Shree Channabasava Swamigala Virakta Matha – Madapattana

Shree Channabasava Swamigala Virakta Matha – Madapattana Claimed

ಶ್ರೀ ಚನ್ನಬಸವ ಸ್ವಾಮಿಗಳ ವಿರಕ್ತಮಠ - ಮಾದಾಪಟ್ಟಣ

Average Reviews

Description

ಶ್ರೀ ಚನ್ನಬಸವ ಸ್ವಾಮಿಗಳ ವಿರಕ್ತಮಠ – ಮಾದಾಪಟ್ಟಣ

ಕರ್ತೃ – ಶ್ರೀ ನಿ.ಪ್ರ.ಸ್ವ. ಚನ್ನಬಸವ ಮಹಾಸ್ವಾಮಿಗಳು

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಮಾದಾಪಟ್ಟಣ ಗ್ರಾಮವುತಾಲ್ಲೂಕು ಕೇಂದ್ರದಿಂದ 25 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀಚನ್ನಬಸವ ಸ್ವಾಮಿಗಳ ವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಚಟುವಟಿಕೆಗಳ ಮುಖೇನ ಪ್ರಸಿದ್ದಿ ಪಡೆದಿದೆ. ಶ್ರೀಮಠದ ಕರ್ತೃ ಗುರುಗಳಾದ ಶ್ರೀನಿ.ಪ್ರ.ಸ್ವ. ಚನ್ನಬಸವ ಮಹಾಸ್ವಾಮಿಗಳು 1918ರಲ್ಲಿ ಶ್ರೀಮಠವನ್ನು ಸ್ಥಾಪಿಸಿದರು.ಕರ್ತೃ ಗುರುಗಳು ಇದೇ ಮಾದಾಪಟ್ಟಣ ಗ್ರಾಮದವರಾಗಿದ್ದು ಆಗಿನ ಕಾಲದಲ್ಲೇಎಸ್.ಎಸ್.ಎಲ್.ಸಿ. ಮುಗಿಸಿ, ಸಂಸ್ಕøತ ಕಲಿತವರಾಗಿದ್ದರು. ಅನುಷ್ಠಾನ ಪ್ರಿಯರೂ,ಮಹಾದಾಸೋಹಿಗಳೂ ಹಾಗೂ ವಾಕ್‍ಸಿದ್ದಿಪುರುಷರಾಗಿದ್ದ ಶ್ರೀಗಳು ಶ್ರೀಮಠ ಹಾಗೂಸುತ್ತಲಿನ ಪರಿಸರದ ಸ್ವಚ್ಚತೆಗೆ ಹೆಚ್ಚು ಗಮನ ನೀಡುತ್ತಿದ್ದರು. ಕ್ರಿಯಾಶೀಲ ವ್ಯಕ್ತಿತ್ತ್ವ ಹೊಂದಿದ್ದಶ್ರೀಗಳು ಮಠದ ಸರ್ವಾಂಗೀಣ ಅಭಿವೃದ್ದಿಯ ಹರಿಕಾರರಾಗಿ ಮಠಕ್ಕೆ ಕಟ್ಟಡ ನಿರ್ಮಿಸಿದ್ದು1972ರ ಫೆಬ್ರವರಿ 04ರಲ್ಲಿ ಈಗಿನ ಹಿರಿಯ ಗುರುಗಳಾದ ಶ್ರೀ ನಿ.ಪ್ರ.ಸ್ವ. ಸದಾಶಿವಮಹಾಸ್ವಾಮಿಗಳನ್ನು ಪಟ್ಟಕ್ಕೆ ತಂದು ಲಿಂಗೈಕ್ಯರಾದರು.ಈಗಿನ ಹಿರಿಯ ಶ್ರೀಗಳಾದ ಶ್ರೀ ಸದಾಶಿವ ಮಹಾಸ್ವಾಮಿಗಳು ಗುರುಗಳಂತೆಯೇಕ್ರಿಯಾಶೀಲರು. ಸ್ನಾತಕೋತ್ತರ ಪದವೀದರರಾದ ಶ್ರೀಗಳು ಮಠವನ್ನು ವೈಚಾರಿಕನೆಲೆಗಟ್ಟಿನಲ್ಲಿ ಮುನ್ನಡೆಸುತ್ತಿದ್ದಾರೆ. ಕಳೆದ ನಾಲ್ಕೂವರೆ ದಶಕಗಳಲ್ಲಿ ಶ್ರೀಮಠದಜೀರ್ಣಾಭಿವೃದ್ದಿ ಜೊತೆಗೆ ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಮಠಕ್ಕೆ 25ಎಕರೆ ಜಮೀನನ್ನು ರೂಢಿಸಿಕೊಂಡು ಆರ್ಥಿಕ ಬೆಳೆಗಳನ್ನು ಬೆಳೆಯುತ್ತಾ ಶ್ರೀಮಠವನ್ನುಆರ್ಥಿಕವಾಗಿ ಶ್ರೀಮಂತಗೊಳಿಸಿದ್ದಾರೆ.1994ರಲ್ಲಿ ಹಿರಿಯ ಶ್ರೀಗಳು ಏಕಾಂತಕ್ಕಾಗಿ ‘ಚನ್ನಬಸವಾಶ್ರಮ’ವನ್ನು ಸ್ಥಾಪನೆಮಾಡಿದ್ದು, ಆಶ್ರಮವು ಗ್ರಾಮದಿಂದ 01 ಕಿ.ಮೀ. ದೂರದಲ್ಲಿರುವ ಮಠದ ತೋಟದಲ್ಲಿದೆ.ಹಿರಿಯ ಶ್ರೀಗಳು 2010ರ ಫೆಬ್ರವರಿ 24ರಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ಶ್ರೀ ಮ.ನಿ.ಪ್ರ.ತೋಂಟದಾರ್ಯ ಸ್ವಾಮಿಗಳನ್ನು ಪಟ್ಟಕ್ಕೆ ತಂದಿದ್ದು ಕಿರಿಯ ಶ್ರೀಗಳು ಹಿರಿಯ ಗುರುಗಳಕಾರ್ಯಗಳಿಗೆ ಸಹಾಯಕರಾಗಿ ಶ್ರೀಮಠದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.

Swamiji

Swamiji Name :
ಶ್ರೀ ನಿ.ಪ್ರ.ಸ್ವ. ಸದಾಶಿವ ಮಹಾಸ್ವಾಮಿಗಳು
Date of Birth :
08-04-1944
Place :
ಮಾದಾಪಟ್ಟಣ, ಗುಂಡ್ಲುಪೇಟೆ ತಾ||
Pattadikara :
04-02-1972
Photo :
Swamiji Name :
ಶ್ರೀ ಮ.ನಿ.ಪ್ರ. ತೋಂಟದಾರ್ಯ ಸ್ವಾಮಿಗಳು
Date of Birth :
03-05-1963
Place :
ಕುಲಗಾಣ, ಚಾಮರಾಜನಗರ ತಾ||
Pattadikara :
24-02-2010
Photo :

Programs

ಪ್ರತಿ ಅಮವಾಸ್ಯೆಗೆ ಅಭಿಷೇಕ, ಭಜನೆ,
ಸಂಗೀತ, ಮಹಾಪ್ರಸಾದ
ಶಿವರಾತ್ರಿಗೆ ಜಾಗರಣೆ, ವಿಶೇಷ ಕಾರ್ಯಕ್ರಮಗಳು
ಯುಗಾದಿಯಲ್ಲಿ ವಿಶೇಷ ಕಾರ್ಯಕ್ರಮಗಳು
ಬಸವ ಜಯಂತಿಗೆ ವಿಶೇಷ ಕಾರ್ಯಕ್ರಮಗಳು
ಪ್ರತಿ ವರ್ಷದ ಫೆಬ್ರವರಿಯಲ್ಲಿ ಕರ್ತೃಗಳ ಪುಣ್ಯಸ್ಮರಣೋತ್ಸವ

Photos

Full Address Kannada

ಶ್ರೀ ಚನ್ನಬಸವ ಸ್ವಾಮಿಗಳ ವಿರಕ್ತ ಮಠ
ಮಾದಾಪಟ್ಟಣ, ಸೋಮನಹಳ್ಳಿ ಪೋ - 571 109
ಗುಂಡ್ಲುಪೇಟೆ ತಾ||, ಚಾಮರಾಜನಗರ ಜಿಲ್ಲೆ

Map

Near by Places

ಗೇಟ್ - 4 ಕಿ.ಮೀ.
ಬೇಗೂರು - 7 ಕಿ.ಮೀ.
ಗುಂಡ್ಲುಪೇಟೆ - 25 ಕಿ.ಮೀ.
ನಂಜನಗೂಡು - 55 ಕಿ.ಮೀ.

Statistic

11 Views
0 Rating
0 Favorite
0 Share
error: Content is protected !!