ಕರ್ನಾಟಕದ ಇತಿಹಾಸದಲ್ಲಿ ಬಸವಕಲ್ಯಾಣಕ್ಕೆ ತನ್ನದೇ ಆದ ಮಹತ್ವವಿದೆ.ಅಂತಹ ಬಸವಕಲ್ಯಾಣ ತಾಲ್ಲೂಕಿನ ಒಂದು ಪುಟ್ಟ ಅಚ್ಚ ಕನ್ನಡ ಹಳ್ಳಿ ಹಾರಕೂಡ. ಈ ಹಳ್ಳಿಗೆಪ್ರಸಿದ್ಧಿ ಬಂದದ್ದು ಅಲ್ಲಿನ ಶ್ರೀ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠದಿಂದ. ಒಂದುಮಠದಿಂದ ಒಂದು ಹಳ್ಳಿ, ಒಂದು ಪ್ರದೇಶ ಹೇಗೆ ಸುಸಂಸ್ಕøತಿಯ ನೆಲೆವೀಡಾಗುತ್ತದೆಎಂಬುದಕ್ಕೆ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ ಒಂದು ಉದಾಹರಣೆ.ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಷ.ಬ್ರ. ಸಂಗನಬಸವ ಶಿವಾಚಾರ್ಯ ಸ್ವಾಮಿಗಳನ್ನು ಹೆಸರಿಸಲಾಗಿದೆಯಾದರೂ ಅವರ ಬಗ್ಗೆಯಾಗಲೀ, ಕಾಲಮಾನದ ಬಗ್ಗೆಯಾಗಲೀಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆನಂತರ ಬಂದಿರುವ ನಾಲ್ಕು ಜನ ಪೀಠಾಧಿಪತಿಗಳ ಬಗ್ಗೆಯೂಸ್ಪಷ್ಟತೆಯಿಲ್ಲ. ಶ್ರೀಮಠದ ಆರನೇ ಪೀಠಾಧಿಪತಿಗಳಾದ ಶ್ರೀ ಷ.ಬ್ರ. ಚನ್ನಬಸವ ಶಿವಯೋಗಿಸ್ವಾಮಿಗಳಿಂದಾಗಿ ಶ್ರೀಮಠವು ಪ್ರಚಲಿತಕ್ಕೆ ಬಂದಿದೆ.ಮೂಲತಃ ಹಾರಕೂಡ ಹಿರೇಮಠವು ಪ್ರತಿಷ್ಠಿತ ಶ್ರೀ ರಂಭಾಪುರಿ ಪೀಠದಗುರುಸ್ಥಲ ಮಠ. ಆದರೆ ಇಲ್ಲಿನ ಮಠಾಧ್ಯಕ್ಷರಿಗೆ ಪಂಚಾಚಾರ್ಯರು ಒಂದು ಕಣ್ಣಾದರೆ,ಶಿವಶರಣರು ಇನ್ನೊಂದು ಕಣ್ಣು. ಮಾನವ ಧರ್ಮದ ನಿಜವಾದ ಆದರಣೆ ಇಲ್ಲಿದೆ. ಇದಕ್ಕೆಸಾಕ್ಷಿ ಇಲ್ಲಿ ನಡೆಯುವ ಶಿವಾನುಭವಗೋಷ್ಠಿಗಳು, ಸಾಮಾಜಿಕ ಕಾರ್ಯಕ್ರಮಗಳು ಹಾಗೂಶ್ರೀಮಠದ ವತಿಯಿಂದ ಪ್ರತಿವರ್ಷ ನೀಡುವ ‘ಶ್ರೀ ರೇಣುಕ ಬಸವ’ ಪ್ರಶಸ್ತಿಗಳು.ಶ್ರೀಮಠದ ಪೀಠಾಧ್ಯಕ್ಷರಲ್ಲಿ ಅತ್ಯಂತ ಪ್ರಭಾವಿಯಾಗಿದ್ದವರು, ಪವಾಡಪುರುಷತಪೋನಿಷ್ಠರಾಗಿದ್ದ ಪೂಜ್ಯ ಶ್ರೀ ಚನ್ನಬಸವ ಶಿವಯೋಗಿಗಳು. ಇವರ ಕಾಲಕ್ಕೆ ಮಠದಕೀರ್ತಿ ಪ್ರವರ್ಧಮಾನಕ್ಕೇರಿತು. ಶಿವಯೋಗಿಗಳು ಈ ಭಾಗದ ನಡೆದಾಡುವ ದೇವರೆಂದೇಹೆಸರಾಗಿದ್ದವರು. ಸಮಾಜದಲ್ಲಿನ ಮೌಢ್ಯ, ಕಂದಾಚಾರ, ಅಂಧ ಆಚರಣೆಗಳನ್ನುಹೋಗಲಾಡಿಸಲು ಪ್ರಯತ್ನಿಸಿದವರು. ಸಮಾಜಕ್ಕೆ ಧಾರ್ಮಿಕ ಸ್ಪರ್ಶ ನೀಡುತ್ತ ಸತ್ಯ, ಸ್ನೇಹ,ಪ್ರೀತಿಯಿಂದ ಬದುಕುವುದನ್ನು ಕಲಿಸಿಕೊಟ್ಟ ದಾರ್ಶನಿಕರು.ಶ್ರೀ ಚನ್ನಬಸವ ಶಿವಯೋಗಿಗಳಿಂದಾಗಿ ಶ್ರೀಮಠದ ಕೀರ್ತಿ ನಾಡಿನಗಲಕ್ಕೂಪಸರಿಸಿತು. ನಿತ್ಯ ಸಂಚಾರಿ ಜಂಗಮರಾದ ಅವರು ಪಾದವಿಟ್ಟಲ್ಲಿ ಪುಣ್ಯ ಕ್ಷೇತ್ರವಾಯಿತು.ಅಂತೆಯೇ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರದ ಅನೇಕ ಸ್ಥಳಗಳಲ್ಲಿ ಹಾರಕೂಡಹಿರೇಮಠದ ಶಾಖಾಮಠಗಳು ತಲೆಎತ್ತಿದವು. ಇಂದಿಗೂ ಆ ಸ್ಥಳಗಳಲ್ಲೆಲ್ಲಾ ಜಾತ್ರೆ, ಪುರಾಣಪ್ರವಚನಗಳು, ಧಾರ್ಮಿಕ ಚಟುವಟಿಕೆಗಳು ನಡೆಯುತ್ತಾ ಆ ಪ್ರದೇಶಗಳಲ್ಲೆಲ್ಲಾ ಧಾರ್ಮಿಕವಾತಾವರಣವನ್ನು ನೆಲೆಗೊಳಿಸಿದೆ.ಶ್ರೀ ಚನ್ನಬಸವ ಶಿವಯೋಗಿಗಳ ನಂತರ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಗುರುಗಳ ಪರಂಪರೆಯನ್ನು ಮುಂದುವರೆಸಿಮಠದ ಬೆಳವಣಿಗೆ ಮತ್ತು ಧಾರ್ಮಿಕ-ಆಧ್ಯಾತ್ಮಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು.ಲಿಂ. ಚನ್ನಬಸವ ಶಿವಯೋಗಿಗಳ ಮಹತ್ವವನ್ನು ಭಕ್ತರಿಗೆ ತಿಳಿಸುವ ಹಲವು ಕಾರ್ಯಗಳನ್ನುನೆರವೇರಿಸಿದ ಶ್ರೀಗಳು ತಮ್ಮ ಜೀವಿತಾವಧಿಯಲ್ಲಿಯೇ ಮಠಕ್ಕೆ ಮುಂದಿನ ಉತ್ತರಾಧಿಕಾರಿಗಳನ್ನಾಗಿ ಶ್ರೀ ಚನ್ನವೀರ ಶಿವಾಚಾರ್ಯರನ್ನು ನೇಮಕ ಮಾಡಿದರು. ಆದರೆ ಅದಾದ ಕೆಲಸಮಯದಲ್ಲೇ 1969ರಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯರು ಲಿಂಗೈಕ್ಯರಾದರು.ಶ್ರೀಗಳು ಲಿಂಗೈಕ್ಯರಾದ ಸಮಯದಲ್ಲಿ ಇನ್ನೂ ಬಾಲಕರಾಗಿದ್ದ ಶ್ರೀ ಚನ್ನವೀರಸ್ವಾಮಿಗಳು ಹಾರಕೂಡದಲ್ಲಿ ಪ್ರಾಥಮಿಕ ಶಿಕ್ಷಣ, ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿ ಹುಬ್ಬಳ್ಳಿಗೆ ಆಗಮಿಸಿದರು. ಹುಬ್ಬಳ್ಳಿಯ ಮೂರುಸಾವಿರಮಠದಲ್ಲಿ ವಾಸ್ತವ್ಯವಿದ್ದು 1984ರಲ್ಲಿ ಬಿ.ಎ. ಪದವಿ ಪಡೆದು ನಂತರ 1986ರಲ್ಲಿ ಧಾರವಾಡದಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಗಳಿಸಿದರು.ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಸಂಚಾರ ಹೊರಟ ಶ್ರೀಗಳು ಸಮಾಜಪರಿಜ್ಞಾನ, ಸಂಸ್ಕøತ, ಕನ್ನಡ, ವೇದವೇದಾಂತ, ಧರ್ಮ ಸಂಶೋಧನ ಗ್ರಂಥಗಳ ಆಳವಾದಅಧ್ಯಯನ, ಅಲ್ಲಲ್ಲಿ ಪ್ರವಚನ, ಪ್ರಸಾರ ಭಾಷಣಗಳಲ್ಲಿ ನಿರಂತರವಾಗಿ ತೊಡಗಿದರು.ನಂತರ ಶ್ರೀಮಠಕ್ಕೆ ಮರಳಿ 1996ರ ಏಪ್ರಿಲ್ 25ರಂದು ಅತ್ಯಂತ ವಿಜೃಂಭಣೆಯಿಂದ ವಿಧ್ಯುಕ್ತವಾಗಿ ನಾಡಿನ ಅನೇಕ ಮಠಾಧೀಶರ ಸಾನಿಧ್ಯದಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದರು.ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯ ಸ್ವಾಮಿಗಳೆಂಬ ಅಭಿದಾನದೊಂದಿಗೆ ಪಟ್ಟಕ್ಕೆಬಂದ ಶ್ರೀಗಳು ಮಠದ ಪರಂಪರೆ ಮುಂದುವರೆಸಿಕೊಂಡು ಬರುವ ಜೊತೆಯಲ್ಲಿ ಮಠದಕಾರ್ಯವ್ಯಾಪ್ತಿಯನ್ನು ಹಿಗ್ಗಿಸಿದ್ದಾರೆ. 1996ರಲ್ಲಿ ಶ್ರೀ ಚನ್ನಬಸವೇಶ್ವರ ಕುಸ್ತಿ ಕ್ರೀಡಾಂಗಣ,1997ರಲ್ಲಿ ಶ್ರೀ ಚನ್ನಬಸವೇಶ್ವರ ಗೋಪುರ ಹಾಗೂ ಮಹಾದ್ವಾರಗಳನ್ನು ನಿರ್ಮಿಸಿದ ಶ್ರೀಗಳು1998ರಲ್ಲಿ ಶ್ರೀಮಠದ ಜೀರ್ಣೋದ್ಧಾರ ಕೈಗೊಂಡು ಅದೇವರ್ಷ ಶ್ರೀ ಚನ್ನಬಸವೇಶ್ವರಕಲ್ಯಾಣ ಮಂಟಪವನ್ನು ನಿರ್ಮಿಸಿದರು. ನಂತರ 2002ರಲ್ಲಿ ಶ್ರೀ ಚನ್ನಬಸವೇಶ್ವರ ಬಯಲುರಂಗಮಂದಿರವನ್ನು ನಿರ್ಮಿಸಿ 2005ರಲ್ಲಿ ‘ಗುರುಲಿಂಗಧಾಮ’ ಕಟ್ಟಡವನ್ನು ಅಂದಿನಮುಖ್ಯಮಂತ್ರಿಗಳಾದ ಶ್ರೀ ಧರ್ಮಸಿಂಗ್ರವರಿಂದ ಉದ್ಘಾಟಿಸಿದರು.ಈ ರೀತಿ ಅನೇಕ ಅಭಿವೃದ್ಧಿಕಾರ್ಯಗಳನ್ನು ಈ ಎರಡು ದಶಕಗಳಲ್ಲಿ ಸಾಧಿಸಿರುವಶ್ರೀಗಳು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ. ಹಾಗೂ ಅನೇಕಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿರುವ ಶ್ರೀಗಳು ಶ್ರೀಮಠದ ವತಿಯಿಂದ ಅನೇಕ ಸಾಹಿತ್ಯಿಕಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆಹಾಗೂ ಸೃಜನಶೀಲ ಸಾಹಿತ್ಯ ಮಾಲೆಗಳನ್ನು ಪ್ರಕಾಶಿಸಿರುವ ಶ್ರೀಗಳು ಇದುವರೆಗೂ 50ಕ್ಕೂಹೆಚ್ಚಿನ ಪುಸ್ತಕಗಳನ್ನು ಹೊರತಂದಿದ್ದಾರೆ.ಶ್ರೀಗಳ ನೇತೃತ್ವದಲ್ಲಿ ಪ್ರತಿವರ್ಷ ಮೂರು ದಿನಗಳವರೆಗೆ ನಡೆಯುವ ಜಾತ್ರಾಮಹೋತ್ಸವದಲ್ಲಿ ರಥೋತ್ಸವ ಪ್ರಮುಖ ಘಟ್ಟ. ನಂತರ ನಡೆಯುವ ಶಿವಾನುಭವ ಚಿಂತನಗೋಷ್ಠಿ ಪ್ರಮುಖ ಕಾರ್ಯಕ್ರಮ. ಆಗ ಸಾಹಿತಿ, ಕಲಾವಿದರನ್ನು ಸತ್ಕರಿಸುವ ಮೂಲಕಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಹಾಗೂ ಶ್ರೀಮಠದಲ್ಲಿ ಪ್ರತಿವರ್ಷ ಶ್ರೀ ಗುರುಲಿಂಗಶಿವಾಚಾರ್ಯರ ಪುಣ್ಯತಿಥಿ ನಿಮಿತ್ತ ನಡೆಯುವ ಅನುಭಾವ ಪ್ರಚಾರ, ಉಪನ್ಯಾಸಮಾಲೆಕಾರ್ಯಕ್ರಮದಲ್ಲಿ ಹಲವು ಪುಸ್ತಕಗಳ ಬಿಡುಗಡೆ ಮಾಡಲಾಗುತ್ತಿದೆ.2011ರ ಅ. 5ರಂದು ನಡೆದ ಉಪನ್ಯಾಸಮಾಲೆ ಬೆಳ್ಳಿಹಬ್ಬದ ಸಂದರ್ಭದಲ್ಲಿಶ್ರೀಮಠದಿಂದ ‘ಶ್ರೀ ಚನ್ನರೇಣುಕ ಬಸವ ಪ್ರಶಸ್ತಿ’ ಸ್ಥಾಪಿಸಲಾಯಿತು. 25 ಸಾವಿರ ರೂಪಾಯಿನಗದು, ಒಂದು ತೊಲ ಚಿನ್ನ ಹಾಗೂ ಫಲಕವನ್ನೊಳಗೊಂಡ ಈ ಪ್ರಶಸ್ತಿ ಪ್ರತಿವರ್ಷಸಾಹಿತ್ಯ, ಸಾಂಸ್ಕøತಿಕ, ಸಂಗೀತ, ಕಲಾಕ್ಷೇತ್ರದ ಸಾಧಕರಿಗೆ ನೀಡಿ ಗೌರವಿಸಲಾಗುತ್ತದೆ.ಇದುವರೆಗೆ ಈ ಪ್ರಶಸ್ತಿಯು ಸಂಶೋಧಕ ಡಾ. ಸಂಗಮೇಶ ಸವದತ್ತಿಮಠ, ನಾಟಕ ಸಾಹಿತಿಶ್ರೀ ಎಲ್.ಬಿ.ಕೆ. ಅಲ್ದಾಳ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತ ಸಾಹಿತಿ ಡಾ. ಪಂಚಾಕ್ಷರಿಹಿರೇಮಠ ಮತ್ತು ಹಿರಿಯ ಸಾಹಿತಿ ಶ್ರೀ ದೊಡ್ಡರಂಗೇಗೌಡ ಅವರಿಗೆ ಸಂದಿದೆ.ಶ್ರೀಗಳ ಶಿಕ್ಷಣ, ಧರ್ಮಚಿಂತನೆ, ಪ್ರವಚನ, ಸಂಗೀತ, ಸಾಹಿತ್ಯ, ಕಲೆ, ಸಾಂಸ್ಕøತಿಕಮುಂತಾದ ಹತ್ತಾರು ಕ್ಷೇತ್ರಗಳ ಸಾಧನೆಯನ್ನು ಪರಿಗಣಿಸಿ ಕಲಬುರ್ಗಿ ವಿಶ್ವವಿದ್ಯಾನಿಲಯವುಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಹಾಗೂ ಇವರ ಅನನ್ಯ ಸೇವೆಯನ್ನುಪರಿಗಣಿಸಿ ಶ್ರೀ ರಂಭಾಪುರಿ ಪೀಠದ ‘ಶಿವಾಚಾರ್ಯ ರತ್ನ’ ಪ್ರಶಸ್ತಿ, ಶ್ರೀ ಕಾಶಿಪೀಠದ’ಧರ್ಮರತ್ನ’ ಪ್ರಶಸ್ತಿಗಳನ್ನು ನೀಡಿ ಪಂಚಪೀಠಾಧ್ಯಕ್ಷರು ಇವರನ್ನು ಆಶೀರ್ವದಿಸಿದ್ದುಸ್ಮರಣೀಯವಾಗಿದೆ. ಹೀಗೆ ಎಡೆಬಿಡದ ಶ್ರೀಗಳ ಕಾರ್ಯಶೀಲತೆ, ಆಧ್ಯಾತ್ಮ ಪ್ರಭೆ, ಭಕ್ತರಸದ್ಭಕ್ತಿ, ವಿದ್ವಾಂಸರ ಸಹಕಾರ, ಕಾರ್ಯಕರ್ತರ ನಿಷ್ಠೆ ಎಲ್ಲವೂ ಶ್ರೀಮಠದ ಆಸ್ತಿಯಾಗಿವೆ.
ವಿಶೇಷತೆ:
‘ಶ್ರೀ ಚನ್ನ ರೇಣುಕ ಬಸವ ಪ್ರಶಸ್ತಿ’
ಪ್ರತಿವರ್ಷ ವಿಜಯದಶಮಿ ಸಮಯದಲ್ಲಿ
ನಡೆಯುವ ಶ್ರೀ ಗುರುಲಿಂಗ ಶಿವಾಚಾರ್ಯರ ಪುಣ್ಯಸ್ಮರಣೋತ್ಸವದಲ್ಲಿ ಪ್ರದಾನ.
(25,000 ನಗದು ಹಾಗೂ 10 ಗ್ರಾಂ ಚಿನ್ನದ ಪದಕ)
‘ ಚನ್ನಶ್ರೀ ಪ್ರಶಸ್ತಿ’
ಶ್ರೀಮಠದ ಶಾಖಾ ಮಠವಾದ ಕಲಬುರ್ಗಿ ಜಿಲ್ಲೆ, ಚಿಂಚೋಳಿ ಮಠದಿಂದ
ಪ್ರತಿವರ್ಷ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಶ್ರೀಮಠದ
ಶ್ರೀಗಳಿಂದ ಪ್ರದಾನ.
(5 ಗ್ರಾಂ ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕ)
Swamiji
Swamiji Name :
ಶ್ರೀ ಷ.ಬ್ರ. ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-7-1963
Place :
ಹಾರಕೂಡ, ಬಸವಕಲ್ಯಾಣ ತಾ||
Pattadikara :
25-4-1996
Photo :
Programs
ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ, ಶಿವಾನುಭವ ಗೋಷ್ಠಿ.
ಎಳ್ಳು ಅಮವಾಸ್ಯೆ ಆದ 5ನೇ ದಿನಕ್ಕೆ ಶ್ರೀಮಠದ ಜಾತ್ರೆ (3 ದಿನಗಳ ಕಾಲ)
ಉಚಿತ ಆರೋಗ್ಯ ತಪಾಸಣೆ ಶಿಬಿರ, ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ,
ಕುಸ್ತಿ ಪಂದ್ಯಾಟ, ಪಂಡಿತರಿಂದ ಉಪನ್ಯಾಸ, ಸಂಗೀತ ಸಭೆ.
ಶಿವರಾತ್ರಿಗೆ ಶ್ರೀ ಚೆನ್ನಬಸವ ಶಿವಯೋಗಿಗಳ ಜಯಂತಿ ಮಹೋತ್ಸವ,
ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಶ್ರಾವಣದ ಎರಡನೇ ಸೋಮವಾರ ಚೆನ್ನಬಸವ ಶ್ರೀಗಳ ಪಲ್ಲಕ್ಕಿ ಉತ್ಸವ.
ಮಹಾನವಮಿಗೆ (ವಿಜಯದಶಮಿ) ಶ್ರೀ ಗುರುಲಿಂಗ ಶಿವಾಚಾರ್ಯರ ಪುಣ್ಯಾರಾಧನೆ,
ಸಾಹಿತ್ಯಿಕ ಕಾರ್ಯಕ್ರಮಗಳು, ಶ್ರೇಷ್ಠ ಗ್ರಂಥಗಳ ಪ್ರಕಾಶನ.
Institutions
ಶ್ರೀ ಹಾರಕೂಡ ಚೆನ್ನಬಸವೇಶ್ವರ ಶಿಕ್ಷಣ ಪ್ರತಿಷ್ಠಾನ - 1999.
ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಪ್ರಾಥಮಿಕ ಹಾಗೂ ಪ್ರೌಢಶಾಲೆ.
ಶ್ರೀ ಹಾರಕೂಡ ಚೆನ್ನಬಸವೇಶ್ವರ ಶಿಶುವಿಹಾರ, ಪ್ರಾಥಮಿಕ ಹಾಗೂ ಪ್ರೌಢಶಾಲೆ - ಚಿಂಚೊಳಿ.
ಶ್ರೀ ಚೆನ್ನಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆ - ಭಾಲ್ಕಿ.
ಉಚಿತ ಪ್ರಸಾದ ಮತ್ತು ವಸತಿ ನಿಲಯ / ವಿದ್ಯಾರ್ಥಿ ನಿಲಯ.
Photos
Full Address Kannada
ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ
ಹಾರಕೂಡ - 585 437
ಬಸವಕಲ್ಯಾಣ ತಾ||, ಬೀದರ್ ಜಿ||