ಹಾವೇರಿ ಜಿಲ್ಲೆ ಹಾವನೂರಿನಲ್ಲಿ ಸುಮಾರು 17 ನೇ ಶತಮಾನದಲ್ಲಿಆರಂಭವಾಗಿರಬಹುದಾದ ಶ್ರೀ ದಳವಾಯಿ ಮಠವು ಈ ಭಾಗದಲ್ಲಿ ಧಾರ್ಮಿಕಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ. ಶ್ರೀಮಠದ ಪ್ರಾರಂಭ ಕಾಲಮಾನದ ಬಗ್ಗೆನಿಖರವಾದ ಮಾಹಿತಿಗಳು ದೊರೆಯುತ್ತಿಲ್ಲವಾದರೂ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳುಶ್ರೀ ಮಠದ ಕತೃಗುರುಗಳೆಂದು ಹೇಳಬಹುದು.ಕತೃಗುರುಗಳಾದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಮಹಾನ್ತಪಸ್ವಿಗಳಾಗಿದ್ದು ಜನರ ಕಷ್ಟಕಾರ್ಪಣ್ಯಗಳಿಗೆ ಸಹಾಯ ಮಾಡುತ್ತಾ ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡುತ್ತಿದ್ದರು. ಇವರ ತರುವಾಯ ಬಹಳಷ್ಟು ಉತ್ತರಾಧಿಕಾರಿಗಳುಬಂದರಾದರೂ ಹೆಚ್ಚು ನೆಲೆನಿಲ್ಲದೇ ಮಠ ಖಾಲಿ ಉಳಿಯಿತು.ಹೀಗೆ ಖಾಲಿ ಉಳಿದ ಮಠಕ್ಕೆ 1967ರಲ್ಲಿ ಪಟ್ಟಾಧಿಕಾರದ ಅನುಗ್ರಹ ಪಡೆದ ಲಿಂ.ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಈ ನಾಡಿನ ಅಪರೂಪದ ತಪಸ್ವಿಗಳು. ಎಡದ ಕೈಯಲ್ಲಿಲಿಂಗ, ಬಲದ ಕೈಯಲ್ಲಿ ಸಮಾಜ ಹೀಗೆ ಆತ್ಮಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣವನ್ನುತಮ್ಮ ಅನುಷ್ಠಾನ ಸಿದ್ಧಿಯ ಮೂಲಕ ಸಾಧಿಸಿಕೊಂಡು ಬಂದವರು ಲಿಂ. ಶ್ರೀ ಸಿದ್ಧಲಿಂಗಮಹಾಸ್ವಾಮಿಗಳು ಈ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯದಲ್ಲಿನಿರತರಾಗಿದ್ದರು.ಪ್ರಸಕ್ತ ಶ್ರೀ ಶಿವಕುಮಾರ ಸ್ವಾಮಿಗಳು ಲಿಂ. ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳಆಶಯ ಹಾಗೂ ಆಶೀರ್ವಾದದಂತೆ ನವೆಂಬರ್ 2012ರಲ್ಲಿ ಶ್ರೀ ಮಠಕ್ಕೆ ಪಟ್ಟಾಧಿಕಾರದಅನುಗ್ರಹವನ್ನು ಪಡೆದು ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳು ಶ್ರೀ ಶಿವಯೋಗಮಂದಿರದಲ್ಲಿ ಆದ್ಯಾತ್ಮ ಶಿಕ್ಷಣ, ಸಂಸ್ಕøತ, ವೇದ, ವಚನ ಸಾಹಿತ್ಯ, ಶಿವಯೋಗ ಸಾಧನೆಅಭ್ಯಾಸ ಮಾಡಿದ್ದು, ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಸಂಸ್ಕøತಎಂ.ಎ. ಪದವಿ ಪಡೆದಿದ್ದಾರೆ. ಇಂತಹ ವಿದ್ವತ್ ಪೂರ್ಣ, ಸರಳ, ಸಾತ್ವಿಕ ಗುರುಗಳುದಳವಾಯಿ ಮಠದ ಅಧಿಕಾರ ವಹಿಸಿಕೊಂಡಿರುವುದು ಈ ಭಾಗದ ಭಕ್ತರಲ್ಲಿ ಸಂತೋಷವನ್ನುಂಟುಮಾಡಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ ಶಿವಕುಮಾರ ಸ್ವಾಮಿಗಳು
Date of Birth :
14-3-1982
Place :
ಸಂಗಳಿ, ರಾಮದುರ್ಗ ತಾ||
Pattadikara :
26-11-2012
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಕಾರ್ತೀಕ ಮಾಸದಲ್ಲಿ ವಿಶೇಷ ಕಾರ್ಯಕ್ರಮಗಳು,
ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಪ್ರತಿ ಸೋಮವಾರ ಶ್ರೀಗಳ ಸಮ್ಮುಖದಲ್ಲಿ ಅಕ್ಕನ ಬಳಗದ ವತಿಯಿಂದ ಕಾರ್ಯಕ್ರಮಗಳು.
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ದಳವಾಯಿ ಮಠ
ಹಾವನೂರು - 581 108
ಹಾವೇರಿ ತಾ., ಹಾವೇರಿ ಜಿ.