಡನ ದೊಡ್ಡಿಯ ಗ್ರಾಮಸ್ಥರು ಗ್ರಾಮದಲ್ಲಿ ಧಾರ್ಮಿಕ ಚಟುವಟಿಕೆಗಳನ್ನುನಡೆಸಲು ಗುರುಗಳ ಅವಶ್ಯಕತೆಯಿದೆ ಎಂದರಿತು 1988ರಲ್ಲಿ ಶ್ರೀಮಠವನ್ನು ಸ್ಥಾಪಿಸಲುಕಟ್ಟಡ ನಿರ್ಮಿಸಿ ಧಾರ್ಮಿಕ ಆಚರಣೆಗಳನ್ನು ಪ್ರಾರಂಭಿಸಿ 1990ರಲ್ಲಿ ಶ್ರೀ ದೇವಪ್ಪ ದೇವರುಸ್ವಾಮಿಗಳನ್ನು ಪಟ್ಟಕ್ಕೆ ತಂದಿದ್ದಾರೆ. ಶ್ರೀಗಳು ಮೂಲ ಇದೇ ತಾಲ್ಲೂಕಿನ ವೀರರಾಜಪುರದವರಾಗಿದ್ದು ಸಾತ್ವಿಕರೆನಿಸಿಕೊಂಡವರು.ಶ್ರೀ ದೇವಪ್ಪದೇವರು ಸ್ವಾಮಿಗಳು ನೂತನವಾಗಿ ಪ್ರಾರಂಭಗೊಂಡ ಮಠದಅಧಿಕಾರ ವಹಿಸಿಕೊಂಡು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ತೀವ್ರಗೊಳಿಸಿದರು.ಹಾಗೆಯೇ ಕಂತೆ ಭಿಕ್ಷೆಯ ಮೂಲಕ ಹಸಿದ ಅಸಹಾಯಕರಿಗೆ ಎರಡು ಹೊತ್ತಿನ ಪ್ರಸಾದವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠದ ಅಭಿವೃದ್ದಿಕಾರ್ಯಗಳನ್ನು ಮಾಡುತ್ತಿದ್ದಾರೆ.ಶ್ರೀ ದೇವಪ್ಪ ದೇವರು ಸ್ವಾಮಿಗಳು ತಮ್ಮ ಧಾರ್ಮಿಕ ಕಾರ್ಯಕ್ರಮಗಳಿಂದಾಗಿಶ್ರೀಮಠದಲ್ಲಿ ಹಾಗೂ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿದ್ದು ಜೊತೆಗೆಪ್ರತಿದಿನ ರಾತ್ರಿ ಭಜನೆ ಕಾರ್ಯಕ್ರಮಗಳನ್ನು ನಡೆಸಲು ವೀರಶೈವ ಭಜನಾ ಸಂಘವನ್ನುಸ್ಥಾಪಿಸಿ ಅದರ ಮೂಲಕ ಧಾರ್ಮಿಕ ವಿಚಾರಗಳನ್ನು ಎಲ್ಲರಿಗೂ ತಲುಪುವಂತೆಮಾಡುತ್ತಿದ್ದಾರೆ. ಹಾಗೆಯೇ ಗ್ರಾಮದ ಭಕ್ತರ ಮನೆಗಳಲ್ಲಿ ನಡೆಯುವ ಧಾರ್ಮಿಕಆಚರಣೆಗಳಲ್ಲಿ ಪಾˉÉ್ಗೂಂಡು ಮಾರ್ಗದರ್ಶನ ಮಾಡುತ್ತಾರೆ.
Swamiji
Swamiji Name :
ಪೂಜ್ಯ ಶ್ರೀ ದೇವಪ್ಪ ದೇವರು ಸ್ವಾಮಿಗಳು
Date of Birth :
1948
Place :
ವೀರರಾಜಪುರ, ಮಳವಳ್ಳಿ ತಾ||
Pattadikara :
1990
Photo :
Programs
ಪ್ರತಿ ಅಮವಾಸÉ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಮಕರ ಸಂಕ್ರಾಂತಿ ಮತ್ತು ಧನುರ್ಮಾಸದಲ್ಲಿ ವಿಶೇಷ ಪೂಜೆ
Photos
Full Address Kannada
ಶ್ರೀ ದಾಸೋಹ ಮಠ
ನಂಜೇಗೌಡನದೊಡ್ಡಿ - 571 430
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ