ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ದಂಡಗುಂಡ ಗ್ರಾಮವು ತಾಲ್ಲೂಕುಕೇಂದ್ರದಿಂದ 20 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದ ಗುಡ್ಡದ ಪಕ್ಕಅಸ್ತಿತ್ತ್ವದಲ್ಲಿರುವ ಶ್ರೀ ದಂಡಗುಂಡ ಬಸವೇಶ್ವರ ಹಿರೇಮಠವು ಶ್ರೀಮದ್ ರಂಭಾಪುರಿಪೀಠದ ಶಾಖಾ ಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀಮಠದಕರ್ತೃಗುರುಗಳೆಂದು ಶ್ರೀ ಸಂಗಮೇಶ ್ವರ ಶಿವಾಚಾರ್ಯ ಮಹಾಸ್ವಾಮಿಗಳನ್ನುಹೆಸರಿಸಲಾಗಿದ್ದು ಮಠದ ಸ್ಥಾಪನೆ ಹಾಗೂ ನಂತರದ ಪರಂಪರೆಯ ಬಗ್ಗೆ ನಿಖರವಾಗಿತಿಳಿದು ಬರುವುದಿಲ್ಲ.ಕರ್ತೃಗುರುಗಳು ಸಂಚಾರದಲ್ಲಿ ಬಂದು ಗುಡ್ಡದ ಮೇಲಿನ ಶ್ರೀ ಬಸವೇಶ್ವರದೇವಾಲಯದಲ್ಲಿ ನೆಲೆನಿಂತು ಭಕ್ತರಿಗೆ ಮಾರ್ಗದರ್ಶನ ನೀಡಿ ಶ್ರೀಮಠವನ್ನುಸ್ಥಾಪಿಸಿದರೆಂದು ಹೇಳಲಾಗಿದೆ. ಶ್ರೀ ಬಸವೇಶ್ವರ ದೇವಾಲಯವು ಪುರಾತನ ಕಾಲದ್ದಾಗಿದ್ದುಶ್ರೀಮಠದ ಶ್ರೀಗಳೇ ಶ್ರೀ ಬಸವೇಶ್ವರ ಮೂರ್ತಿಗೆ ತ್ರಿಕಾಲ ಪೂಜೆ ಹಾಗೂ ಬೆಳಗ್ಗೆ ಮತ್ತು ಸಂಜೆಪಾದೋದಕಗಳನ್ನು ಕ್ರಿಯಾಮೂರ್ತಿಗಳಾಗಿ ನೀಡುತ್ತಾ ಬಂದಿದ್ದಾರೆ. ಶ್ರೀಮಠ ಹಾಗೂದೇವಾಲಯದ ಕಾರಣದಿಂದಾಗಿ ಈ ಸ್ಥಳವು ಈ ಭಾಗದ ಯಾತ್ರಾಸ್ಥಳವಾಗಿರೂಪುಗೊಂಡಿದೆ.ಕರ್ತೃ ಗುರುಗಳ ನಂತರದ ಪರಂಪರೆಯಲ್ಲಿ ಶ್ರೀ ಗುರುಬಸಯ್ಯಮಹಾಸ್ವಾಮಿಗಳು ಕೆಲ ವರ್ಷಗಳ ಕಾಲ ಶ್ರೀಮಠದ ಆಡಳಿತವನ್ನು ನೋಡಿಕೊಂಡಿದ್ದುಇವರ ನಂತರ ಶ್ರೀ ಷ.ಬ್ರ. ಚನ್ನಬಸವೇಂದ್ರ ಶಿವಾಚಾರ್ಯರು ಅರ್ದ ಶತಮಾನಕ್ಕೂ ಅಧಿಕಕಾಲ ಶ್ರೀಮಠವನ್ನು ಮುನ್ನಡೆಸಿದ್ದಾರೆ. ಶ್ರೀಕ್ಷೇತ್ರವನ್ನು ಯಾತ್ರಾ ಸ್ಥಳವನ್ನಾಗಿ ರೂಪಿಸಿ ಅಪಾರಭಕ್ತಬಳಗವನ್ನು ಸಂಪಾದಿಸಿದ್ದ ಶ್ರೀಗಳು ಈಗಿನ ಗುರುಗಳನ್ನು ಪಟ್ಟಕ್ಕೆ ತಂದು 2013ರಫೆಬ್ರವರಿ 19ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಸಂಗನಬಸವ ಶಿವಾಚಾರ್ಯ ಸ್ವಾಮಿಗಳು ಹಿಂದಿನಶ್ರೀಗಳ ಮಾರ್ಗದರ್ಶನದಲ್ಲಿ ಬೆಳೆದು ಆಧ್ಯಾತ್ಮದ ಆಳವಾದ ಅರಿವನ್ನು ಹೊಂದಿ 2011ರಲ್ಲಿಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದರು. ಶ್ರೀಗಳು ಕ್ರಿಯಾಶೀಲರಾಗಿ ಹಿಂದಿನಗುರುಗಳಂತೆಯೇ ಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿದ್ದಾರೆ. ಶ್ರೀಮಠದ ಜಾತ್ರಾಮಹೋತ್ಸವವು ಶ್ರಾವಣ ಮಾಸದ ಮೂರನೇ ಸೋಮವಾರ ವಿಜೃಂಭಣೆಯಿಂದನಡೆಯುತ್ತಿದ್ದು ಆಗ ಶ್ರೀ ಬಸವೇಶ್ವರ ರಥೋತ್ಸವವು ಜರುಗುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಸಂಗನಬಸವ ಶಿವಾಚಾರ್ಯ ಸ್ವಾಮಿಗಳು
Place :
ದಂಡಗುಂಡ, ಚಿತ್ತಾಪುರ ತಾ||
Pattadikara :
2011
Photo :
Programs
ಪ್ರತಿ ಅಮವಾಸೆಗೆ ಪಲ್ಲಕ್ಕಿ ಉತ್ಸವ ಮತ್ತು ಭಜನೆ ಕಾರ್ಯಕ್ರಮ
ಶಿವರಾತ್ರಿಗೆ ಮತ್ತು ಯುಗಾದಿಗೆ ವಿಶೇಷ ಪೂಜೆ
ಶ್ರಾವಣ ಮಾಸದ ಮೂರನೇ ಸೋಮವಾರ ಶ್ರೀ ಬಸವೇಶ್ವರ ರಥೋತ್ಸವ ಮತ್ತು ಜಾತ್ರೆ
Photos
Full Address Kannada
ಶ್ರೀ ದಂಡಗುಂಡ ಬಸವೇಶ್ವರ ಹಿರೇಮಠ
ದಂಡಗುಂಡ - 585211
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ