ರಾಯಚೂರು ಜಿˉÉ್ಲ ಮಾನ್ವಿ ತಾಲ್ಲೂಕಿನ ನವಿಲಕಲ್ಲು ಗ್ರಾಮವು ತಾಲ್ಲೂಕುಕೇಂದ್ರದಿಂದ 30 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಬೃಹನ್ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಗ್ರಾಮದಲ್ಲಿಧಾರ್ಮಿಕ ವಾತಾವರಣ ನೆˉÉಗೊಳ್ಳಲು ಕಾರಣವಾಗಿದೆ. ಶ್ರೀಮಠವು ಶ್ರೀ ರಂಭಾಪುರಿಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಷ.ಬ್ರ. ಮಹಾಂತ ಶಿವಾಚಾರ್ಯ ಸ್ವಾಮಿಗಳು ಹಾಗೂ ಶ್ರೀ ಷ.ಬ್ರ.ಗುರುಬಸವ ಶಿವಾಚಾರ್ಯ ಸ್ವಾಮಿಗಳನ್ನು ಶ್ರೀಮಠದ ಸ್ಥಾಪಕರೆಂದು ಗುರುತಿಸˉÁದರೂಇವರುಗಳ ಕಾಲಮಾನದ ಬಗ್ಗೆ ಯಾವುದೇ ಮಾಹಿತಿ ದೊರಕುವುದಿಲ್ಲ. ಉಭಯಶ್ರೀಗಳೂ ಮಹಾಮಹಿಮರಾಗಿದ್ದು ಈ ಭಾಗದಲ್ಲಿ ನಶಿಸುತ್ತಿರುವ ಧರ್ಮದ ಆಚರಣೆಗಳನ್ನು,ಧಾರ್ಮಿಕ ಸಂಸ್ಕಾರವನ್ನು ಪುನರ್ ಪ್ರತಿಷ್ಠಾಪಿಸಲು ಪಣ ತೊಟ್ಟು ಶ್ರೀಮಠವನ್ನು ಸ್ಥಾಪಿಸಿದರೆಂದು ತಿಳಿದುಬರುತ್ತದೆ.ಶ್ರೀ ಮಠದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲವಾದರೂ ಪರಂಪರೆಯಲ್ಲಿ ಶ್ರೀಷ.ಬ್ರ. ಗುರುಶಾಂತ ಶಿವಾಚಾರ್ಯ ಸ್ವಾಮಿಗಳು ಹಾಗೂ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ.ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ಅಧಿಕಾರ ನಡೆಸಿರುವುದು ತಿಳಿದುಬರುತ್ತದೆ.ಆದರೆ ಹಿಂದಿನ ಶ್ರೀಗಳು ಲಿಂಗೈಕ್ಯರಾದ ನಂತರ ಶ್ರೀಮಠವು ಬಹುಕಾಲ ಖಾಲಿ ಉಳಿದಿದ್ದುಈ ಕಾರಣದಿಂದಾಗಿ ಮಠದ ಪರಂಪರೆಯ ಬಗ್ಗೆ ಮಾಹಿತಿಗಳು ದೊರೆಯದಾಗಿದೆ.ಹೀಗೆ ನಶಿಸುತ್ತಿದ್ದ ಮಠದ ಪರಂಪರೆ ಉಳಿಯಬೇಕೆಂದು ಮಠದ ವಂಶಸ್ಥರಾದಶ್ರೀ ಗಂಗಾಧರಪ್ಪ ಎಂಬುವವರು ತಮ್ಮ ಮಗನನ್ನೇ ಶ್ರೀಮಠದ ಉತ್ತರಾಧಿಕಾರಿಯನ್ನಾಗಿನೇಮಿಸಲು ಒಪ್ಪಿದರು. ಅವರೇ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಅಭಿನವ ಸೋಮನಾಥಶಿವಾಚಾರ್ಯ ಸ್ವಾಮಿಗಳು. ಶ್ರೀಗಳು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಶ್ರೀಮಠಕ್ಕೆ ಮರಳಿ2011ರ ಫೆಬ್ರವರಿ 16ರಲ್ಲಿ ಪಟ್ಟಾಧಿಕಾರವನ್ನು ವಹಿಸಿಕೊಂಡಿದ್ದಾರೆ. ಅಲ್ಲಿಯವರೆಗೂ ಶ್ರೀಗಳತಂದೆಯವರೇ ಶ್ರೀಮಠದ ಆಡಳಿತವನ್ನು ಹಾಗೂ ಧಾರ್ಮಿಕ ಕಾರ್ಯಗಳನ್ನುನಡೆಸಿಕೊಂಡು ಬಂದಿದ್ದಾರೆ. ಶ್ರೀಗಳು ಅಧಿಕಾರ ವಹಿಸಿಕೊಂಡು ನಂತರ ಭಕ್ತರಸಹಕಾರದೊಂದಿಗೆ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮಿಗಳು
Date of Birth :
26-6-1991
Place :
ನವಿಲಕಲ್ಲು, ಮಾನ್ವಿ ತಾ||
Pattadikara :
16-2-2011
Photo :
Programs
ಪುಷ್ಯ ಮಾಸದಲ್ಲಿ ಲಿಂ. ಶ್ರೀ ಷ.ಬ್ರ. ಗುರುಶಾಂತ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ. zಸ Àರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ ಶಿವರಾತ್ರಿ ನಂತರ 8ನೇ ದಿನಕ್ಕೆ ಲಿಂ. ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ.
Institutions
ವಿದ್ಯಾರ್ಥಿನಿಲಯ.
Photos
Full Address Kannada
ಶ್ರೀ ಬೃಹನ್ಮಠ ನವಿಲಕಲ್ಲು - 584 129 ಮಾನ್ವಿ ತಾ||, ರಾಯಚೂರು ಜಿ||