Shree Bommalingeshawara Matha – Revuru (B)

Shree Bommalingeshawara Matha – Revuru (B) Claimed

ಶ್ರೀ ಬೊಮ್ಮಲಿಂಗೇಶ್ವರ ಮಠ - ರೇವೂರು (ಬಿ)

Average Reviews

Description

ಶ್ರೀ ಬೊಮ್ಮಲಿಂಗೇಶ್ವರ ಮಠ – ರೇವೂರು (ಬಿ)

ಕರ್ತೃ – ಪೂಜ್ಯ ಶ್ರೀ ಬೊಮ್ಮಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಅಫಜಲಪುರ ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿರುವರೇವೂರು(ಬಿ) ಗ್ರಾಮದಲ್ಲಿ ಸ್ಥಾಪನೆಯಾಗಿ ಉಜ್ಜಯಿನಿ ಪೀಠದ ಶಾಖಾಮಠವಾಗಿ ಬೆಳೆದುಬಂದಿರುವ ಶ್ರೀ ಬೊಮ್ಮಲಿಂಗೇಶ್ವರ ಮಠವು ತನ್ನ ಆಚರಣೆಗಳ ಮೂಲಕ ಈ ಭಾಗದಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಕ್ಷೇತ್ರಗಳ ಅಭಿವೃದ್ಧಿಗೆ ಕಾರಣವಾಗಿದೆ.ಶ್ರೀಮಠದ ಕರ್ತೃ ಗುರುಗಳೆಂದು ಶ್ರೀ ಬೊಮ್ಮಲಿಂಗೇಶ ್ವರ ಶಿವಾಚಾರ್ಯಮಹಾಸ್ವಾಮಿಗಳನ್ನು ಗುರುತಿಸಲಾಗಿದ್ದು ಶ್ರೀಮಠವನ್ನು ಕರ್ತೃ ಗುರುಗಳ ಹೆಸರಿನಿಂದಲೆಕರೆಯಲಾಗುತ್ತಿದೆ.ಶ್ರೀಮಠವು ಪುರಾತನ ಕಾಲದ್ದೆಂದು ಹೇಳಲಾಗಿದ್ದು ಸ್ಪಷ್ಟತೆಯಿಲ್ಲ. ಪರಂಪರೆಯಲ್ಲಿಅನೇಕ ಗುರುಗಳು ಅಧಿಕಾರ ನಡೆಸಿದರೆಂದು ತಿಳಿದು ಬರುತ್ತಿದ್ದು ದಾಖಲೆಗಳಕೊರತೆಯಿಂದ ಹೆಸರಿಸಲು ಸಾಧ್ಯವಾಗುವುದಿಲ್ಲ. ಕಾಲಕ್ರಮೇಣ ಶ್ರೀಮಠವು ದೀರ್ಘಕಾಲಖಾಲಿ ಉಳಿದಂತೆ ತೋರುತ್ತಿದ್ದು ಶ್ರೀಮಠದ ಕಟ್ಟಡವು ಶಿಥಿಲಗೊಳ್ಳತೊಡಗಿತು.ಧೀರ್ಘಕಾಲದ ನಂತರ ಶ್ರೀಮಠದ ಪಟ್ಟಕ್ಕೆ ಬಂದವರು ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಶ್ರೀಕಂಠ ಶಿವಾಚಾರ್ಯ ಸ್ವಾಮಿಗಳು.ಶ್ರೀ ಷ.ಬ್ರ. ಶ್ರೀಕಂಠ ಶಿವಾಚಾರ್ಯ ಸ್ವಾಮಿಗಳು ಅಧಿಕಾರಕ್ಕೆ ಬಂದ ನಂತರಶ್ರೀಮಠವು ಅಮೂಲಾಗ್ರವಾಗಿ ಬದಲಾವಣೆ ಕಂಡಿತು. ಶ್ರೀಗಳು ಶ್ರೀಮಠದ ಹಳೆಯಕಟ್ಟಡವನ್ನು ತಗೆಸಿ ಹೊಸ ಕಟ್ಟಡವನ್ನು ನಿರ್ಮಿಸಿದರು. ಶಿಥಿಲಗೊಂಡಿದ್ದ ಕರ್ತೃಗದ್ದುಗೆಯನ್ನು ನವೀಕರಿಸಿ ನಿತ್ಯ ಪೂಜೆಗೆ ಒಳಪಡಿಸಿದರು. ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ ಶ್ರೀಗಳು ತಮ್ಮ ಆಚರಣೆಗಳ ಮೂಲಕ ಅಪಾರ ಭಕ್ತಬಳಗವನ್ನು ಹೊಂದಿ ಶ್ರೀಮಠವನ್ನು ಅಭಿವೃದ್ದಿಪಡಿಸುತ್ತಿದ್ದಾರೆ.ಶ್ರೀಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಜೊತೆಗೆಶ್ರೀಮಠದ ಶಾಖಾ ಮಠಗಳಾದ ಹಂಜಗಿ, ಜೇವೂರ, ನಾಗೂರ, ನಾಗಣಸೂರ ಹಾಗೂಸೋಲಾಪುರ ಮಠದ ಅಭಿವೃದ್ದಿಗೂ ಗಮನಹರಿಸಿದ್ದಾರೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಗೆ ಭಜನಾ ಕಾರ್ಯಕ್ರಮ ನಡೆಯುತ್ತಿದೆ. ಶ್ರೀಮಠದಜಾತ್ರಾ ಮಹೋತ್ಸವವು ಶ್ರಾವಣ ಮಾಸದಲ್ಲಿ ನಡೆಯುತ್ತಿದ್ದು ಪುರಾಣ ಪ್ರವಚನಗಳನ್ನುಹೇಳಿಸಲಾಗುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಶ್ರೀಕಂಠ ಶಿವಾಚಾರ್ಯ ಸ್ವಾಮಿಗಳು
Date of Birth :
01-06-1960
Place :
ನಾಗಣಸೂರು, ಅಕ್ಕಲಕೋಟೆ ತಾ||
Photo :

Programs

ಪ್ರತಿ ತಿಂಗಳ ಅಮವಾಸೆಗೆ ಭಜನೆ ಕಾರ್ಯಕ್ರಮ
ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಶ್ರೀ ಮಠದ ಜಾತ್ರೆ

Photos

Full Address Kannada

ಶ್ರೀ ಬೊಮ್ಮಲಿಂಗೇಶ್ವರ ಮಠ
ರೇವೂರು (ಬಿ) - 585 301
ಅಫಜಲಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಮಲ್ಲಾಬಾದ್ 12 ಕಿ.ಮೀ. .
ಅಫಜಲಪುರ 20 ಕಿ.ಮೀ.
ಕಲಬುರಗಿ 45 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!