Shree Bilvapatre Gavimatha

Shree Bilvapatre Gavimatha Claimed

ಶ್ರೀ ಬಿಲ್ವಪತ್ರೆ ಗವಿಮಠ

Average Reviews

Description

ಶ್ರೀ ಬಿಲ್ವಪತ್ರೆ ಗವಿಮಠ – ಬಿಲ್ವಪತ್ರೆ ದೊಡ್ಡಿ

ಕರ್ತೃ – ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು

ಕನಕಪುರ ತಾಲ್ಲೂಕು ಕೇಂದ್ರದಿಂದ 25 ಕಿ.ಮೀ. ದೂರದಲ್ಲಿರುವ ಕಬ್ಬಾಳಗ್ರಾಮದ ಸಮೀಪದಲ್ಲಿ ಬಿಲ್ವವೃಕ್ಷ ವನವಿದ್ದು ಇದಕ್ಕೆ ಬಿಲ್ವಪತ್ರೆ ದೊಡ್ಡಿಯೆಂದುಕರೆಯˉÁಗುತ್ತದೆ. ಈ ಬಿಲ್ವಪತ್ರೆ ದೊಡ್ಡಿಯಲ್ಲಿ ಸ್ಥಾಪಿತಗೊಂಡಿರುವ ಶ್ರೀ ಬಿಲ್ವಪತ್ರೆಗವಿಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕಪ್ರಚಲಿತದಲ್ಲಿದೆ. ಶ್ರೀ ಮಠದ ಮೂಲ ಗವಿಯಲ್ಲಿಯೇ ಶ್ರೀ ಮಠದ ಕರ್ತೃಗುರುಗಳುಅನುಷ್ಟಾನಗೊಂಡು ಸಮಾಜವನ್ನು ಬೆಳೆಸಿ ಮಠವನ್ನು ಸ್ಥಾಪಿಸಿದ್ದರು ಎಂದು ತಿಳಿದುಬರುತ್ತಿದ್ದು ನಂತರ ಮಠದ ಧಾರ್ಮಿಕ ಆಚರಣೆಗಳು ಹೆಚ್ಚಾದಂತೆ ಮಠದ ಕಟ್ಟಡವು ಗವಿಯಮುಂಭಾಗದಲ್ಲಿ ನಿರ್ಮಾಣಗೊಂಡಿತು. ಈ ರೀತಿ ಬೆಳೆದ ಮಠದ ಪರಂಪರೆಯಲ್ಲಿ 3 ಜನಶ್ರೀಗಳು ಅಧಿಕಾರ ನಡೆಸಿದ್ದು ಈಗಿನ ಶ್ರೀಗಳು 4ನೇ ಯವರೆಂದು ಹೇಳˉÁಗಿದೆ.ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಠದ ಕರ್ತೃಗುರುಗಳುಶ್ರೀ. ಮ.ನಿ.ಪ್ರ. ಶಿವಲಿಂಗ ಸ್ವಾಮಿಗಳು, ಆದರೆ ಇವರ ನಂತರ ಸುಮಾರು ಮೂರುವರೆಶತಮಾನಗಳ ಕಾಲ ಯಾವುದೇ ಶ್ರೀಗಳು ಅಧಿಕಾರ ನಡೆಸಿರುವ ಬಗ್ಗೆ ತಿಳಿದುಬರುವುದಿಲ್ಲ.ಈಗ್ಗೆ 150 ವರ್ಷಗಳ ಹಿಂದೆ ಶ್ರೀ. ಮ.ನಿ.ಪ್ರ. ಸದಾಶಿವ ಸ್ವಾಮಿಗಳು ಶ್ರೀಮಠವನ್ನುಜೀರ್ಣೋದ್ಧಾರಗೊಳಿಸಿ ಪುನರ್ಸ್ಥಾಪನೆ ಮಾಡಿದ್ದಾರೆಂದು ತಿಳಿದು ಬರುತ್ತದೆ. ಇವರನಂತರ ಶ್ರೀಮಠದ ಅಧಿಕಾರಕ್ಕೆ ಬಂದ ಹಿಂದಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ನಿರಂಜನಸ್ವಾಮಿಗಳು ಸರ್ವಜನಾಂಗದ ಭಕ್ತರನ್ನು ಹೊಂದಿದ್ದು ಸಮಷ್ಟಿ ಸಮಾಜದ ಅಭಿವೃದ್ದಿಗೆಶ್ರಮಿಸಿ 1968ರಲ್ಲಿ ಲಿಂಗೈಕ್ಯರಾದರು.ಹಾಲಿ ಶ್ರೀಮಠದ ಪಟ್ಟಾಧ್ಯಕ್ಷರಾಗಿರುವ ಶ್ರೀ.ಮ.ನಿ.ಪ್ರ. ಶಿವಲಿಂಗ ಸ್ವಾಮಿಗಳು1968ರ ಅಕ್ಟೋಬರ್ 02 ರಂದು ಕನಕಪುರ ದೇಗುಲಮಠದ ಲಿಂಗೈಕ್ಯ ಗುರುಗಳಾದ ಶ್ರೀನಿರ್ವಾಣ ಸ್ವಾಮಿಗಳಿಂದ ಪಟ್ಟಾಧಿಕಾರದ ಅನುಗ್ರಹ ಪಡೆದು ಅಧಿಕಾರಕ್ಕೆ ಬಂದರು. ಶ್ರೀಗಳುತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿ ಧರ್ಮ ಜಾಗೃತಿಮಾಡಿಸುತ್ತಿದ್ದು ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಶ್ರೀಶಿವಲಿಂಗ ಸ್ವಾಮಿಗಳು, ಶ್ರೀ ಸದಾಶಿವ ಸ್ವಾಮಿಗಳು ಹಾಗೂ ಶ್ರೀ ನಿರಂಜನ ಸ್ವಾಮಿಗಳಗದ್ದುಗೆಗಳು ನಿರ್ಮಾಣಗೊಂಡಿದ್ದು ಪಾಲ್ಲುಣ ಮಾಸದಲ್ಲಿ ಪುಣ್ಯಾರಾಧನೆ ಮಹೋತ್ಸವನಡೆಯುತ್ತದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಶಿವಲಿಂಗ ಸ್ವಾಮಿಗಳು
Date of Birth :
03-05-1950
Place :
ಬಿಲ್ವಪತ್ರೆದೊಡ್ಡಿ, ಕನಕಪುರ ತಾ||
Pattadikara :
02-10-1968
Photo :

Programs

ಪ್ರತಿ ಹುಣ್ಣಿಮೆಗೆ ಭಜನೆ ಪಾಲ್ಗುಣ ಮಾಸದಲ್ಲಿ ಲಿಂ|| ಶ್ರೀ ಮ.ನಿ.ಪ್ರ. ಶಿವಲಿಂಗ ಸ್ವಾಮಿಗಳ, ಶ್ರೀ ಸದಾಶಿವ ಸ್ವಾಮಿಗಳ, ಶ್ರೀ ನಿರಂಜನ ಸ್ವಾಮಿಗಳ ಪುಣ್ಯಾರಾಧನೆ ಶಿವರಾತ್ರಿಗೆ ವಿಶೇಷ ಪೂಜೆ ಬಸವ ಜಯಂತಿ ಆಚರಣೆ

Photos

Full Address Kannada

ಬಿಲ್ವಪತ್ರೆದೊಡ್ಡಿ, ಕಬ್ಬಾಳ - 562 126 ಕನಕಪುರ ತಾ||, ರಾಮನಗರ ಜಿˉÉ್ಲ

Map

Near by Places

ವೆಂಕಟರಾಯನ ದೊಡ್ಡಿ ಕ್ರಾಸ್ - 2 ಕಿ.ಮೀ. ಸಾತನೂರು - 9 ಕಿ.ಮೀ. ಕನಕಪುರ - 25 ಕಿ.ಮೀ.

Statistic

13 Views
0 Rating
0 Favorite
0 Share
error: Content is protected !!