ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ಹೆಬ್ಬಾಳ ಗ್ರಾಮವು ತಾಲ್ಲೂಕು ಕೇಂದ್ರದಿಂದ15 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 13ನೇ ಶತಮಾನದಲ್ಲಿ ಶ್ರೀಚೋಳೋಡಿ ಬಸವೇಶ್ವರ ಶಿವಯೋಗಿಗಳಿಂದ ಸ್ಥಾಪಿತಗೊಂಡಿದೆಯೆಂದು ಹೇಳಲಾಗಿರುವಶ್ರೀ ಬೋಳೋಡಿ ಬಸವೇಶ್ವರ ಸಂಸ್ಥಾನ ಬೃಹನ್ಮಠವು ಅಸ್ತಿತ್ವದಲ್ಲಿದ್ದು ಈ ಭಾಗದ ಪ್ರಮುಖಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ.ಕರ್ತೃಗುರುಗಳಾದ ಶ್ರೀ ಬೋಳೋಡಿ ಬಸವೇಶ್ವರ ಶಿವಯೋಗಿಗಳು ಲೋಕಸಂಚಾರಿಗಳಾಗಿದ್ದು ಸಂಚಾರ ಮಾಡುತ್ತಾ ಹೆಬ್ಬಾಳಿಗೆ ಬಂದು ನೆಲೆಸಿದವರು. ಶ್ರೀಗಳುತಪೋನಿಷ್ಠರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳು ಹಾಗೂ ತಪೋಶಕ್ತಿಯ ಬಲದಿಂದಾಗಿಭಕ್ತರ ಪ್ರೀತಿಗೆ ಪಾತ್ರರಾಗಿದ್ದು ಶ್ರೀಮಠದ ಭಕ್ತರನ್ನು ಧಾರ್ಮಿಕವಾಗಿ ಜಾಗೃತಗೊಳಿಸಿದ್ದುಶ್ರೀಗಳ ಸಮಾಧಿ ಗದ್ದುಗೆಯು ಇಂದಿಗೂ ಪೂಜನೀಯವಾಗಿದೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಸುಮಾರು 8ಕ್ಕೂ ಹೆಚ್ಚಿನ ಶ್ರೀಗಳು ಅಅಧಿಕಾರ ನಡೆಸಿದ್ದಾರೆಂದು ತಿಳಿದುಬರುತ್ತದೆ. ಶ್ರೀಮಠದ ಪರಂಪರೆಯು ಶ್ರೀಮಂತವಾಗಿದ್ದುಪರಂಪರೆಯಲ್ಲಿ ಬರುವ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳಿಂದಾಗಿ ಶ್ರೀಮಠವು ಅತಿಹೆಚ್ಚು ಪ್ರಸಿದ್ಧಿ ಪಡೆದಿದೆ. ಶ್ರೀ ಸಿದ್ದೇಶ್ವರ ಶಿವಾಚಾರ್ಯರು ದೇಶಸಂಚಾರ ಮಾಡುತ್ತಾಅಪಾರ ಜ್ಞಾನ ಸಂಪಾದಿಸಿಕೊಂಡವರಾಗಿದ್ದು, ಶ್ರೀಗಳು ಭೂತ ಪ್ರೇತಗಳಿಂದ ಕೆಲಸಮಾಡಿಸಿಕೊಳ್ಳುತ್ತಿದ್ದರೆಂದು ಭಕ್ತರು ಅಭಿಪ್ರಾಯ ಪಡುತ್ತಾರೆ. ಶ್ರೀಗಳು ಭೂತಪ್ರೇತಗಳಿಂದಒಂದೇ ರಾತ್ರಿ ಯಲ್ಲಿ ಶ್ರೀಮಠವನ್ನು ಕಟ್ಟಿಸಿದರೆಂದು ಹೇಳಲಾಗುತ್ತಿದ್ದು, ಭೂತಗಳನ್ನುಇಟ್ಟುಕೊಂಡು ನೂರಾರು ಎಕರೆ ಭೂಮಿಯನ್ನು ಸಾಗುವಳಿ ಮಾಡಿಸುತ್ತಿದ್ದರೆಂದುನಂಬಲಾಗುತ್ತದೆ. ಶ್ರೀಗಳ ಆಡಳಿತದಲ್ಲಿ ಶ್ರೀಮಠವು ಸರ್ವಾಂಗೀಣ ಅಭಿವೃದ್ಧಿ ಕಂಡಿದೆ.ಹಿಂದಿನ ಶ್ರೀಗಳಾದ ಶ್ರೀ ನಾಗಭೂಷಣ ಶಿವಾಚಾರ್ಯರು ಶ್ರೀಮಠಕ್ಕೆ ಪಟ್ಟಕ್ಕೆಬಂದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಶ್ರೀಮಠದ ಅಭಿವೃದ್ಧಿ ಕಾರ್ಯಗಳಮೂಲಕ ಹೆಚ್ಚು ಪ್ರಸಿದ್ಧಿಗೊಂಡಿದ್ದರು. ಈಗಿನ ಶ್ರೀಗಳಾದ ವಿದ್ವಾನ್ ಶ್ರೀ ನಾಗಭೂಷಣಶಿವಾಚಾರ್ಯ ಸ್ವಾಮಿಗಳು 1986ರ ಡಿಸೆಂಬರ್ 11ರಂದು ಶ್ರೀಮಠಕ್ಕೆ ಪಟ್ಟಾದಿಕಾರಗೊಂಡಿದ್ದು ಶ್ರೀಮಠವನ್ನು ಭಕ್ತ ಸಹಕಾರದೊಂದಿಗೆ ಹೆಚ್ಚು ಅಭಿವೃದ್ಧಿಗೊಳಿಸಿದ್ದಾರೆ.ಶ್ರೀಮಠದ ಜಾತ್ರೆಯು ಮಾರ್ಗಶಿರ ಮಾಸದಲ್ಲಿ ನಡೆಯುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
12-11-1957
Place :
ಹೆಬ್ಬಾಳು, ಗಂಗಾವತಿ ತಾ||
Pattadikara :
11-12-1986
Photo :
Programs
ಮಣ್ಣೆತ್ತಿನ ಅಮವಾಸ್ಯೆಯಂದು ಲಿಂ|| ಶ್ರೀ ಷ.ಬ್ರ. ಮರಿಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ. ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಅನುಷ್ಠಾನ, ನಿತ್ಯಭಜನೆ. ಮಾರ್ಗಶಿರ ಶುದ್ಧ ತ್ರಯೋದಶಿಯಂದು ಶ್ರೀಮಠದ ಜಾತ್ರೆ. ದಸರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ
Photos
Full Address Kannada
ಶ್ರೀ ಬೋಳೋಡಿ ಬಸವೇಶ್ವರ ಶಿವಯೋಗಿ ಸಂಸ್ಥಾನ ಬೃಹನ್ಮಠ
ಹೆಬ್ಬಾಳ - 583268
ಗಂಗಾವತಿ ತಾ||, ಕೊಪ್ಪಳ ಜಿ||