ಶಿಗ್ಗಾಂವ ಪಟ್ಟಣದಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ಗಂಜಿಗಟ್ಟಿಗ್ರಾಮದಲ್ಲಿ ಶ್ರೀ ಶಂಭುಲಿಂಗ ಶಿವಯೋಗಿಗಳವರಿಂದ 19ನೇ ಶತಮಾನದ ಅಂತ್ಯಭಾಗದಲ್ಲಿಸ್ಥಾಪಿತಗೊಂಡಿರುವ ಶ್ರೀ ಚರಮೂರ್ತೀಶ್ವರ ಮಠವು ಈ ಭಾಗದ ಜನರ ಧಾರ್ಮಿಕಆಚರಣೆಗಳ ಕೇಂದ್ರಬಿಂದುವಾಗಿ ಬೆಳೆದು ಬಂದಿದೆ.ಶ್ರೀ ಶಂಭುಲಿಂಗ ಶಿವಯೋಗಿಗಳು ಮೈಸೂರಿನ ಕಡೆಯಿಂದ ಲೋಕಸಂಚಾರಮಾಡುತ್ತಾ ಬಂದವರಾಗಿದ್ದು ತಾವು ಅನುಷ್ಠನಗೊಂಡ ಸ್ಥಳಗಳನ್ನೆಲ್ಲಾ ಜಾಗೃತ ಸ್ಥಳಗಳನ್ನಾಗಿಸಿ ಗಂಜಿಗಟ್ಟಿಗೆ ಬಂದು ಇಲ್ಲಿ ಅನುಷ್ಠಾನ ಕೈಗೊಂಡಿದ್ದಾರೆ. ಶ್ರೀಗಳು ದೀರ್ಘಕಾಲಗಂಜಿಗಟ್ಟಿಯಲ್ಲಿ ಅನುಷ್ಠಾನದಲ್ಲಿದ್ದಾಗ ಇವರ ಧಾರ್ಮಿಕ ಪ್ರಭೆಗೆ ಮನಸೋತ ಭಕ್ತರುಶ್ರೀಗಳಿಗೆ ಒತ್ತಾಯಪೂರ್ವಕವಾಗಿ ಗಂಜಿಗಟ್ಟಿಯಲ್ಲಿಯೇ ಮಠವನ್ನು ಕಟ್ಟಿಸಿಕೊಟ್ಟಿದ್ದಾರೆ.ಶ್ರೀಗಳು ಭಕ್ತರ ಭಕ್ತಿಗೆ ಕಟ್ಟುಬಿದ್ದು ಇಲ್ಲಿಯೇ ನೆಲೆಸಿ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ನಿತ್ಯ ಧಾರ್ಮಿಕ ಆಚರಣೆಗಳು ಹಾಗೂ ಶಿವನಾನುಭವಗೋಷ್ಠಿಗಳಮೂಲಕ ವೀರಶೈವ ಧರ್ಮಾಚರಣೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಿಅಧಿಕ ಸಂಖ್ಯೆ ಭಕ್ತರನ್ನು ಮಠಕ್ಕೆ ಸೆಳೆದು ಭಕ್ತರಲ್ಲಿ ಧರ್ಮಜಾಗೃತಿಯನ್ನುಂಟುಮಾಡಿದ್ದಾರೆ.ನಂತರದಲ್ಲಿ ಶ್ರೀ ಸದಾಶಿವ ಸ್ವಾಮಿಗಳು ಶ್ರೀಮಠದ ಆಡಳಿತವನ್ನು ನಡೆಸಿದ್ದುಶ್ರೀಮಠವನ್ನು ಮುನ್ನಡೆಸಿದ್ದಾರೆ. ನಂತರ ಹಿಂದಿನ ಶ್ರೀಗಳಾದ ಶ್ರೀ ಚರಮೂರ್ತೀಶ್ವರಸ್ವಾಮಿಗಳು ಅಧಿಕಾರಕ್ಕೆ ಬಂದು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಶ್ರೀಗಳುಶಿವಪೂಜಾನಿಷ್ಠರಾಗಿದ್ದು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕಭಕ್ತಮಾನಸದಲ್ಲಿ ಬೇರೂರಿದ್ದಾರೆ.ಈಗಿನ ಶ್ರೀಗಳಾÀದ ಶ್ರೀ ಶಿವಲಿಂಗೇಶ್ವರ ಶಿವಾಚಾರ್ಯರು 1987ರಲ್ಲಿ ಶ್ರೀಮಠದಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿದ್ದಾರೆ.ಹಾಗೆಯೇ ಹಿಂದಿನ ಮೂರೂ ಶ್ರೀಗಳ ಗದ್ದುಗೆಗಳನ್ನು ಜೀರ್ಣೋದ್ಧಾರಗೊಳಿಸಿನಿತ್ಯಪೂಜೆಯನ್ನು ಮಾಡುತ್ತಿದ್ದಾರೆ. ಶ್ರೀಗಳು ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸಪೂರ್ಣಗೊಳಿಸಿದವರಾಗಿದ್ದು ಸ್ವತಃ ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ಗ್ರಾಮೀಣಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಾಗುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
23-10-1958
Place :
ಮುಧೋಳ, ಔರಾದ್ ತಾ||
Pattadikara :
1989.
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ, ರುದ್ರಾಭಿಷೇಕ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ. ಕಾರ್ತೀಕದಲ್ಲಿ ಕಾರ್ತಿಕೋತ್ಸವ.
ಶಿವರಾತ್ರಿಯಂದು ರಥೋತ್ಸವ.
ಮಹಾನವಮಿ ಶ್ರೀದೇವಿ ಪುರಾಣ.
Institutions
ಗ್ರಾಮಿಣ ವಿದ್ಯಾಪೀಠ - 1989. ಪ್ರೌಢ ಶಾಲೆಗಳು.
Photos
Full Address Kannada
ಶ್ರೀ ಚರಮೂರ್ತೀಶ್ವರ ಮಠ
ಗಂಜಿಗಟ್ಟಿ, ಶಿಗ್ಗಾಂವ ಪೋಸ್ಟ್ - 581 205
ಶಿಗ್ಗಾಂವ ತಾ||, ಹಾವೇರಿ ಜಿ||