ಹರಪನಹಳ್ಳಿಯಿಂದ ಸುಮಾರು 11 ಕಿ.ಮೀ. ದೂರದಲ್ಲಿರುವ ನಿಚ್ಚವ್ವನಹಳ್ಳಿಯಲ್ಲಿಸ್ಥಾಪಿತಗೊಂಡಿರುವ ಶ್ರೀ ಬೃಹನ್ಮಠವು ಹಾಲಸ್ವಾಮಿ ಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀಮಠದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ. ಈಗಿನ ಶ್ರೀಗಳು6ನೆಯವರೆಂದು ಹೇಳಲಾಗಿದ್ದು ಮಠದ ಪರಂಪರೆಯನ್ನು ಬೆಳೆಸುತ್ತಿದ್ದಾರೆ.ಹರಪನಹಳ್ಳಿ ತಾಲ್ಲೂಕು ನಿಚ್ಚವ್ವನಹಳ್ಳಿಯಲ್ಲಿ 1976ರಲ್ಲಿ ಜನಿಸಿದ ಶ್ರೀ ಸದ್ಗುರುಹಾಲಸ್ವಾಮೀಜಿಯವರು ಸದ್ಯದ ಪೀಠಾಧಿಪತಿಗಳಾಗಿದ್ದಾರೆ. ಶ್ರೀಗಳು 1992ರಲ್ಲಿ ಬೃಹನ್ಮಠಕ್ಕೆಪೀಠಾಧಿಪತಿಗಳಾಗಿ ಪಟ್ಟಕ್ಕೇರಿದ್ದಾರೆ.ಶ್ರೀ ಶಿವಯೋಗಿ ಹಾಲಸ್ವಾಮಿಗಳು ಪಟ್ಟಕ್ಕೆ ಬಂದ ದಿನದಿಂದಲೂ ಮಠದ ಹಾಗೂಸಮಾಜದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಹಾಗೂ ಮಠಕ್ಕೆ ನೂತನ ಕಟ್ಟಡದೊಂದಿಗೆ ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸಿದ್ದಾರೆ. ಹಾಗೂ ಪ್ರತಿ ಹುಣ್ಣಿಮೆಗೆಶ್ರೀಗಳು ಪ್ರವಚನ ಹಾಗೂ ಭಜನಾ ಕಾರ್ಯಕ್ರಮಗಳನ್ನು ಮತ್ತು ಪ್ರತಿ ಅಮವಾಸ್ಯೆಗೆ ಕತೃಗದ್ದುಗೆಗೆ ರುದ್ರಾಭಿಷೇಕ ನಡೆಸಿಕೊಡುತ್ತಿದ್ದಾರೆ.ಶ್ರೀಗಳು ಸಮಾಜಮುಖಿಯಾಗಿದ್ದು ಹಾಗೆಯೇ ಮಠದ ಪರಂಪರೆಯಾದಹಾಲಸ್ವಾಮಿ ಪದ್ಧತಿಯಲ್ಲಿ ಬರುವ ಮುಳ್ಳುಗದ್ದುಗೆ ಉತ್ಸವವನ್ನು ಹೋಳಿ ಹುಣ್ಣಿಮೆ ಆದ8ನೇ ದಿನಕ್ಕೆ ನಡೆಸಿಕೊಡುತ್ತಿದ್ದಾರೆ ಮತ್ತು ಆ ದಿನ ವಿವಾಹ ಕಾರ್ಯಕ್ರಮಗಳನ್ನು, ವಿವಿಧಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಶ್ರೀ ಮಠದಲ್ಲಿ ಹಮ್ಮಿಕೊಂಡುಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು
Date of Birth :
1-6-1976
Place :
ನಿಚ್ಚವ್ವನಹಳ್ಳಿ, ಹರಪನಹಳ್ಳಿ ತಾ.
Pattadikara :
1992
Programs
ಪ್ರತೀ ಅಮಾವಾಸ್ಯೆಗೆ ರುದ್ರಾಭಿಷೇಕ ಪ್ರತೀ ಹುಣ್ಣಿಮೆಗೆ ಶ್ರೀಗಳ ಪ್ರವಚನ ಹಾಗೂ ಭಜನೆ ಹೋಳಿ ಹುಣ್ಣಿಮೆಯಾದ ಎಂಟನೇ ದಿನಕ್ಕೆ ಮುಳ್ಳುಗದ್ದುಗೆ ಉತ್ಸವ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಶುಭ ವಿವಾಹಗಳು
Full Address Kannada
ಶ್ರೀ ಬೃಹನ್ಮಠ
ನಿಚ್ಚವ್ವನಹಳ್ಳಿ - 583 125
ಹರಪನಹಳ್ಳಿ ತಾ., ದಾವಣಗೆರೆ ಜಿ.