ಶಿರಸಿ ಪಟ್ಟಣದ ಹೃದಯ ಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಬಣ್ಣದ ಮಠ ಅಥವಾಚೌಕಿ ಮಠವು ಸುಮಾರು ಮುನ್ನೂರು ವರ್ಷಗಳ ಇತಿಹಾಸವನ್ನು ಹೊಂದಿದ್ದು ಈ ಭಾಗದಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಮಠವು ಮೊದಲು ಊರ ಹೊರಭಾಗದಲ್ಲಿತ್ತು.ಆಗ ಶ್ರೀಮಠಕ್ಕೆ ಶ್ರೀ ಚೌಕಿಮಠವೆಂದು ಕರೆಯುತ್ತಿದ್ದರು. ಮುಂದೆ ಊರ ಹೊರಗಿನ ಮಠಜೀರ್ಣಾವಸ್ಥೆ ತಲುಪಿದಾಗ ಗ್ರಾಮದ ಉಣ್ಣೆ ಮನೆತನದವರು ಮಠವನ್ನು ಊರ ಒಳಗೆಸ್ಥಳಾಂತರಿಸಿದರು. ಈ ಕಾರಣಕ್ಕೆ ಊರ ಮಧ್ಯಭಾಗದಲ್ಲಿನ ಮಠಕ್ಕೆ “ಉಣ್ಣೆ ಮಠ”ವೆಂದುಹೆಸರು.ಶಿರಸಿ ಪಟ್ಟಣ ಬೆಳೆದಂತೆ ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ಗುರುಸಿದ್ದರಾಜಯೋಗೇಂದ್ರ ಮಹಾಸ್ವಾಮಿಗಳ ಕಾಲದಲ್ಲಿ ಮೂಲ ಚೌಕಿ ಮಠವಿದ್ದ ಸ್ಥಳ ಊರಮಧ್ಯಭಾಗಕ್ಕೆ ಸೇರಿಕೊಂಡಿತ್ತು. ಶ್ರೀಗಳ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳುಹೆಚ್ಚಾದಂತೆ, ಮಠಕ್ಕೆ ಭಕ್ತರ ಹರಿಯುವಿಕೆ ಹೆಚ್ಚಾದಂತೆ ಉಣ್ಣೆಮಠದ ಸ್ಥಳ ಸಾಕಾಗದೇಹೋದಾಗ ಮೂಲಸ್ಥಳ ಚೌಕಿಮಠಕ್ಕೆ ಪುನಃ ಮಠವನ್ನು ಸ್ಥಳಾಂತರಿಸಿ ಚೌಕಿಮಠ ಅಥವಾಬಣ್ಣದ ಮಠವನ್ನು ವಿಶಾಲವಾಗಿ ರೂಪಿಸಲಾಯಿತು.ಶ್ರೀ ಗುರುಸಿದ್ದರಾಜಯೋಗೇಂದ್ರ ಮಹಾಸ್ವಾಮಿಗಳು ಮಠವನ್ನು ಬಣ್ಣದ ಮಠಕ್ಕೆಸ್ಥಳಾಂತರಿಸಿ ಶ್ರೀಮಠವನ್ನು ಸರ್ವತೋಮುಖವಾಗಿ ಅಭಿವೃದ್ದಿಪಡಿಸಿದ ಕಾರಣಕ್ಕಾಗಿಇವರನ್ನೇ ಶ್ರೀಮಠದ ಕರ್ತೃಗಳನ್ನಾಗಿ ಹೆಸರಿಸಲಾಗಿದೆ. ಈಗಿನ ಮಠದಲ್ಲಿ ಇವರೂಸೇರಿದಂತೆ ಇವರ ಪೂರ್ವದಲ್ಲಿ ಅಧಿಕಾರ ನಡೆಸಿದ್ದ (ಉಣ್ಣೆ ಮಠದಲ್ಲಿ) ಶ್ರೀ ಶಿವಲಿಂಗಮಹಾಸ್ವಾಮಿಗಳು ಹಾಗೂ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಗದ್ದುಗೆಗಳನ್ನುಕಾಣಬಹುದಾಗಿದ್ದು. ಊರ ಮಧ್ಯಭಾಗದ ಉಣ್ಣೆಮಠದಲ್ಲಿ ಅಲ್ಲಿನ ಕರ್ತೃಗುರುಗಳಾದ ಶ್ರೀಮ.ನಿ.ಪ್ರ. ಕಪನಂಜೇಶ್ವರ ಸ್ವಾಮಿಗಳ ಗದ್ದುಗೆಯನ್ನು ಕಾಣಬಹುದು.ಪ್ರಸ್ತುತ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದು, ಈ ಮಠದ ಜೊತೆಗೆ ತುಮಕೂರುತಾಲ್ಲೂಕು ಚಿಕ್ಕತೊಟ್ಲುಕೆರೆಯ ಮಠದ ಜವಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಶ್ರೀ ಬಣ್ಣದಮಠಕ್ಕೆ ಹಾವೇರಿ ಜಿಲ್ಲೆ ಹಂದಿಗನೂರಿನ ವಿರಕ್ತಮಠ ಶಾಖಾ ಮಠವಾಗಿದ್ದು ಇಲ್ಲಿನಮಠದಿಂದಲೇ ಆ ಮಠವನ್ನು ಅಭಿವೃದ್ದಿಪಡಿಸಲಾಗುತ್ತಿದೆ.
Swamiji
Swamiji Name :
ಶ್ರೀ. ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು
Date of Birth :
19-02-1947
Place :
ಸಾಸನೂರು, ಬಸವನಬಾಗೇವಾಡಿ ತಾ||
Programs
ಕಾರ್ತಿಕ ಮಾಸದಲ್ಲಿ ಒಂದು ವಾರ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶಿವರಾತ್ರಿಯಲ್ಲಿ ಸಾಮೂಹಿಕ ಲಿಂಗ ಪೂಜೆ.
ಬಸವ ಜಯಂತಿಯಲ್ಲಿ ಮೆರವಣಿಗೆ.
ಯುಗಾದಿಯಲ್ಲಿ ವಿಶೇಷ ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ವಿಶೇಷ ಕಾರ್ಯಕ್ರಮಗಳು
Photos
Full Address Kannada
ಶ್ರೀ ಬಣ್ಣದ ಮಠ (ಚೌಕಿ ಮಠ)
ಜೋ ಸರ್ಕಲ್, ಶಿರಸಿ - 581404
ಶಿರಸಿ ತಾ|| ಉತ್ತರ ಕನ್ನಡ ಜಿ||