Shree Bhunuru Samsthana Brahanmatha

Shree Bhunuru Samsthana Brahanmatha Claimed

ಶ್ರೀ ಭೂಸನೂರು ಸಂಸ್ಥಾನ ಬೃಹನ್ಮಠ

Average Reviews

Description

ಶ್ರೀ ಭೂಸನೂರು ಸಂಸ್ಥಾನ ಬೃಹನ್ಮಠ

ಕರ್ತೃ ಶ್ರೀ ಮಡಿವಾಳೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ನವಲಗುಂದ ತಾಲ್ಲೂಕಿನ ತುಪ್ಪದ ಕುರಹಟ್ಟಿ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀಭೂಸನೂರು ಸಂಸ್ಥಾನ ಬೃಹನ್ಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿದ್ದು13ನೇ ಶತಮಾನಕ್ಕಿಂತಲೂ ಪೂರ್ವದ ಇತಿಹಾಸವನ್ನು ಹೊಂದಿದೆ. ಶ್ರೀಮಠದಕರ್ತೃಗುರುಗಳೆಂದು ಪೂಜ್ಯ ಶ್ರೀ ಮಡಿವಾಳೇಶ್ವರ ಶಿವಾಚಾರ್ಯರನ್ನು ಗುರುತಿಸಲಾಗಿದ್ದುಇಲ್ಲಿಯವರೆಗೂ 22 ಜನ ಶ್ರೀಗಳು ಅಧಿಕಾರಕ್ಕೆ ಬಂದಿರುವ ಮಾಹಿತಿ ದೊರೆಯುತ್ತದೆ.ಕರ್ತೃಗುರುಗಳು ಸದಾ ಸಂಚಾರಿಗಳಾಗಿ ತಾವು ನೆಲೆನಿಂತ ಕ್ಷೇತ್ರಗಳನ್ನೆಲ್ಲಾತಪೋಭೂಮಿಯನ್ನಾಗಿಸುತ್ತಾ ಮುಂದುವರೆದಿದ್ದು ಕಡೆಗೆ ತುಪ್ಪದ ಕುರಹಟ್ಟಿ ಗ್ರಾಮಕ್ಕೆಆಗಮಿಸಿದರೆಂದು ಹೇಳಲಾಗುತ್ತದೆ. ತಮ್ಮ ಪವಾಡಗಳಿಂದ ಅನುಷ್ಠಾನ ಬಲದಿಂದ ಈಭಾಗದ ಭಕ್ತರನ್ನು ಸೂಕ್ತ ಮಾರ್ಗದರ್ಶನದಲ್ಲಿ ಮುನ್ನಡೆಸಿದ ಶ್ರೀಗಳು ಅವರಸಹಕಾರದೊಂದಿಗೆ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದರೆಂದು ಹೇಳಲಾಗಿದೆ. ಹೀಗೆಶ್ರೀಗಳು ನೆಲೆನಿಂತ ಸ್ಥಳವೇ ಬೃಹನ್ಮಠವಾಗಿ ಬೆಳೆದು 8 ದಶಕಗಳಿಗೂ ಅಧಿಕ ಕಾಲಮುಂದುವರೆದುಕೊಂಡು ಬಂದಿದೆ.ಶ್ರೀಮಠದ ಪರಂಪರೆಯಲ್ಲಿ 22 ಜನ ಶ್ರೀಗಳ ಬಗ್ಗೆ ತಿಳಿದುಬರುತ್ತದಾದರೂಶ್ರೀಮಠದ ಆವರಣದಲ್ಲಿ ಕೇವಲ 10 ಗದ್ದುಗೆಗಳನ್ನು ಮಾತ್ರ ಕಾಣಬಹುದು. ಇನ್ನುಳಿದಗದ್ದುಗೆಗಳ ಬಗ್ಗೆ ತಿಳಿದುಬರುವುದಿಲ್ಲ. 20ನೇ ಶ್ರೀಗಳಾದ ಶ್ರೀ ಷ.ಬ್ರ. ಕೆಂಜಡೇಶ್ವರಶಿವಾಚಾರ್ಯ ಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಪ್ರಸಿದ್ಧಿಗೆ ಬಂದಿದ್ದು ಹಿಂದಿನ ಶ್ರೀಗಳಾದಶ್ರೀ ಷ.ಬ್ರ. ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಕಾಲದಲ್ಲಿ ಶ್ರೀಮಠವುಸರ್ವತೋಮುಖ ಅಭಿವೃದ್ಧಿ ಕಂಡಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ವಾಗೀಶ ಪಂಡಿತಾರಾಧ್ಯ ಶ್ರೀಗಳು ಶ್ರೀಮಠದಉತ್ತರಾಧಿಕಾರಿಗಳಾಗಿ ನೇಮಕಗೊಂಡು ಶಿವಯೋಗ ಮಂದಿರದಲ್ಲಿ ಧಾರ್ಮಿಕ ಶಿಕ್ಷಣವನ್ನುಪಡೆದು ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಪ್ರತಿ ವರ್ಷ ವೈಶಾಖ ಮಾಸದಲ್ಲಿ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆಯನ್ನು ನಡೆಸಲಾಗುತ್ತಿದ್ದು 11 ದಿನಗಳ ಕಾಲ ವಿಶೇಷ ಧಾರ್ಮಿಕಆಚರಣೆಗಳು ನಡೆಯುತ್ತವೆ.

Swamiji

Swamiji Name :
ಶ್ರೀ ಷ.ಬ್ರ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
Date of Birth :
17-7-1986
Place :
ತುಪ್ಪದ ಕುರಹಟ್ಟಿ, ನವಲಗುಂದ ತಾ||
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ, ರುದ್ರಾಭಿಷೇಕ.
ವೈಶಾಖ ಮಾಸದಲ್ಲಿ 11 ದಿನಗಳ ವಿಶೇಷ ಪೂಜೆ ಹಾಗೂ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ.

Photos

Full Address Kannada

ಶ್ರೀ ಭೂಸನೂರು ಸಂಸ್ಥಾನ ಹಿರೇಮಠ
ತುಪ್ಪದ ಕುರಹಟ್ಟಿ - 582 208
ನವಲಗುಂದ ತಾ||, ಧಾರವಾಡ ಜಿ||

Map

Near by Places

ನವಲಗುಂದ - 20 ಕಿ.ಮೀ.
ಗದಗ - 21 ಕಿ.ಮೀ.
ಹುಬ್ಬಳ್ಳಿ - 50 ಕಿ.ಮೀ.
ಧಾರವಾಡ - 55 ಕಿ.ಮೀ.

Statistic

54 Views
0 Rating
0 Favorite
0 Share
error: Content is protected !!