Shree Chilume Matha

Shree Chilume Matha Claimed

ಶ್ರೀ ಚಿಲುಮೆ ಮಠ

Average Reviews

Description

ಶ್ರೀ ಚಿಲುಮೆ ಮಠ – ಸೋಲೂರು

ಕರ್ತೃ – ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳು

ರಾಮನಗರ ಜಿˉÉ್ಲ ಮಾಗಡಿ ತಾಲ್ಲೂಕಿನ ಸೋಲೂರು ಗ್ರಾಮದಹೊರವಲಯದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಚಿಲುಮೆ ಮಠವು ವಿರಕ್ತ ಸಂಪ್ರದಾಯವನ್ನುರೂಡಿಸಿಕೊಂಡು ಬಂದಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕಪ್ರಚಲಿತದಲ್ಲಿದೆ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ.ಮ.ನಿ.ಪ್ರ. ಬಸವಲಿಂಗಮಹಾಸ್ವಾಮಿಗಳನ್ನು ಗುರುತಿಸಿˉÁಗಿದೆಯಾದರೂ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಶ್ರೀ ಬಸವಲಿಂಗ ಸ್ವಾಮಿಗಳು ಹಾಗೂ ಶ್ರೀ ಸದಾಶಿವ ಸ್ವಾಮಿಗಳ ಗದ್ದುಗೆಗಳನ್ನುಶ್ರೀಮಠದಲ್ಲಿ ಕಾಣಬಹುದಾಗಿದ್ದು ಇದರ ಪ್ರಕಾರ ಈಗಿನ ಶ್ರೀಗಳನ್ನು 3ನೇ ಶ್ರೀಗಳೆಂದುಹೇಳಬಹುದು. ಬಹುಶಃ ಶ್ರೀ ಮ.ನಿ.ಪ್ರ. ಸದಾಶಿವ ಸ್ವಾಮಿಗಳ ನಂತರ ಶ್ರೀಮಠವು ದೀರ್ಘಕಾಲ ಖಾಲಿ ಉಳಿದಿರುವುದರಿಂದ ಶ್ರೀಮಠದ ಪೂರ್ವೇತಿಹಾಸದ ಬಗ್ಗೆ ಹೆಚ್ಚಿನಮಾಹಿತಿಗಳು ತಿಳಿದುಬರುವುದಿಲ್ಲ. ಧೀರ್ಘ ಕಾಲ ಖಾಲಿ ಉಳಿದಿದ್ದ ಶ್ರೀಮಠವುಗುರುಗಳಿಲ್ಲದೇ ಜೀರ್ಣಗೊಂಡಿತ್ತು. ಈಗಿನ ಶ್ರೀಗಳು ಬರುವುದಕ್ಕಿಂತಲೂ ಮುಂಚೆಶ್ರೀಮಠವನ್ನು ಕಂಚುಗಲ್ಲು ಬಂಡೇಮಠದವರು ನೋಡಿಕೊಂಡು ಪೂಜಾ ಕಾರ್ಯವನ್ನುಮಾಡಿಕೊಂಡು ಬಂದಿದ್ದು ಈಗಿನ ಶ್ರೀಗಳು ಬಂದ ನಂತರ ಬಿಟ್ಟುಕೊಟ್ಟಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ಬಸವಲಿಂಗ ಸ್ವಾಮಿಗಳು ಶ್ರೀ ಸಿದ್ದಗಂಗಾಮಠದ ಹಿರಿಯ ಚೇತನರಾದ ಶ್ರೀ ಶಿವಕುಮಾರ ಸ್ವಾಮಿಗಳ ಕೃಪಾ ಕಟಾಕ್ಷದಿಂದ ಬೆಳೆದುಅವರ ಆದೇಶದಂತೆಯೇ ಶ್ರೀ ಚಿಲುಮೆ ಮಠಕ್ಕೆ 1982ರ ಏಪ್ರಿˉï 24ರಂದು ಕನಕಪುರದೇಗುಲಮಠದ ಶ್ರೀ ಮ.ನಿ.ಪ್ರ. ನಿರ್ವಾಣ ಮಹಾಸ್ವಾಮಿಗಳಿಂದ ಪಟ್ಟಾಧಿಕಾರದ ಅನುಗ್ರಹಸ್ವೀಕರಿಸಿ ಅಧಿಕಾರಕ್ಕೆ ಬಂದಿದ್ದಾರೆ.ಶ್ರೀ ಬಸವಲಿಂಗ ಸ್ವಾಮಿಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದ್ದು, ಮಠದ ಭಕ್ತರನ್ನು ಸಂಘಟಿಸಿ ಅವರ ಸಹಕಾರದಿಂದ ಹಂತಹಂತವಾಗಿಶ್ರೀಮಠವನ್ನು ಅಭಿವೃದ್ದಿಗೊಳಿಸಿದ್ದಾರೆ. ಮಠದ ಜಮೀನನ್ನು ಅಭಿವೃದ್ಧಿಪಡಿಸಿ ಮಠಕ್ಕೆಆದಾಯ ಮೂಲವನ್ನಾಗಿ ಮಾಡಿಕೊಂಡಿದ್ದಾರೆ ಹಾಗೂ ಶ್ರೀಮಠದಲ್ಲಿ ದೊರೆತಿರುವಹಳೆಯ ಕಾಲದ ವಸ್ತುಗಳನ್ನು ಸಂರಕ್ಷಿಸುವತ್ತ ಹೆಚ್ಚು ಗಮನ ಹರಿಸಿದ್ದಾರೆ. ಶ್ರೀಮಠಕ್ಕೆಚಿಲುಮೆ ಮಠವೆಂದು ಹೆಸರು ಬರಲು ಕಾರಣ ಶ್ರೀಮಠದಲ್ಲಿರುವ ನೀರಿನ ಚಿಲುಮೆ.

Swamiji

Swamiji Name :
ಶ್ರೀ ಮ.ನಿ.ಪ್ರ.ಸ್ವ ಬಸವಲಿಂಗ ಸ್ವಾಮಿಗಳು
Date of Birth :
22-05-1958
Place :
ವಡಗೆರೆ, ದೊಡ್ಡೊಬಳ್ಳಾಪುರ ತಾ||
Pattadikara :
24-04-1982
Photo :

Programs

ಪ್ರತಿ ಅಮವಾಸೆಗೆ ವಿಶೇಷ ಪೂಜೆ, ರುದ್ರಾಭಿಷೇಕ ಕಾರ್ತಿಕ ಅಮವಾಸೆಯಂದು ವಿಶೇಷ ಪೂಜೆ ಮತ್ತು ವಿವಿಧ ಸಾಂಸ್ಕøತಿ ಕಾರ್ಯಕ್ರಮಗಳು ಹಾಗೂ ಹಿಂದಿನ ಶ್ರೀಗಳ ದೀಪೋತ್ಸವ

Photos

Full Address Kannada

ಶ್ರೀ ಚಿಲುಮೆ ಮಠ ಸೋಲೂರು - 562 127 ಮಾಗಡಿ ತಾ||, ರಾಮನಗರ ಜಿˉÉ್ಲ

Map

Near by Places

ನೆಲಮಂಗಲ - 18 ಕಿ.ಮೀ. ತಿಪ್ಪಸಂದ್ರ - 35 ಕಿ.ಮೀ. ಮಾಗಡಿ - 16 ಕಿ.ಮೀ. ರಾಮನಗರ - 48 ಕಿ.ಮೀ.

Statistic

166 Views
0 Rating
0 Favorite
0 Share
error: Content is protected !!