Shree Budishwara Samsthana Matha

Shree Budishwara Samsthana Matha Claimed

ಶ್ರೀ ಬೂದೀಶ್ವರ ಸಂಸ್ಥಾನ ಮಠ

Average Reviews

Description

ಶ್ರೀ ಬೂದೀಶ್ವರ ಸಂಸ್ಥಾನ ಮಠ

ಕರ್ತೃ – ಶ್ರೀ ಮ.ನಿ.ಪ್ರ. ಬೂದೀಶ್ವರ ಶಿವಯೋಗಿಗಳು

ಗದಗ ಜಿಲ್ಲೆಯ ಹೊಸಹಳ್ಳಿ ಗ್ರಾಮವು ಜಿಲ್ಲಾ ಕೆಂದ್ರದಿಂದ 12 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಶ್ರೀ ಮ.ನಿ.ಪ್ರ. ಬೂದೀಶ್ವರಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಬೂದೀಶ್ವರ ಸಂಸ್ಥಾನ ಮಠವು ಈ ಭಾಗದಲ್ಲಿಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದ್ದು ಭಕ್ತರಿಗೆ ಸೂಕ್ತ ಮಾರ್ಗದರ್ಶನನೀಡುತ್ತಾ ಮುಂದುವರೆಯುತ್ತಿದೆ.ಶ್ರೀ ಬೂದೀಶ್ವರ ಲೀಲೆ ಎಂಬ ಪುಸ್ತಕದಲ್ಲಿ ನಮೂದಿಸಿರುವಂತೆ ಶ್ರೀ ಬೂದೀಶ್ವರಶಿವಯೋಗಿಗಳು ತಮ್ಮ ಶಿವಯೋಗ ಸಾಧನೆಯಿಂದ 775 ವರ್ಷಗಳ ಕಾಲ ಜೀವಿಸಿದ್ದುಆಯಾ ಕಾಲದಲ್ಲಿ ಭಕ್ತರನ್ನು ಉದ್ದರಿಸುತ್ತಾ ಸಂಚಾರಿಗಳಾಗಿ ವೀರಶೈವ ಧರ್ಮದ ಪ್ರಚಾರಕ್ಕೆಕಾರಣರಾಗಿದ್ದಾರೆ ಎಂದು ಹೇಳಲಾಗುತ್ತದೆ. ಶ್ರೀಗಳು 12ನೇ ಶತಮಾನದ ಕಲ್ಯಾಣ ಕ್ರಾಂತಿಯನಂತರ ಚನ್ನಬಸವಣ್ಣನವರಿಂದ ಭಸ್ಮದ (ಬೂದಿ) ಹಸಬೆಯನ್ನು ಪಡೆದು ಅದರಮಹಿಮೆಯನ್ನು ಧರೆಯ ಜನರಿಗೆ ತಿಳಿಸುತ್ತಾ ಬಸವತತ್ವಗಳನ್ನು ಭೋದಿಸುತ್ತಾ ಹೋದಸ್ಥಳಗಳಲ್ಲಿ ಬೂದಿ ಬಸವ, ಪ್ರಭು ಗದ್ದುಗೆ. ಬೂದೀಶ್ವರ ತಪೋಕ್ಷೇತ್ರಗಳನ್ನು ಸ್ಥಾಪಿಸಿದರುಎಂದು ಹೇಳಲಾಗಿದೆ. ಈ ರೀತಿಯಾಗಿ ಶ್ರೀಗಳು ಸಿದ್ದಿ ಪುರುಷರು ನೆಲೆಸಿ ತಪಸನ್ನಾಚರಿಸಿದಸಿದ್ದರಮಟ್ಟಿಗೆ ಆಗಮಿಸಿ 1789ರಲ್ಲಿ ಮಠ ಮತ್ತು ಪ್ರಭುಗದ್ದುಗೆಯನ್ನು ಸ್ಥಾಪಿಸಿದರು.ಕರ್ತೃ ಶ್ರೀಗಳ ನಂತರ ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳುಅಧಿಕಾರವನ್ನು ಪಡೆದು ಶ್ರೀ ಬೂದೀಶ್ವರ ಗದ್ದುಗೆ ಸ್ಥಾಪಿಸಿ ಮಂಟಪವನ್ನು ನಿರ್ಮಿಸಿದ್ದುಬೂದೀಶ್ವರ ತತ್ವಗಳನ್ನು ನಾಡಿಗೆ ಬಿತ್ತಿದರು. ಇವರ ನಂತರ ಬಂದ ಎಲ್ಲಾ ಶ್ರೀಗಳು ಶ್ರೀಮಠದಅಭಿವೃದ್ದಿಗೆ ಶ್ರಮಿಸಿದ್ದಾರೆ. ಹಿಂದಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳುಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವು ಸರ್ವತೋಮುಖ ಅಭಿವೃದ್ದಿ ಕಂಡಿದೆ.ಶ್ರೀಗಳಿಂದ ‘ಗಣಭಾಷ್ಯರತ್ನಮಾಲೆ’, ಅಖಂಡೇಶ್ವರ ವಚನ, ಬೂದೀಶ್ವರ ಲೀಲೆ ಮುಂತಾದಗ್ರಂಥಗಳು ಸಂಪಾದಿತವಾಗಿ ಪ್ರಕಟವಾಗಿರುತ್ತವೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಬೂದೀಶ್ವರ ಮಹಾಸ್ವಾಮಿಗಳು 2001ರ ಮೇ21ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಮುನ್ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಗಳು ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕøತ ಸ್ನಾತಕೋತ್ತರಪದವೀದರರಾಗಿದ್ದು ಭಕ್ತರಿಗೆ ಸನ್ಮಾರ್ಗ ತೋರುತ್ತಾ ಮುಂದುವರೆದಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಬೂದೀಶ್ವರ ಮಹಾಸ್ವಾಮಿಗಳು
Date of Birth :
10-07-1978
Place :
ಬನ್ನೂರು, ರಾಮದುರ್ಗ ತಾ||
Pattadikara :
21-05-2001
Photo :

Programs

ಪ್ರತಿ ಅಮವಾಸೆ “ಶಿವಾನುಭವ ಗೋಷ್ಠಿ”
ವೈಶಾಖ ಮಾಸದಲ್ಲಿ ಶ್ರೀ ಬೂದೀಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ3 ದಿನ ಸಾಮೂಹಿಕ ವಿವಾಹ, ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ / ಕಾರ್ತಿಕ ಮಾಸದಲ್ಲಿ ದೀಪೋತ್ಸವ
ಮಾರ್ಗಶಿರ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧ£

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
ಕಾಲೇಜ್ / ವಿದ್ಯಾರ್ಥಿ ನಿಲಯ
ಗೋಶಾಲೆ

Photos

Full Address Kannada

ಶ್ರೀ ಬೂದೀಶ್ವರ ಸಂಸ್ಥಾನ ಮಠ
ಹೊಸಹಳ್ಳಿ - 582 205
ಗದಗ ತಾ|| ಮತ್ತು ಜಿಲ್ಲೆ

Map

Near by Places

ಶ್ರೀ ಬೂದೀಶ್ವರ ಸಂಸ್ಥಾನ ಮಠ
ಹೊಸಹಳ್ಳಿ - 582 205
ಗದಗ ತಾ|| ಮತ್ತು ಜಿಲ್ಲೆ

Statistic

14 Views
0 Rating
0 Favorite
0 Share
error: Content is protected !!