ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಗ್ರಾಮವು ತಾಲ್ಲೂಕುಕೇಂದ್ರದಿಂದ 15 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀಚೌಕಿ ಮಠ (ವಿರಕ್ತಮಠ)ವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನು ನೀಡುತ್ತಿದೆ. ಶ್ರೀಮಠದ ಸ್ಥಾಪಿತ ಕಾಲಮಾನದಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.ಶ್ರೀಮಠದ ಕರ್ತೃಗುರುಗಳು ಯಾರು, ಅವರ ಕಾಲಮಾನ, ನಂತರ ಬಂದಿರಬಹುದಾದ ಗುರುಗಳು ಇವುಗಳ ಬಗ್ಗೆ ನಿಖರವಾದ ಮಾಹಿತಿಗಳ ಅಲಭ್ಯತೆ ಇದೆ. ಶ್ರೀಮಠದಲ್ಲಿ 3 ಗದ್ದುಗೆಗಳನ್ನು ಕಾಣಬಹುದಾಗಿದೆ. ಆದರೆ ಇವುಗಳ ಆಧಾರದ ಮೇಲೆ ಶ್ರೀಮಠದನಿಖರ ಇತಿಹಾಸ ತಿಳಿಯಲು ಸಾಧ್ಯವಾಗುವುದಿಲ್ಲ. ಇಲ್ಲಿನ ಭಕ್ತರ ಪ್ರಕಾರ ಶ್ರೀಮಠವು 12ಇಲ್ಲವೇ 15ನೇ ಶತಮಾನದಲ್ಲೇ ಪ್ರಾರಂಭವಾಗಿತ್ತೆಂದು ತಿಳಿದುಬರುತ್ತಿದೆ.ಶ್ರೀಮಠದ ಪರಂಪರೆಯಲ್ಲಿನ ಶ್ರೀ ಮ.ನಿ.ಪ್ರ. ಗುರುಲಿಂಗ ಸ್ವಾಮಿಗಳ ಬಗ್ಗೆ ಅಲ್ಪಮಾಹಿತಿ ಲಭ್ಯವಿದೆ. ಶ್ರೀಗಳು ಆಧ್ಯಾತ್ಮ ಸಿದ್ಧಿಪುರುಷರಾಗಿದ್ದು ತಮ್ಮ ಕಾರ್ಯಕ್ರಮಗಳಮೂಲಕ ಶ್ರೀಮಠವನ್ನು ಮುಂಚೂಣಿಗೆ ತಂದಿದ್ದಾರೆ. ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಚನ್ನಬಸವ ಸ್ವಾಮಿಗಳು ಶ್ರೀಮಠವನ್ನು ಅಭಿವೃದ್ಧಿಪಡಿಸಿದ್ದು 1978ರಲ್ಲಿ ಈಗಿನ ಶ್ರೀಗಳನ್ನುಅಧಿಕಾರಕ್ಕೆ ತಂದು 1988ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಗುಹೇಶ್ವರ ಮಹಾಸ್ವಾಮಿಗಳು ಹಿರಿಯಶ್ರೀಗಳಿಂದ ಪಟ್ಟಾಧಿಕಾರ ಸ್ವೀಕರಿಸಿ ಅವರ ಸೇವೆ ಹಾಗೂ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡರು. ಸುದೀರ್ಘ ಮೂರುವರೆ ದಶಕಗಳ ಕಾಲ ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬಂದಿರುವ ಶ್ರೀಗಳು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದಾರೆ. ಹಾಗೂ ಶ್ರೀಮಠದಲ್ಲಿಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಶ್ರೀಮಠದಲ್ಲಿ ಶ್ರಾವಣ ಮಾಸದ ಪ್ರತಿಸೋಮವಾರ ಲಿಂ. ಶ್ರೀ ಮ.ನಿ.ಪ್ರ. ಗುರುಲಿಂಗ ಸ್ವಾಮಿಗಳ ಭಾವಚಿತ್ರದ ಮೆರವಣಿಗೆನಡೆಸುತ್ತಿದ್ದು ಎರಡನೇ ಸೋಮವಾರ ವಿಜೃಂಭಣೆಯ ಜಾತ್ರೆ ನಡೆಸಲಾಗುತ್ತಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಗುಹೇಶ್ವರ ಸ್ವಾಮಿಗಳು
Date of Birth :
1953
Place :
ಕೂಮನೂರು, ಲಿಂಗಸೂಗೂರು ತಾ||
Pattadikara :
1978
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪ್ರತಿ ಸೋಮವಾರ ಲಿಂ. ಶ್ರೀ ಮ.ನಿ.ಪ್ರ. ಗುರುಲಿಂಗ ಸ್ವಾಮಿಗಳ ಭಾವಚಿತ್ರ ಮೆರವಣಿಗೆ, ಎರಡನೇ ಸೋಮವಾರ ಶ್ರೀಮಠದ ಜಾತ್ರೆ.