ತಮದಡ್ಡಿ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಭದ್ರೇಶ್ವರ ಶರಣರು ನೆˉÉನಿಂತುತಪೋನುಷ್ಠಾನ ಕೈಗೊಂಡಿದ್ದ ಸ್ಥಳದಲ್ಲಿ ಭಕ್ತರ ಸಹಕಾರದೊಂದಿಗೆ ಶ್ರೀ.ಮ.ನಿ.ಪ್ರ. ಶಿವಶಂಕರಸ್ವಾಮಿಗಳು ಸ್ಥಾಪಿಸಿರುವ ಶ್ರೀ ಭದ್ರೇಶ್ವರ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಿದೆ.ಶ್ರೀ ಭದ್ರೇಶ್ವರ ಶರಣರು ತಮದಡ್ಡಿಗೆ ಬಂದು ಅನುಷ್ಠಾನ ಕೈಗೊಂಡು ಭಕ್ತರಿಗೆವೀರಶೈವ ಧರ್ಮದ ಆಚರಣೆಗಳ ಬಗ್ಗೆ ಅರಿವು ಮೂರಿಸಿದರು. ತಮ್ಮ ತಪೋನುಷ್ಠಾನಬಲದಿಂದ ಭಕ್ತರನ್ನುದ್ಧರಿಸಿದ ಶರಣರು ವೀರಶೈವ ಧರ್ಮವನ್ನು ಪ್ರಚಾರಗೊಳಿಸಿಲಿಂಗೈಕ್ಯರಾದ ನಂತರ ಇಲ್ಲಿನ ಭಕ್ತರು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡುಬರುತ್ತಿದ್ದರು.ಹೀಗೆ ಶ್ರೀ ಭದ್ರೇಶ್ವರ ಶರಣರಿಂದ ಜಾಗೃತಗೊಂಡ ಸ್ಥಳದಲ್ಲಿ 1978ರ ಸುಮಾರಿಗೆಶ್ರೀ ಭದ್ರೇಶ್ವರ ಮಠವನ್ನು ಸ್ಥಾಪಿಸಿದವರು ಮಹಾರಾಷ್ಟ್ರದ ಹತ್ತಿಕಣಬಸುವಿನ ಗ್ರಾಮದವಿರಕ್ತಮಠದ ಮಹಾಧೀಶರಾದ ಶ್ರೀ.ಮ.ನಿ.ಪ್ರ. ಶಿವಶಂಕರ ಸ್ವಾಮಿಗಳು ಶ್ರೀಗಳು ಮಠವನ್ನುಸ್ಥಾಪಿಸಿದ ನಂತರ ಇಲ್ಲಿನ ಹಳೆಯ ಕಟ್ಟಡವನ್ನು ತೆಗಿಸಿ ಹೊಸ ಕಟ್ಟಡವನ್ನು ನಿರ್ಮಿಸಿದ್ದಾರೆಇಲ್ಲಿನ ಗ್ರಾಮಸ್ಥರು.ಶ್ರೀ ಶಿವಶಂಕರ ಸ್ವಾಮಿಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನುಅಭಿವೃದ್ಧಿಗೊಳಿಸುತ್ತಿದ್ದು, ಶ್ರೀಮಠದಲ್ಲಿ ಪ್ರತಿನಿತ್ಯ ಭಜನೆ ಕಾರ್ಯಕ್ರಮ ನಡೆಯುವಂತೆಮಾಡಿದ್ದಾರೆ. ಪ್ರತಿ ಅಮವಾಸ್ಯೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದು,ಶ್ರಾವಣದಲ್ಲಿ ಪುರಾಣ ಪ್ರವಚನಗಳು ಆಯೋಜನೆಗೊಂಡಿರುತ್ತವೆ.ಶ್ರೀಗಳು ಶ್ರೀಮಠದ ಜೊತೆಗೆ ತಮ್ಮ ಮೂಲ ಮಠವಾದ ಮಹಾರಾಷ್ಟ್ರ ರಾಜ್ಯದಹತ್ತಿಕಣಬಸುವಿನ ವಿರಕ್ತಮಠದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸಮಾಜವನ್ನುಧಾರ್ಮಿಕ ತಳಹದಿಯ ಮೇˉÉ ಬೆಳೆಸುತ್ತಿದ್ದಾರೆ. ಹಾಗೂ ಶ್ರೀಮಠದಲ್ಲಿ ವಿಶೇಷಸಂದರ್ಭಗಳಲ್ಲಿ ದಾಸೋಹದ ವ್ಯವಸ್ಥೆ ಮಾಡˉÁಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಶಂಕರ ಸ್ವಾಮಿಗಳು
Place :
ದೇವಣಗಾಂವ, ಸಿಂಧಗಿ ತಾ||
Photo :
Programs
ಅಮವಾಸ್ಯೆಗೆ ವಿಶೇಷ ಪೂಜೆ.
ಬಸವ ಜಯಂತಿಗೆ ಶ್ರೀಮಠದ ರಥೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.