ನಾವದಗಿ ಗ್ರಾಮದಲ್ಲಿ ಶ್ರೀ ಷ.ಬ್ರ. ಜಾತ ಒಡೆಯ ಶಿವಾಚಾರ್ಯ ಸ್ವಾಮಿಗಳಿಂದಸುಮಾರು 12ನೇ ಶತಮಾನದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಬೃಹನ್ಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಆಚರಣೆಗಳಿಂದ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆˉÉಗೊಳಿಸಿದೆ.ಶ್ರೀಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾ ಮಠವಾಗಿದ್ದು ಪುತ್ರವರ್ಗದಪರಂಪರೆಯಲ್ಲಿ ಬೆಳೆದು ಬಂದಿದೆ.ಕರ್ತೃಗುರುಗಳು ˉÉೂೀಕ ಸಂಚಾರ ಮಾಡುತ್ತಾ ಬಂದವರಾಗಿದ್ದು ಅಲ್ಲಲ್ಲಿಅನುಷ್ಟಾನಗೊಂಡು ಮಠಗಳನ್ನು ಸ್ಥಾಪಿಸುತ್ತಾ ನಾವದಗಿಗೆ ಬಂದು ಶ್ರೀಮಠವನ್ನು ಸ್ಥಾಪಿಸಿವೀರಶೈವ ಧರ್ಮ ಹೆಚ್ಚು ಪ್ರಚಾರಗೊಳ್ಳುವಂತೆ ಮಾಡಿದರು. ನಂತರದಲ್ಲಿ ಬಂದ ಶ್ರೀ ಷ.ಬ್ರ.ಶಿವಜಾತ ಶಿವಾಚಾರ್ಯ ಸ್ವಾಮಿಗಳು ಪುರಾಣ ಪ್ರಸಿದ್ದ ವ್ಯಕ್ತಿಗಳಾಗಿ ಪ್ರಸಿದ್ದಿಗೆ ಬಂದವರು.ಶ್ರೀಗಳು ಮಹಾಜ್ಞಾನಿಗಳಾಗಿದ್ದು ತಮ್ಮ ತಪೋಬಲದಿಂದ ಭಕ್ತರನ್ನುದ್ಧರಿಸಿದವರು.ಶ್ರೀಮಠದ ಪರಂಪರೆಯಲ್ಲಿ ಇಲ್ಲಿಯವರೆಗೆ 32 ಜನ ಶ್ರೀಗಳು ಅಧಿಕಾರಕ್ಕೆಬಂದಿದ್ದು, 27ನೇ ಶ್ರೀಗಳಾದ ಶ್ರೀ.ಷ.ಬ್ರ. ಗುರುಲಿಂಗ ಶಿವಾಚಾರ್ಯರು 18ನೇಶತಮಾನದಲ್ಲಿ ಜೀವಿಸಿದ ಮಹಾಮಹಿಮ ಪುರುಷರು, ಶ್ರೀಮಠದ ಕರ್ತೃಗುರುಗಳಾದ ಶ್ರೀಜಾತ ಒಡೆಯ ಶಿವಾಚಾರ್ಯರೇ ಇವರಾಗಿ ಮಹಿಮೆ ತೋರಿದರೆಂದು ಪುರಾಣಗಳಲ್ಲಿಉˉÉ್ಲೀಖವಿದೆ. ಶ್ರೀಗಳು ವೀರಶೈವ ಧರ್ಮವನ್ನು ಪ್ರಚಾರ ಪಡಿಸಿ ಭಕ್ತರಿಗೆ ಸನ್ಮಾಗ ತೋರಿಉದ್ದರಿಸಿದ್ದಾರೆ.ಹಿಂದಿನ ಶ್ರೀಗಳಾದ (31ನೇ) ಶ್ರೀ ಷ.ಬ್ರ. ಪರ್ವತೇಶ್ವರ ಶಿವಾಚಾರ್ಯಸ್ವಾಮಿಗಳುಶತಾಯುಷಿಗಳಾಗಿ ಬಾಳಿದವರು. ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಭಕ್ತರನ್ನುಸಂಸ್ಕಾರವಂತರಾಗಿ ಬೆಳೆಸಿದರು. ತಮ್ಮ ಜೀವನದುದ್ದಕ್ಕೂ ಅˉËಕಿಕತೆಗೆ ಹೆಚ್ಚು ಗಮನನೀಡಿದ ಶ್ರೀಗಳು ಆಧ್ಯಾತ್ಮ ಸಿದ್ದಿಯನ್ನು ಪಡೆದು 2000ದ ಮೇ 4ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಪೂಜ್ಯ ಶ್ರೀ ರಾಜೇಂದ್ರ ಒಡೆಯರ್ ದೇವರು ಪುರಾತನಪರಂಪರೆಯ ಶ್ರೀಮಠವನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸಿ, ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದು, ಆರ್ಥಿಕವಾಗಿಯೂ ಸ್ವಾವಲಂಬನೆ ಸಾಧಿಸುವಹಾದಿಯಲ್ಲಿ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ರಾಜೇಂದ್ರ ಒಡೆಯರ್ ದೇವರು
Date of Birth :
6-3-1986
Place :
ನಾವದಗಿ, ಮುದ್ದೇಬಿಹಾಳ ತಾ||
Photo :
Programs
ಅಮವಾಸ್ಯೆಗೆ ವಿಶೇಷ ಪೂಜೆ ಹಾಗೂ ಶ್ರೀಗಳ ದರ್ಶನ.
ಚೈತ್ರ ಮಾಸದಲ್ಲಿ ಲಿಂ. ಶ್ರೀ ಷ.ಬ್ರ. ಪರ್ವತ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
Photos
Full Address Kannada
ಶ್ರೀ ಬೃಹನ್ಮಠ
ನಾವದಗಿ - 586 214
ಮುದ್ದೇಬಿಹಾಳ ತಾ||, ವಿಜಯಪುರ ಜಿ||