ಚಿಕ್ಕಮಗಳೂರು ನಗರದ ಕಲ್ಯಾಣನಗರ ಬಡಾವಣೆಯಲ್ಲಿ ಸ್ಥಾಪಿತಗೊಂಡಿರುವ ಶ್ರೀಬಸವಮಂದಿರ ವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಮೂಲಕ ಈ ಭಾಗದ ಜನರಲ್ಲಿ ಸಾಮಾಜಿಕ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಮಠವುಬಸವತತ್ವ ಪ್ರಚಾರವನ್ನು ಮೂಲ ಉದ್ದೇಶವನ್ನಾಗಿಸಿಕೊಂಡು ಸ್ಥಾಪನೆಯಾಗಿದ್ದು ಶ್ರೀ ಮಠದಸ್ಥಾಪಕರು ಶ್ರೀ ಮ.ನಿ.ಪ್ರ. ಜಯಚಂದ್ರಶೇಖರ ಮಹಾಸ್ವಾಮಿಗಳು.ಶ್ರೀ ಜಯಚಂದ್ರಶೇಖರ ಮಹಾಸ್ವಾಮಿಗಳು ತಮ್ಮ 12ನೇ ವಯಸ್ಸಿನಲ್ಲಿಯೇ ಅಂದರೆ1960ರಲ್ಲಿ ಶ್ರೀ ಜಾಬಾಲಿಪುರ ಮಠ (ಚಿಕ್ಕಮಗಳೂರು)ದ ಅಧಿಕಾರ ಸ್ವೀಕರಿಸಿದರು. ಕೆಲ ಕಾಲ ಶ್ರೀಗಳುಸಿದ್ದಗಂಗಾ, ಮೈಸೂರು ಹಾಗೂ ಚಿಕ್ಕಮಗಳೂರುಗಳಲ್ಲಿ ವಿದ್ಯಾಭ್ಯಾಸ ಮಾಡಿ ಮಠಕ್ಕೆ ಮರಳಿಶ್ರೀಮಠವನ್ನು ಮುನ್ನಡೆಸಿದರು. ಆದರೆ ಅಲ್ಲಿನ ಕೆಲ ಘಟನೆಗಳಿಂದ ಬೇಸತ್ತ ಶ್ರೀಗಳು ಅಲ್ಲಿಂದಹೊರಬಂದು ಭಕ್ತರ ಸಹಕಾರದೊಂದಿಗೆ 1973ರ ಮಾರ್ಚ್ 01ರಲ್ಲಿ ಈಗಿನ ಶ್ರೀ ಬಸವಮಠ ವಿರಕ್ತಮಠವನ್ನು ಸ್ಥಾಪಿಸಿದರು. ಶ್ರೀಗಳು ಮಠದಲ್ಲಿ ತಮ್ಮ ಶರಣ ತತ್ತ್ವಚಿಂತನ ಕಾರ್ಯಕ್ರಮಗಳ ಮೂಲಕ,ಶರಣ ಸಮ್ಮೇಳನಗಳ ಮೂಲಕ ಅಪಾರ ಭಕ್ತರನ್ನು ಸಂಪಾದಿಸಿಕೊಂಡು ಬಸವಮಂದಿರವನ್ನುಪ್ರಸಿದ್ದಿಗೊಳಿಸಿದರು.ಸೂಕ್ಷ್ಮಮತಿ ಹಾಗೂ ದಯಾಪರರಾಗಿದ್ದ ಶ್ರೀಗಳು ಸದಾ ಬಸವತತ್ವದ ಚಿಂತನೆಯಿಂದಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಹೀಗೆ ಸದಾ ಚಟುವಟಿಕೆಯ ಕೇಂದ್ರವಾಗಿದ್ದ ಶ್ರೀಗಳು1995ರ ನವೆಂಬರ್ 29ರಲ್ಲಿ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಜಯಬಸವಾನಂದ ಸ್ವಾಮಿಗಳನ್ನುತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀಮಠದ ಅಧಿಕಾರಕ್ಕೆ ತಂದು ಮರುದಿನವೇ ಅಂದರೆ ನವೆಂಬರ್30ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ಜಯಬಸವಾನಂದ ಸ್ವಾಮಿಗಳು ಹಿಂದಿನ ಶ್ರೀಗಳಹಾದಿ ಯಲ್ಲಿಯೇ ಸಾಗುತ್ತಾ ಮಠವನ್ನು ಬಸವ ತತ್ತ್ವ ಪ್ರಚಾರ ಕೇಂದ್ರವನ್ನಾಗಿ ಮಾಡಿದ್ದಾರೆ. ಸ್ನಾತಕಪದವೀದರರಾದ ಶ್ರಿಗಳು 1998-99ನೇ ಸಾಲಿನಿಂದ ಅನೇಕ ಶಾಲಾ ಕಾಲೇಜುಗಳನ್ನು ತೆರೆದು ಈಭಾಗದ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಅಲ್ಲದೇ ಶ್ರೀ ಮಠದಲ್ಲಿ ಪ್ರತಿ ಭಾನುವಾರ”ಮಹಾಮನೆ” ಎಂಬ ಕಾರ್ಯಕ ್ರಮ ಹಾಗೂ ಪ ್ರತಿ ತಿಂಗಳ 2ನೇ ಶನಿವಾರ”ಶಿವಾನುಭವಗೋಷ್ಠಿಗಳನ್ನು” ನಡೆಸುತ್ತಿದ್ದಾರೆ ಮತ್ತು ಕಾರ್ತೀಕ ಮಾಸದಲ್ಲಿ ಪ್ರತಿ ಸೋಮವಾರವಿಶೇಷವಾಗಿ “ಅರಿವಿನ ಜಾಗೃತಿ” ಎಂಬ ಕಾರ್ಯಕ್ರಮ ಹಮ್ಮಿಕೊಂಡು ಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಜಯಬಸವಾನಂದ ಸ್ವಾಮಿಗಳು
Date of Birth :
: 01-03-1973
Place :
ಲಕ್ಷ್ಮೀಪುರ, ಚಿಕ್ಕಮಗಳೂರು ತಾ||
Pattadikara :
29-11-1995
Photo :
Programs
ಪ್ರತಿ ಭಾನುವಾರ "ಮಹಾಮನೆ" ಕಾರ್ಯಕ್ರಮ ಪ್ರತಿ ತಿಂಗಳ 2ನೇ ಶನಿವಾರ "ಶಿವಾನುಭವಗೋಷ್ಠಿ" ಬಸವ ಜಯಂತಿ ಆಚರಣೆ ಮತ್ತು ಬಸವಾದಿ ಪ್ರಥಮರ ಜಯಂತಿಗಳ ಆಚರಣೆ
ಶ್ರಾವಣ ಮಾಸದಲ್ಲಿ ನಿತ್ಯ ಸಂಜೆ "ಶಿವಾನುಭವ ಗೋಷ್ಠಿ"
ಕಾರ್ತೀಕ ಮಾಸದಲ್ಲಿ ಪ್ರತಿ ಸೋಮವಾರ "ಅರಿವಿನ ಜಾಗೃತಿ" ಕಾರ್ಯಕ್ರಮ
ಫೆಬ್ರವರಿ ತಿಂಗಳಲ್ಲಿ ಹಿಂದಿನ ಹಿರಿಯ ಗುರುಗಳ ಪುಣ್ಯ ಸ್ಮರಣೋತ್ಸವ
Institutions
ಶ್ರೀ ಜಯಚಂದ್ರಶೇಖರ ವಿದ್ಯಾಸಂಸ್ಥೆ (ರಿ)
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಬಸವ ಮಂದಿರ ವಿರಕ್ತಮಠ ಕಲ್ಯಾಣನಗರ,
ಜ್ಯೋತಿನಗರ ಪೋಸ್ಟ್ ಚಿಕ್ಕಮಗಳೂರು - 57 7102