Shree Chavadapuri Hirematha – Kalburgi

Shree Chavadapuri Hirematha – Kalburgi Claimed

ಶ್ರೀ ಚವದಾಪುರಿ ಹಿರೇಮಠ - ಕಲಬುರಗಿ

Average Reviews

Description

ಶ್ರೀ ಚವದಾಪುರಿ ಹಿರೇಮಠ – ಕಲಬುರಗಿ

ಕರ್ತೃ ಶ್ರೀ.ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ನಗರದ ಶಹಾಬಜಾರ್ ಬಡಾವಣೆಯಲ್ಲಿ ಅಸ್ತಿತ್ವದಲ್ಲಿರುವ ಶ್ರೀಚವದಾಪುರಿ ಹಿರೇಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಪಂಚಪೀಠಗಳ ಸಂಪ್ರದಾಯದಲ್ಲಿ ಬೆಳೆದುಬಂದಿದೆ. ಪುರಾತನ ಕಾಲದ ಶ್ರೀಮಠದಕರ್ತೃಗುರುಗಳಾದ ಶ್ರೀ.ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಶಿಷ್ಯಸಮುದಾಯದ ಜೊತೆ ಶ್ರೀಶೈಲದಿಂದ ಸಂಚಾರ ಬಂದು ನಾಡಿನಾದ್ಯಂತ ಸಂಚರಿಸುತ್ತಾಧರ್ಮ ಪ್ರಚಾರ ಕೈಗೊಂಡು ಕಲಬುರಗಿ ನಗರಕ್ಕೆ ಆಗಮಿಸುತ್ತಾರೆ. ಆಗ ಇಲ್ಲಿ ಆಳ್ವಿಕೆನಡೆಸುತ್ತಿದ್ದ ದೊರೆಯು ಶ್ರೀಗಳ ಪವಾಡಗಳಿಂದ ಪ್ರಭಾವಿತರಾಗಿ ಗುರುಗಳಿಗೆ ಅರಮನೆಪಕ್ಕದಲ್ಲೇ ಮಠವನ್ನು ಕಟ್ಟಿಸಿಕೊಡುತ್ತಾರೆ. ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 13ಮಠಗಳನ್ನು ಸ್ಥಾಪಿಸಿ ಎಲ್ಲಾ ಹದಿನಾಲ್ಕು ಮಠಗಳಿಗೂ ಶ್ರೀ ರೇವಣಸಿದ್ದ ಶಿವಾಚಾರ್ಯರನ್ನೇಮುಖ್ಯ ಮಠಾಧೀಶರನ್ನಾಗಿ ನೇಮಿಸುತ್ತಾರೆ. ಈ ಕಾರಣದಿಂದಾಗಿ ಶ್ರೀಮಠಕ್ಕೆ ಶ್ರೀಚೌದಾಪುರಿ ಹಿರೇಮಠವೆಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.ಈ ರೀತಿಯಾಗಿ ಬೆಳೆದು ಬಂದಿರುವ ಶ್ರೀಮಠದ ಪರಂಪರೆಯಲ್ಲಿ ಕಂಡುಬರುವಶ್ರೀ. ಷ.ಬ್ರ. ಚನ್ನಬಸವ ಶಿವಾಚಾರ್ಯರು 18ನೇ ಶತಮಾನದಲ್ಲಿ ಶ್ರೀಮಠವನ್ನು ಅಭಿವೃದ್ದಿಪಡಿಸಿರುವುದು ಕಂಡುಬರುತ್ತಿದ್ದು ಶ್ರೀಗಳ ಕರ್ತೃಗದ್ದುಗೆ ಶ್ರೀಮಠದಲ್ಲಿದೆ. ಹಿರಿಯ ಶ್ರೀಗಳಗುರುಗಳಾಗಿದ್ದ ಶ್ರೀ.ಷ.ಬ್ರ. ಶಾಂತವೀರ ಶಿವಾಚಾರ್ಯರ ಕಾಲದಲ್ಲಿ ಶ್ರೀಮಠವು ಹೆಚ್ಚುಪ್ರಚಲಿತಕ್ಕೆ ಬಂದಿದ್ದು ಗುರುಗಳು ಉತ್ತಮ ನಾಟಕಗಳ ರಚನೆಕಾರ ಹಾಗೂನಿರ್ದೇಶಕರಾಗಿದ್ದರೆಂದು ತಿಳಿದುಬರುತ್ತದೆ. ಈ ಶ್ರೀಗಳು ಶ್ರೀಮಠವನ್ನು ಬೆಳೆಸಿ 1983ರಲ್ಲಿಲಿಂಗೈಕ್ಯರಾಗಿದ್ದಾರೆ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ. ರೇವಣಸಿದ್ದ ಶಿವಾಚಾರ್ಯರು1979ರಲ್ಲಿ ಪಟ್ಟಕ್ಕೆ ಬಂದಿದ್ದು ತಮ್ಮ ಗುರುಗಳ ಸೇವೆ ಹಾಗೂ ಮಾರ್ಗದರ್ಶನದಲ್ಲಿಪರಿಪಕ್ವಗೊಂಡಿದ್ದರು. ಉತ್ತಮ ಪಂಡಿತರಾಗಿದ್ದ ಶ್ರೀಗಳು ಸಮಾಜವನ್ನು ಸಂಘಟಿತವಾಗಿಬೆಳೆಸಿ 2007ರ ಮೇನಲ್ಲಿ ಲಿಂಗೈಕ್ಯರಾದರು. ಇವರ ನಂತರ 2007ರ ನವೆಂಬರ್ 16ರಲ್ಲಿಶ್ರೀಮಠದ ಪಟ್ಟಕ್ಕೆ ಬಂದಿರುವ ಶ್ರೀ.ಷ.ಬ್ರ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳುಪರಂಪರೆಯ ಗುರುಗಳ ಹಾದಿಯಲ್ಲಿ ಶ್ರೀ ಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡುಬಂದಿದ್ದಾರೆ. ಕರ್ತೃಗಳ ಕಾಲದಲ್ಲಿ ಕೋಟೆ ಪ್ರದೇಶದಲ್ಲಿ ಸ್ಥಾಪಿತಗೊಂಡಿದ್ದ ಶ್ರೀಮಠವುಕ್ರಮೇಣ ಈಗಿನ ಶಹಾಬಜಾರ್ ಪ್ರದೇಶಕ್ಕೆ ಸ್ಥಳಾಂತರಗೊಂಡು ಧಾರ್ಮಿಕಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಬಂದಿರುವುದನ್ನು ಕಾಣಬಹುದು.

Swamiji

Swamiji Name :
ಶ್ರೀ.ಷ.ಬ್ರ. ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
15-6-1978
Place :
ರಂಗಮ್ಪೇಟ್, ಸುರಪುರ ತಾ||
Pattadikara :
16-11-2007
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ರುದ್ರಾಭಿಷೇಕ
ದಸರಾದಲ್ಲಿ ವಿಶೇಷ ಪೂಜೆ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ಕೊನೆಯದಿನ ಪಲ್ಲಕಿ ಉತ್ಸವ
ಪ್ರತಿ ವರ್ಷ ಮೇ 7 ರಂದು 5ನೇ ಗುರುಗಳ ಪುಣ್ಯಾರಾಧನೆ.
ಪುಷ್ಯ ಮಾಸದ ಶುದ್ದ ತೃತೀಯದಂದು ಕರ್ತೃ ಶ್ರೀ.ಷ.ಬ್ರ. ಚನ್ನಬಸವ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ
ಆಷಾಡ ಶುದ್ದ ಷಷ್ಠಿಗೆ ಲಿಂ. ಶ್ರೀ.ಷ.ಬ್ರ. ಶಾಂತವೀರ ಸ್ವಾಮಿಗಳ ಪುಣ್ಯಾರಾಧನೆ
ಮಾಘ ಶುದ್ದ ದಶಮಿಗೆ ಲಿಂ. ಶತಾಯುಷಿ ಶ್ರೀ.ಷ.ಬ್ರ. ಚನ್ನಬಸವ ಸ್ವಾಮಿಗಳ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಚವದಾಪುರಿ ಹಿರೇಮಠ
ಶಹಾಬಜಾರ್ - 585 101
ಕಲಬುರಗಿ ತಾ||, ಜಿಲ್ಲೆ

Map

Near by Places

ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ - 4 ಕಿ.ಮೀ.
ರೈಲ್ವೆ ಸ್ಟೇಷನ್ - 4 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!